'2019ರ ವಿಶ್ವಕಪ್‌ ಸೂಪರ್ ಓಪರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು'

ಲಂಡನ್: ಇಂಗ್ಲೆಂಡ್‌ನಲ್ಲಿ ನಡೆದಿದ್ದ 2019ರ ವಿಶ್ವಕಪ್‌ನ ಫೈನಲ್‌ ಪಂದ್ಯ ವಿಶ್ವಕಪ್ ಇತಿಹಾಸದಲ್ಲೇ ಅತೀ ವಿಶೇಷ-ಅಪರೂಪದ ಪಂದ್ಯವಾಗಿ ಗಮನ ಸೆಳೆದಿತ್ತು. ವಿಶ್ವಕಪ್ ರೋಚಕ ಕ್ಷಣವನ್ನು, ಅಂದಿನ ಘಟನಾವಳಿಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿರುವ ನಿಕ್ ಹೌಲ್ಟ್ ಮತ್ತು ಸ್ಟೀವ್ ಜೇಮ್ಸ್ ಪಂದ್ಯದ ವೇಳೆಯ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಜುಲೈ 14ರ ಇವತ್ತಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2019ರಲ್ಲಿ, ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಮಣಿಸುವ ಮೂಲಕ ಇಂಗ್ಲೆಂಡ್ ತಂಡ ಐತಿಹಾಸಿಕ ವಿಶ್ವಕಪ್ ಜಯಿಸಿತ್ತು. ಆ ಫೈನಲ್ ಪಂದ್ಯದಲ್ಲಿ 50 ಓವರ್‌ಗಳ ಫಲಿತಾಂಶ ಸಮಬಲಗೊಂಡಾಗ ಸೂಪರ್ ಓವರ್ ನಡೆಸಲಾಯ್ತು.

ಕಮ್‌ಬ್ಯಾಕ್‌ ಮಾಡಲಿದ್ದಾರೆ 2009ರ ಇಂಡಿಯನ್ ಪ್ರೀಮಿಯರ್ ಲೀಗ್ ಹೀರೋ

ಸೂಪರ್ ಓವರ್‌ ಕೂಡ ಸಮಬಲಗೊಂಡಾಗ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್‌ ಅನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಇಂಗ್ಲೆಂಡ್ ವಿಶ್ವ ಚಾಂಪಿಯನ್ಸ್ ಆಗಿ ಇಂದಿಗೆ ಒಂದು ವರ್ಷ ತುಂಬುತ್ತಿರುವಾಗ, ಆವತ್ತಿನ ಇಂಗ್ಲೆಂಡ್ ಗೆಲುವಿನ ಹಿಂದಿನ ಕತೆಯನ್ನು ಲೇಖಕರಾದ ಹೌಲ್ಟ್ ಮತ್ತು ಜೇಮ್ಸ್ ಬಿಚ್ಚಿಟ್ಟಿದ್ದಾರೆ.

ಅತೀ ಅಪರೂಪದ, ಬಲು ರೋಚಕ ವಿಶ್ವಕಪ್ ಫೈನಲ್ ಪಂದ್ಯದ ವೀಡಿಯೋ!

'ಮಾರ್ಗನ್ಸ್ ಮೆನ್: ದ ಇನ್‌ಸೈಡ್ ಸ್ಟೋರಿ ಆಫ್ ಇಂಗ್ಲೆಂಡ್ಸ್ ರೈಸ್ ಫ್ರಮ್ ಕ್ರಿಕೆಟ್ ವರ್ಲ್ಡ್‌ಕಪ್ ಹ್ಯುಮಿಲಿಯೇಶನ್ ಟು ಗ್ಲೋರಿ' ಕೃತಿ ಬರೆದಿರುವ ನಿಕ್ ಹೌಲ್ಟ್ ಮತ್ತು ಸ್ಟೀವ್ ಜೇಮ್ಸ್, ವಿಶ್ವಕಪ್ ಸೂಪರ್ ಓವರ್‌ ಕ್ಷಣದ ಝಲಕ್ ಕೊಟ್ಟಿದ್ದಾರೆ.

ಡ್ರೆಸ್ಸಿಂಗ್ ರೂಮ್‌ವರೆಗೂ ಬಂದಿದ್ದೆವು

ಡ್ರೆಸ್ಸಿಂಗ್ ರೂಮ್‌ವರೆಗೂ ಬಂದಿದ್ದೆವು

'ಸೂಪರ್ ಓವರ್‌ ವೇಳೆ 27,000 ಬೆಂಬಲಿಗರು, ದೂರದರ್ಶನ ಕೆಮರಾಗಳ ಕಣ್ಣುಗಳು ಮೈದಾನದಲ್ಲಿದ್ದ ಆಟಗಾರರನ್ನೇ ಬೆನ್ನಟ್ಟುತ್ತಿದ್ದವು. ಸೂಪರ್ ಓವರ್‌ ನಡುವಿನ ಆ ಸಣ್ಣ ಬಿಡುವಿನಲ್ಲಿ ನಾವು ಇಂಗ್ಲೆಂಡ್ ಆಟಗಾರರ ಬೆನ್ನು ಹಿಡಿದು ಡ್ರೆಸ್ಸಿಂಗ್ ರೂಮ್‌ವರೆಗೂ ಬಂದಿದ್ದೆವು,' ಎಂದು ನಿಕ್ ಹೌಲ್ಟ್ ಮತ್ತು ಸ್ಟೀವ್ ಜೇಮ್ಸ್ ತಮ್ಮ ಪುಸ್ತಕದಲ್ಲಿ ವಿಶ್ವಕಪ್ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.

ಎಲ್ಲರಲ್ಲೂ ನರ್ವಸ್‌ನೆಸ್ ತುಂಬಿತ್ತು

ಎಲ್ಲರಲ್ಲೂ ನರ್ವಸ್‌ನೆಸ್ ತುಂಬಿತ್ತು

'ಬೆನ್ ಸ್ಟೋಕ್ಸ್ ಲಾರ್ಡ್ಸ್ ಮೈದಾನದಲ್ಲಿ ಸಾಕಷ್ಟುಬಾರಿ ಆಡಿದ್ದರು. ಅವರಿಗೆ ಸ್ಟೇಡಿಯಂನ ಮೂಲೆ ಮೂಲೆಯೂ ಗೊತ್ತು. ಅಲ್ಲಿ ಏನೆಲ್ಲಾ ಹುಚ್ಚಾಟ ಮಾಡಬಹುದು ಅನ್ನೋದೂ ಗೊತ್ತು. ಇತ್ತ ನಾಯಕ ಇಯಾನ್ ಮಾರ್ಗನ್ ನರ್ವಸ್‌ನೆಸ್‌ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಆಗ ಬೆನ್ ಸ್ಟೋಕ್ಸ್ ಒಂದು ಕ್ಷಣದ ಶಾಂತತೆಗೆ ಮುಂದಾದದರು,' ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಸಿಗರೇಟ್ ಸುಟ್ಟ ಸ್ಟೋಕ್ಸ್

ಸಿಗರೇಟ್ ಸುಟ್ಟ ಸ್ಟೋಕ್ಸ್

'ಆ ಹೊತ್ತಿನಲ್ಲಿ ಬೆನ್ ಸ್ಟೋಕ್ಸ್ ಕೊಳೆ ಮತ್ತು ಬೆವರಿನಿಂದ ತುಂಬಿದ್ದರು. ಅವರು ಸುಮಾರು 2 ಗಂಟೆ 27 ನಿಮಿಗಳ ಕಾಲ ತೀವ್ರ ಟೆನ್ಶನ್‌ನ ವಿರುದ್ಧ ಹೋರಾಡುತ್ತಿದ್ದರು. ಹಾಗಾದರೆ ಆ ಟೆನ್ಶನ್‌ನಿಂದ ಹೊರ ಬರಲು ಅವರು ಏನು ಮಾಡಿರಬಹುದು? ಸ್ಟೋಕ್ಸ್, ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್‌ನ ಹಿಂಭಾಗಕ್ಕೆ ಹೋದರು. ಬಾತ್‌ರೂಮ್‌ನತ್ತ ನಡೆದರು. ಅಲ್ಲಿ ಸಿಗರೇಟು ಹತ್ತಿಸಿ ಕೆಲ ನಿಮಿಷ ತನ್ನದೇ ಕ್ಷಣ ಕಳೆದರು,' ಎಂದು ನಿಕ್ ಹೌಲ್ಟ್ ಮತ್ತು ಸ್ಟೀವ್ ಜೇಮ್ಸ್ ವಿವರಿಸಿದ್ದಾರೆ.

ಸೂಪರ್ ಓವರ್‌ ಕೂಡ ಸಮಬಲ!

ಸೂಪರ್ ಓವರ್‌ ಕೂಡ ಸಮಬಲ!

ಆವತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ತಂಡ, ಹೆನ್ರಿ ನಿಕೋಲ್ಸ್ 55, ನಾಯಕ ಕೇನ್ ವಿಲಿಯಮ್ಸನ್ 30, ಟಾಮ್ ಲ್ಯಾಥಮ್ 47 ರನ್‌ನೊಂದಿಗೆ 50 ಓವರ್‌ಗೆ 8 ವಿಕೆಟ್ ಕಳೆದು 241 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜಾನಿ ಬೇರ್ಸ್ಟೋವ್ 36, ಬೆನ್ ಸ್ಟೋಕ್ಸ್ ಅಜೇಯ 84, ಜೋಸ್ ಬಟ್ಲರ್ 59, ಜೇಸನ್ ರಾಯ್ 17 ರನ್‌ನೊಂದಿಗೆ 50 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಸೂಪರ್‌ ಓವರ್‌ನಲ್ಲೂ ಎರಡೂ ತಂಡಗಳು 16 ರನ್ ಗಳಿಸಿ ಸಮಬಲ ಸಾಧಿಸಿದ್ದವು. ಮತ್ತೆ ಬೌಂಡರಿ ಕೌಂಟ್ (ಸಿಕ್ಸ್/ಫೋರ್) ಆಧಾರದಲ್ಲಿ ಇಂಗ್ಲೆಂಡ್ (26) ಜಯ ಸಾಧಿಸಿತ್ತು. ನ್ಯೂಜಿಲೆಂಡ್ 17 ಬೌಂಡರಿಗಳನ್ನು ಬಾರಿಸಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, July 14, 2020, 15:05 [IST]
Other articles published on Jul 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X