ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ವಿಶ್ವಕಪ್‌ ಹೀರೋ ಬೆನ್ ಸ್ಟೋಕ್ಸ್ ಬಳಿ ಇರುವ ಆಸ್ತಿಯ ಮೊತ್ತ ಎಷ್ಟು?

Ben Stokes Retirement: England all rounder Ben Stokess net worth in rupees

ಮೂಲತಃ ನ್ಯೂಜಿಲೆಂಡ್‌ನ ಆಟಗಾರನಾದ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ತನ್ನನ್ನು ತಾನು ಗುರುತಿಸಿಕೊಂಡದ್ದು ಇಂಗ್ಲೆಂಡ್ ತಂಡದ ಮೂಲಕ. 2011ರ ಆಗಸ್ಟ್ 25ರಂದು ಐರ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡ ಬೆನ್ ಸ್ಟೋಕ್ಸ್ ನಂತರ ತಂಡದ ಪ್ರಮುಖ ಆಟಗಾರನಾಗಿ ಖಾಯಂ ಸದಸ್ಯನಾಗಿಬಿಟ್ಟರು.

ಇಂಗ್ಲೆಂಡ್ ಪ್ರವಾಸ ಆಯ್ತು, ವಿಂಡೀಸ್ ಪ್ರವಾಸ ಶುರು; ವೆಸ್ಟ್ ಇಂಡೀಸ್‌ಗೆ ಯಾವಾಗ ಹಾರಲಿದೆ ಧವನ್ ಪಡೆ?ಇಂಗ್ಲೆಂಡ್ ಪ್ರವಾಸ ಆಯ್ತು, ವಿಂಡೀಸ್ ಪ್ರವಾಸ ಶುರು; ವೆಸ್ಟ್ ಇಂಡೀಸ್‌ಗೆ ಯಾವಾಗ ಹಾರಲಿದೆ ಧವನ್ ಪಡೆ?

ಇಯಾನ್ ಮಾರ್ಗನ್ ನಾಯಕತ್ವದ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಟಗಾರನಾಗಿ ತಂಡಕ್ಕೆ ಹಲವು ಸರಣಿ ಹಾಗೂ ಟೂರ್ನಿಗಳಲ್ಲಿ ಆಪದ್ಬಾಂಧವನಾಗಿ ಮಿಂಚಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪಾಲಿನ ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ. ಹೌದು, 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 98 ಎಸೆತಗಳಲ್ಲಿ ಅಜೇಯ 84 ರನ್ ಬಾರಿಸಿದ್ದ ಬೆನ್ ಸ್ಟೋಕ್ಸ್ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

IND vs ENG: ರಿಷಭ್ ಪಂತ್‌ಗೆ ಪಂದ್ಯಶ್ರೇಷ್ಠ ಕೊಟ್ಟದ್ದು ಮೋಸ, ಪ್ರಶಸ್ತಿ ಈತನಿಗೆ ಸಿಗಬೇಕಿತ್ತು!IND vs ENG: ರಿಷಭ್ ಪಂತ್‌ಗೆ ಪಂದ್ಯಶ್ರೇಷ್ಠ ಕೊಟ್ಟದ್ದು ಮೋಸ, ಪ್ರಶಸ್ತಿ ಈತನಿಗೆ ಸಿಗಬೇಕಿತ್ತು!

ಹೀಗೆ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವಲ್ಲಿ ಬೃಹತ್ ಪಾತ್ರ ನಿರ್ವಹಿಸಿದ್ದ ಬೆನ್ ಸ್ಟೋಕ್ಸ್ ಇಂದು ( ಜುಲೈ 18 ) ಸಾಮಾಜಿಕ ಜಾಲತಾಣದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದರು. ಇತ್ತೀಚೆಗಷ್ಟೇ ಟೆಸ್ಟ್ ತಂಡದ ನಾಯಕತ್ವವನ್ನು ಸ್ವೀಕರಿಸಿರುವ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ಮತ್ತು ಟಿ ಟ್ವೆಂಟಿ ಕ್ರಿಕೆಟ್‍ನತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದಾಗಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಹೀಗೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಡರ್ನ್ ಡೇಸ್ ಲೆಜೆಂಡ್ ಬೆನ್ ಸ್ಟೋಕ್ಸ್ ಅವರ ಬಳಿ ಇರುವ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಎಂಬುದರ ಕುರಿತಾದ ಮಾಹಿತಿ ಮುಂದೆ ಓದಿ.

ಬೆನ್ ಸ್ಟೋಕ್ಸ್ ಆಸ್ತಿಯ ಮೌಲ್ಯ

ಬೆನ್ ಸ್ಟೋಕ್ಸ್ ಆಸ್ತಿಯ ಮೌಲ್ಯ

1991ರ ಜೂನ್ 4ರಂದು ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿ ಜನಿಸಿದ ಬೆನ್ ಸ್ಟೋಕ್ಸ್ 2011ರಿಂದ ಇಂಗ್ಲೆಂಡ್ ತಂಡದ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ. ಆ್ಯಶಸ್ ಸರಣಿ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ತಂಡ ಯಶಸ್ವಿಯಾಗಿ ಹೊರಹೊಮ್ಮುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೆನ್ ಸ್ಟೋಕ್ಸ್ ಹಿಂದಿನಿಂದಲೂ ಸಹ ಕ್ರಿಕೆಟ್ ಜಗತ್ತಿನಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸುವುದರ ಜತೆಗೆ ಜಾಹೀರಾತು ಮತ್ತು ಇತರೆ ಆದಾಯಗಳಿಂದ ಒಳ್ಳೆಯ ಹಣವನ್ನು ಕೂಡ ಸಂಪಾದಿಸಿದ್ದಾರೆ. ಸಿಎ ನಾಲೆಡ್ಜ್ ಡಾಟ್ ಕಾಮ್ ಎಂಬ ವೆಬ್ ತಾಣ ವರದಿ ಮಾಡಿರುವ ಪ್ರಕಾರ ಬೆನ್ ಸ್ಟೋಕ್ಸ್ ವರ್ಷವೊಂದಕ್ಕೆ ಅಂದಾಜು 1 ಮಿಲಿಯನ್ ಡಾಲರ್ ಆದಾಯವನ್ನು ಪಡೆಯುತ್ತಿದ್ದು, ಒಟ್ಟಾರೆ 11 ಮಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಭಾರತೀಯ ರೂಪಾಯಿಗಳಲ್ಲಿ ಬೆನ್ ಸ್ಟೋಕ್ಸ್ ಅವರ ಬಳಿ ಇರುವ ಆಸ್ತಿಯ ಮೊತ್ತ ಬರೋಬ್ಬರಿ 88,01,70,500 ರೂಪಾಯಿಗಳು.

ಬೆನ್ ಸ್ಟೋಕ್ಸ್ ಏಕದಿನ ಅಂಕಿ ಅಂಶ

ಬೆನ್ ಸ್ಟೋಕ್ಸ್ ಏಕದಿನ ಅಂಕಿ ಅಂಶ

ಬೆನ್ ಸ್ಟೋಕ್ಸ್ 104 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, 89 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 2919 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 3 ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿರುವ ಬೆನ್ ಸ್ಟೋಕ್ಸ್ ಗಳಿಸಿರುವ ಅತಿ ಹೆಚ್ಚು ರನ್ 102*. ಹಾಗೂ 87 ಏಕದಿನ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಸ್ಟೋಕ್ಸ್ 74 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.

ಗೆದ್ದ ಖುಷಿಗೆ ಹಿಟ್ ಮ್ಯಾನ್ ಮೇಲೆ ಶಾಂಪೇನ್ ಚಿಮ್ಮಿಸಿದ ವಿರಾಟ್!! ರೋಹಿತ್ ಮಾಡಿದ್ದೇನು? | *Cricket | OneIndia
ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯ

ಬೆನ್ ಸ್ಟೋಕ್ಸ್ ತಾವು ಆಡಲಿರುವ ಅಂತಿಮ ಏಕದಿನ ಪಂದ್ಯ ಯಾವುದು ಎಂಬುದನ್ನು ಕೂಡ ಬಹಿರಂಗಪಡಿಸಿದ್ದು, ಜುಲೈ 19ರ ಮಂಗಳವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಂತಿಮವಾಗಿ ಇಂಗ್ಲೆಂಡ್ ಪರ ಕಣಕ್ಕಿಳಿಯಲಿದ್ದಾರೆ.

Story first published: Tuesday, July 19, 2022, 10:32 [IST]
Other articles published on Jul 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X