ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸ್ ಬಾರಿಸಲು ತಿಣುಕಾಡುತ್ತಿರುವ ದುಬಾರಿ ಕ್ರಿಕೆಟರ್ ಸ್ಟೋಕ್ಸ್

ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಲೀಗ್ ನಲ್ಲಿ ಆಡುವ ಆಟಗಾರರಿಗೂ ಕೈ ತುಂಬಾ ಸಂಭಾವನೆ ಸಿಗುತ್ತದೆ. ಆದರೆ ದುಬಾರಿ ಆಟಗಾರರ ಪೈಕಿ ಅನೇಕರು ಪಡೆಯುವ ಮೊತ್ತಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ಸಫಲರಾಗುವುದಿಲ್ಲ.

ಐಪಿಎಲ್ 2020ರಲ್ಲಿ ಇನ್ನೂ ಲಯ ಕಂಡುಕೊಳ್ಳಲು ತಿಣುಕಾಡುತ್ತಿರುವ ಸ್ಟಾರ್ ಕ್ರಿಕೆಟರ್ ಗಳ ಬಗ್ಗೆ ಮೈಖೇಲ್ ಕನ್ನಡದಲ್ಲಿ ಈಗಾಗಲೇ ಬರೆಯಲಾಗಿದೆ. ಈಗ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಗ್ಗೆ ಓದಿ..

ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್

ಪ್ರತಿ ಫ್ರಾಂಚೈಸಿ ಕೂಡಾ ಆಟಗಾರರ ಮೇಲೆ ಭಾರಿ ಮೊತ್ತ ಹೂಡಿಕೆ ಮಾಡಿ, ಅದೇ ರೀತಿ ಪ್ರತಿಫಲ ನಿರೀಕ್ಷಿಸುತ್ತದೆ. ಆದರೆ, ಎಷ್ಟೋ ಬಾರಿ ಹರಾಜಿನಲ್ಲಿ ಕೋಟ್ಯಂತರ ರುಪಾಯಿ ಕೊಟ್ಟು ಖರೀದಿಸಿದ ಆಟಗಾರರೇ ಫ್ಲಾಪ್ ಶೋ ನೀಡುತ್ತಾರೆ.

ಇಂಗ್ಲೆಂಡಿನ ಸ್ಟಾರ್ ಆಲ್ ರೌಂಡರ್

ಇಂಗ್ಲೆಂಡಿನ ಸ್ಟಾರ್ ಆಲ್ ರೌಂಡರ್

ನ್ಯೂಜಿಲೆಂಡಿನ ಜನಿಸಿರುವ ಇಂಗ್ಲೆಂಡ್ ಪರ ಆಡುವ ಬೆನ್ ಸ್ಟೋಕ್ಸ್ ಅವರು ಸ್ಟಾರ್ ಆಲ್ ರೌಂಡರ್ ಆಗಿ ಬೆಳೆದಿದ್ದಾರೆ. ಸ್ಫೋಟಕ ಎಡಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ವೇಗದ ಬೌಲರ್ ಆಗಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ವಿಶ್ವಕಪ್ 2019ರಲ್ಲಿ ಗೆಲ್ವು, ಆಷ್ಯಸ್ ಸರಣಿಯಲ್ಲಿ ಶತಕ ಸದಾ ನೆನಪಲ್ಲಿ ಉಳಿದಿರುತ್ತದೆ. ಆದರೆ ಈ ಬಾರಿ ಐಪಿಎಲ್ ಗೆ ಬರುವ ಮುನ್ನ ಕುಟುಂಬದೊಡನೆ ಕಾಲ ಕಳೆದು ಬಂದಿದ್ದಾರೆ. ಮೈದಾನದಲ್ಲಿ ಅಭ್ಯಾಸ ಕಡಿಮೆಯಾಗಿದೆ.

ಐಪಿಎಲ್ ನಲ್ಲಿ ಹೇಗಿದೆ ಪ್ರದರ್ಶನ

ಐಪಿಎಲ್ ನಲ್ಲಿ ಹೇಗಿದೆ ಪ್ರದರ್ಶನ

2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವು 14.5 ಕೋಟಿ ರು ಗಳಿಗೆ ಖರೀದಿಸಿತ್ತು. ಮೊದಲ ಸೀಸನ್ ನಲ್ಲಿ 103 ಅಜೇಯ ರನ್ , 3/18 ಬೌಲಿಂಗ್ ಪ್ರದರ್ಶನದೊಂದಿಗೆ ಮಿಂಚಿದ್ದರು. 2017ರಲ್ಲಿ 316 ರನ್, 2018ರಲ್ಲಿ 196, 2019ರಲ್ಲಿ 123 ರನ್ ಮಾತ್ರ ಗಳಿಸಿದರು. 142 ಸ್ಟ್ರೈಕ್ ರೇಟ್ ಇದ್ದಿದ್ದು 106ಕ್ಕೆ ಇಳಿದಿದೆ.

ಟ್ರೋಲಿಗರ ಬಾಯ್ಮುಚ್ಚಿಸಿದ ರಾಜ, ಸಿರಾಜನ ಕ್ರಿಕೆಟ್ ಬದುಕಿನ ಚಿತ್ರಣ

ಸಿಕ್ಸ್ ಬಾರಿಸಲು ಹೆಣಗಾಡುತ್ತಿರುವ ಸ್ಟೋಕ್ಸ್

ಸಿಕ್ಸ್ ಬಾರಿಸಲು ಹೆಣಗಾಡುತ್ತಿರುವ ಸ್ಟೋಕ್ಸ್

2020ರ ಐಪಿಎಲ್ ನಲ್ಲಿ ಕೊಂಚ ತಡವಾಗಿ ಎಂಟ್ರಿ ಕೊಟ್ಟ ಬೆನ್ ಸ್ಟೋಕ್ಸ್ 5 ಪಂದ್ಯಗಳಿಂದ 103 ಎಸೆತಗಳನ್ನು ಎದುರಿಸಿದ್ದು ಇನ್ನೂ ಒಂದು ಸಿಕ್ಸರ್ ಬಾರಿಸಿಲ್ಲ. 14 ಬೌಂಡರಿ ಗಳಿಸಿದ್ದರೂ 22ರನ್ ಸರಾಸರಿ ದಾಟಿಲ್ಲ, 106 ಸ್ಟ್ರೈಕ್ ರೇಟ್ ದಾಟಿಲ್ಲ. 110ರನ್ ಹೊಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ.

ಸಿಕ್ಸರ್ ಬಾರಿಸುವಲ್ಲಿ ಎತ್ತಿದ ಕೈ

ಸಿಕ್ಸರ್ ಬಾರಿಸುವಲ್ಲಿ ಎತ್ತಿದ ಕೈ

123 ಟಿ20 ಪಂದ್ಯಗಳಲ್ಲಿ 102 ಸಿಕ್ಸರ್ ಬಾರಿಸಿರುವ ಸ್ಟೋಕ್ಸ್ ಸುಲಲಿತವಾಗಿ ಹೊಡೆತ ಬಾರಿಸಿ ರನ್ ಗಳಿಸುವ ಮೂಲಕ ಪಂದ್ಯದ ಗತಿ ಬದಲಾಯಿಸಬಲ್ಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಸೀಸನ್ ನಲ್ಲಿ 9 ಸಿಕ್ಸ್ ಮಾತ್ರ ಬಾರಿಸಿದ್ದರು. ಈ ಬಾರಿ ತಮ್ಮ ಆಟದ ಶೈಲಿಯನ್ನು ಯುಎಇ ಮೈದಾನಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳದೆ ಭಾರಿ ಹೊಡೆತಕ್ಕೆ ಯತ್ನಿಸಿ ಮತ್ತೆ ಮತ್ತೆ ವಿಫಲರಾಗುತ್ತಿದ್ದಾರೆ. ಮ್ಯಾಕ್ಸ್ ವೆಲ್ ಕೂಡಾ 87 ಎಸೆತ ಎದುರಿಸಿ ಇನ್ನೂ ಸಿಕ್ಸ್ ಸಿಡಿಸಿಲ್ಲ. ಇಬ್ಬರೂ ಆಟಗಾರರು ಪ್ರತಿ ಎಸೆತವನ್ನು ಬಲ ಬಿಟ್ಟು ಹೊಡೆಯಲು ಹೋಗುವ ಬದಲು ಚೆಂಡಿಗೆ ತಕ್ಕಂತೆ ನಿಧಾನವಾಗಿ ಆಡಿ ಲಯ ಕಂಡುಕೊಳ್ಳಲಿ ಎಂದು ಕಾಮೆಂಟೆಟರ್ಸ್ ಕೂಡಾ ಹೇಳಿದ್ದಾರೆ.

ಕ್ರಿಕೆಟ್ ಮರೆತಂತೆ ಆಡುವ ಜಾಧವ್ ತಂಡಕ್ಕೆ ಆಯ್ಕೆ ಮಾಡಿದ್ದೇಕೆ?

Story first published: Friday, October 23, 2020, 16:05 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X