ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭನ್ನೇರುಘಟ್ಟದ ಹುಲಿ ಮರಿಗೆ ಭಾರತದ ಸ್ಟ್ರಾರ್‌ ಸ್ಪ್ರಿಂಟರ್‌ ಹೆಸರು ನಾಮಕರಣ

tiger cub after ace sprinter Hima

ಬೆಂಗಳೂರು, ಜುಲೈ 29: ಬೆಂಗಳೂರಿನ ಭನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ರಾಯಲ್‌ ಬೆಂಗಾಲ್‌ ಹುಲಿ ಮರಿಗೆ ಭಾರತದ ಸ್ಟಾರ್‌ ಓಟಗಾರ್ತಿ ಹಿಮಾ ದಾಸ್‌ ಅವರ ಹೆಸರು ಇಡಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಡುವ ಭರವಸೆಯ ಓಟಗಾರ್ತಿ ಹಿಮಾ ದಾಸ್‌, ಇತ್ತೀಚೆಗಷ್ಟೇ ಯುರೋಪ್‌ನ ವಿವಿಧ ಭಾಗಗಳಲ್ಲಿ ನಡೆದ ಅಥ್ಲೆಟಿಕ್ಸ್‌ ಕೂಡಗಳಲ್ಲಿ ಪಾಲ್ಗೊಂಡು ಒಂದೇ ತಿಂಗಳ ಅವಧಿಯಲ್ಲಿ ಸತತ 5 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದರು.

ಶುಭಾಶಯ ಕೋರುವ ಭರದಲ್ಲಿ ಎಡವಟ್ಟು: ಸದ್ಗುರುಗೆ ಟ್ವೀಟ್ ಬಿಸಿ!ಶುಭಾಶಯ ಕೋರುವ ಭರದಲ್ಲಿ ಎಡವಟ್ಟು: ಸದ್ಗುರುಗೆ ಟ್ವೀಟ್ ಬಿಸಿ!

"ಭಾನುವಾರ ಅಂತಾರಾಷ್ಟ್ರೀಯ ಹುಲಿ ದಿನದಂದು ಭಾರತದ ಸ್ಟಾರ್‌ ಸ್ಪ್ರಿಂಟರ್‌ ಹಿಮಾ ದಾಸ್‌ ಅವರ ಸಾಧನೆಗೆ ಗೌರವ ಸೂಚಿಸುವ ಸಲುವಾಗಿ 6 ತಿಂಗಳ ರಾಯಲ್‌ ಬೆಂಗಾಲ್‌ ಹುಲಿಮರಿಗೆ ಅವರ ಹೆಸರಿಡಲಾಗಿದೆ," ಎಂದು ಮೃಗಾಲಯದ ಮುಖ್ಯಸ್ಥ ವಿಪಿನ್‌ ಸಿಂಗ್‌ ಹೇಳಿದ್ದಾರೆ.

19 ವರ್ಷದ ಯುವ ಪ್ರತಿಭೆ ಹಿಮಾದಾಸ್‌, ಕಳೆದ ವರ್ಷ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಪ್ರಾಗ್‌ನಲ್ಲಿ ನಡೆದ ಮೆತುಜಿ ಗ್ರ್ಯಾಂಡ್‌ ಪ್ರಿಕ್ಸ್‌ ಕೂಟದ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಕಳೆದ ಒಮದು ತಿಂಗಳ ಅವಧಿಯಲ್ಲಿ 5ನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

ಚಿನ್ನದ ಹುಡುಗಿ ಹಿಮಾ ದಾಸ್‌ಳ ಬೆನ್ನು ತಟ್ಟಿದ ಮೋದಿ, ತೆಂಡೂಲ್ಕರ್, ಪಂತ್ಚಿನ್ನದ ಹುಡುಗಿ ಹಿಮಾ ದಾಸ್‌ಳ ಬೆನ್ನು ತಟ್ಟಿದ ಮೋದಿ, ತೆಂಡೂಲ್ಕರ್, ಪಂತ್

ಇನ್ನು ಹಿಮಾ ಅವರ ಓಟದ ಸಾಧನೆಗಾಗಿ ಈ ಗಾಗಲೇ ಅವರನ್ನು 'ಧಿಂಗ್‌ ಎಕ್ಸ್‌ಪ್ರೆಸ್‌' ಎಂದೇ ಕರೆಯಲಾಗುತ್ತಿದೆ. ಅಸ್ಸಾಂನ ಗುವಾಹಟಿಯಿಂದ ಹಿಮಾ ಅವರ ತವರೂರು ಧಿಂಗ್‌ಗೆ ಸಾಗುವ ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಹಿಮಾ ದಾಸ್‌ ಅವರಿಗೆ ನಿಕ್‌ನೇಮ್‌ ಆಗಿ ನಾಮಕರಣ ಮಾಡಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಸಂಸ್ಥೆ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ವಿಶ್ವದಾದ್ಯಂತ ಇರುವ ಹುಲಿಗಳಲ್ಲಿ ಶೇ.75ರಷ್ಟು ಹುಲಿಗಳು ಭಾರತದಲ್ಲಿ (3000 ಅಂದಾಜು) ಇರುವುದಾಗಿ ಘೋಷಿಸಿವೆ. ಭಾರತದ ರಾಷ್ಟ್ರೀಯ ಪ್ರಾಣಿ ಆಗಿರುವ ಹುಲಿಯನ್ನು ಭನ್ನೇರುಘಟ್ಟದ ಜೈವಿಕ ಉದ್ಯಾನನದ ಸಫಾರಿಯಲ್ಲಿ ಕಾಣಬಹುದಾಗಿದೆ.

Story first published: Tuesday, July 30, 2019, 14:32 [IST]
Other articles published on Jul 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X