ಆಶಸ್ ಸರಣಿಯಿಂದಲೂ ಬೆನ್ ಸ್ಟೋಕ್ಸ್ ಹಿಂದಕ್ಕೆ ಸರಿಯುವ ಸಾಧ್ಯತೆ: ವರದಿ

ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಸದ್ಯ ಎಲ್ಲಾ ರೀತಿಯ ಕ್ರಿಕೆಟ್ ಚಟುವಟಿಕೆಗಳಿಂದ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ. ಅನಿರ್ದಿಷ್ಟಾವಧಿಗೆ ಬೆನ್ ಸ್ಟೋಕ್ಸ್ ವಿಶ್ರಾಂತಿ ಪಡೆದುಕೊಂಡಿದ್ದು ಇದು ಮುಂಬರುವ ಆಶಸ್ ಸರಣಿಯಲ್ಲಿಗೂ ವಿಸ್ತರಿಸುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿಯ ಪ್ರತಿಷ್ಟಿತ ಆಶಸ್ ಸರಣಿಗೆ ಬೆನ್ ಸ್ಟೋಕ್ಸ್ ಅಲಭ್ಯವಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ.

ಮಾನಸಿಕ ಆರೋಗ್ಯದ ಕಾರಣಕ್ಕೆ ವಿಶ್ರಾಂತಿಯನ್ನು ಪಡೆದುಕೊಂಡಿರುವ ಬೆನ್ ಸ್ಟೋಕ್ಸ್ ಮತ್ತಷ್ಟು ಕಾಲ ವಿಶ್ರಾಂತಿಯನ್ನು ಬಯಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧಧ ಆಶಸ್ ಟೆಸ್ಟ್ ಸರಣಿಯಿಂದ ಬೆನ್ ಸ್ಟೋಕ್ಸ್ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಐಪಿಎಲ್: ನಾಯಕ ಯಾರು ಎಂಬ ಗೊಂದಲಕ್ಕೆ ತೆರೆ ಎಳೆದ ಡೆಲ್ಲಿ ಕ್ಯಾಪಿಟಲ್ಸ್ಐಪಿಎಲ್: ನಾಯಕ ಯಾರು ಎಂಬ ಗೊಂದಲಕ್ಕೆ ತೆರೆ ಎಳೆದ ಡೆಲ್ಲಿ ಕ್ಯಾಪಿಟಲ್ಸ್

ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ಅಂತ್ಯವಾದ ಭಾರತ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನವೇ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್‌ನಿಂದಲೂ ಹೊರಗುಳಿದಿರುವ ಬೆನ್ ಸ್ಟೋಕ್ಸ್ ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿದಿದ್ದಾರೆ.

ಟೀಮ್ ಇಂಡಿಯಾಗೆ ಈ ಆಟಗಾರರು ನೂತನ ನಾಯಕ ಮತ್ತು ಉಪನಾಯಕರಾಗಬೇಕೆಂದು ಸೂಚಿಸಿದ ಕೊಹ್ಲಿಟೀಮ್ ಇಂಡಿಯಾಗೆ ಈ ಆಟಗಾರರು ನೂತನ ನಾಯಕ ಮತ್ತು ಉಪನಾಯಕರಾಗಬೇಕೆಂದು ಸೂಚಿಸಿದ ಕೊಹ್ಲಿ

ಆರೋಗ್ಯದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಸ್ಟೋಕ್ಸ್: ಇನ್ನು 'ದಿ ಟೆಲಿಗ್ರಾಫ್' ವರದಿಯ ಪ್ರಕಾರ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಹಾಗಿದ್ದರೂ ಕೂಡ ಮುಂದಿನ ಆಶಸ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾರಣದಿಂದಾಗಿ ಅಲ್ಲಿ ಉಂಟಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಆಸ್ಟ್ರೇಲಿಯಾದ ಕಠಿಣ ಕ್ವಾರಂಟೈನ್ ನಿಯಮಗಳ ಕಾರಣದಿಂದಾಗಿ ಸ್ಟೋಕ್ಸ್ ಆಸಿಸ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?ಟಿ20 ವಿಶ್ವಕಪ್‌ ಸೋತ್ರೆ ಏಕದಿನ ನಾಯಕತ್ವವೂ ತ್ಯಜಿಸುತ್ತಾರಾ ವಿರಾಟ್ ಕೊಹ್ಲಿ!?

ಯಾವಾಗ ವಾಪಾಸಾಗಬಹುದು ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಬೆನ್ ಸ್ಟೋಕ್ಸ್ ಯಾವಾಗ ಕ್ರಿಕೆಟ್ ತಂಡಕ್ಕೆ ಮರಳ ಬಹುದು ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಆದರೆ ಮುಂದಿನ ವರ್ಷಾರಂಭದಲ್ಲಿ ನಡೆಯುವ ವೆಸ್ಟ್ ಇಂಡೀಸ್ ಪ್ರವಾಸದ ವೇಳೆಗೆ ಬೆನ್ ಸ್ಟೋಕ್ಸ್ ತಂಡಕ್ಕೆ ವಾಪಾಸಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಐದು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ.

ಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರುಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರು

ಬೆರಳಿನ ಗಾಯದಿಂದ ಸಂಪೂರ್ಣ ಚೇತರಿಕೆಯಾಗಿಲ್ಲ: ಇನ್ನು ಬೆನ್ ಸ್ಟೋಕ್ಸ್ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ವಿಶ್ರಾಂತಿ ಪಡೆಯಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವರ ಬೆರಳಿನ ಗಾಯ. ಇದೇ ಕಾರಣದಿಂದಾಗಿ ಮೊದಲ ಚರಣದ ಐಪಿಎಲ್ ಪಂದ್ಯಗಳಿಂದ ಹೊರಗುಳಿಯುವಂತಾಗಿತ್ತು. ಈ ಬೆರಳಿನ ಗಾಯ ಇನ್ನು ಕೂಡ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ. ಹೀಗಾಗಿ ಬೆನ್ ಸ್ಟೋಕ್ಸ್ ತಮ್ಮ ವಿಶ್ರಾಂತುಯ ಅವಧಿಯನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ ಎನ್ನಲಾಗಿದೆ.

ಐಪಿಎಲ್‌ನಲ್ಲಿ ಫ್ಲಾಪ್ ಆದ 3 ಅಂತಾರಾಷ್ಟ್ರೀಯ ತಂಡದ ನಾಯಕರು ಇವರು!ಐಪಿಎಲ್‌ನಲ್ಲಿ ಫ್ಲಾಪ್ ಆದ 3 ಅಂತಾರಾಷ್ಟ್ರೀಯ ತಂಡದ ನಾಯಕರು ಇವರು!

ಇಂಗ್ಲೆಂಡ್‌ಗೆ ಭಾರೀ ಹಿನ್ನಡೆ: ನ್ಯೂಜಿಲೆಂಡ್ ಮೂಲದ ಆಲ್‌ರೌಂಡರ್ ಹೀಗೆ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ಹೊರಗುಳಿಯುತ್ತಿರುವುದು ಇಂಗ್ಲೆಂಡ್ ತಂಡದ ಪಾಲಿಗೆ ಭಾರೀ ಹಿನ್ನಡೆಯಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ ಎರಡು ವಿಭಾಗದಲ್ಲಿಯೂ ಅಮೋಘವಾಗಿ ಪ್ರದರ್ಶನ ನೀಡುವ ಸಾಮರ್ಥ್ಯಹೊಂದಿರುವ ಬೆನ್ ಸ್ಟೋಕ್ಸ್ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ಭಾರತ ವಿರುದ್ಧ ಟೆಸ್ಟ್ ಸಂದರ್ಭದಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಅಲಭ್ಯತೆ ಸಾಕಷ್ಟು ಕಾಡಿತ್ತು. ಈ ಬಾರಿಯ ಬೇಸಿಗೆಯಲ್ಲಿ ಇಂಗ್ಲೆಂಡ್ ತಂಡ ಆಡಿದ ಆರು ಟೆಸ್ಟ್ ಪಮದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಮೊದಲಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಇಂಗ್ಲೆಂಡ್ ಬಳಿಕ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ 2-1 ಅಂತರದಿಂದ ಹಿನ್ನಡೆಯನ್ನು ಕಂಡಿತ್ತು.

ಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳುಟಿ20 ನಾಯಕತ್ವಕ್ಕೆ ವಿರಾಟ್ ವಿದಾಯ: ರೋಹಿತ್ ಹೊರತು ಬೇರೆ ಆಯ್ಕೆ ಇಲ್ಲ ಎನ್ನುತ್ತಿವೆ ಈ ಅಂಕಿಅಂಶಗಳು

IPL ನಲ್ಲಿ 100 ಕೋಟಿ ಕ್ಲಬ್ ಸೇರಿ ಶೈನ್ ಆದ ಆಟಗಾರರು ಇವರೇ ನೋಡಿ | Oneindia Kannada

ಇನ್ನು ಸದ್ಯ ಇಂಗ್ಲೆಂಡ್ ತಂಡದ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದು ಅದಾದ ಬಳಿಕ ಮುಂದಿನ ತಿಂಗಳು ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲಿದ್ದಾರೆ. ಇದರ ಮಧ್ಯೆ ಪಾಕಿಸ್ತಾನದ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಕೂಡ ಆಯೋಜನೆ ಮಾಡಲಾಗಿದ್ದು ಈ ಸರಣಿಯ ಬಗ್ಗೆ ಈಗ ಅನುಮಾನಗಳು ಎದ್ದಿದೆ. ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಭದ್ರತಾ ಕಾರಣವನ್ನು ಮುಂದಿಟ್ಟು ದಿಢೀರ್ ಆಗಿ ಸರಣಿಯಿಂದ ಹಿಂದಕ್ಕೆ ಸರಿದ ಬಳಿಕ ಇಂಗ್ಲೆಂಡ್ ತಂಡವೂ ಕೂಡ ಈ ಸರಣಿಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇಂಗ್ಲೆಂಡ್ ಇನ್ನಷ್ಟೇ ಅಂತಿಮ ನಿರ್ಧಾರ ತಯೆಗೆದುಕೊಳ್ಳಬೇಕಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಗೆ ಇಂಗ್ಲೆಂಡ್‌ ತಂಡವನ್ನು ಅಕ್ಟೋಬರ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಲಭ್ಯತೆಯ ವಿಚಾರ ಅಧಿಕೃತವಾಗಿ ತಿಳಿದುಬರಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, September 17, 2021, 21:54 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X