ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ ಕಡಿಮೆ ಬೆಲೆಗೆ ಹರಾಜಾಗಿ, ಭರ್ಜರಿ ಪರ್ಫಾಮೆನ್ಸ್ ನೀಡಿದ 6 ಆಟಗಾರರು

IPL

ವಿಶ್ವ ಕ್ರಿಕೆಟ್‌ನಲ್ಲಿ ಮನೋರಂಜನ್ ಕಾ ಬಾಪ್ ಎಂದೇ ಖ್ಯಾತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದೆಷ್ಟೋ ಯುವ ಆಟಗಾರರಿಗೆ ಭವ್ಯ ವೇದಿಕೆಯಾಗಿಬಿಟ್ಟಿದೆ. ಫಾರ್ಮ್ ಇಲ್ಲದ ಆಟಗಾರರು ಐಪಿಎಲ್‌ನಲ್ಲಿ ಮಿಂಚಿ ರಾಷ್ಟ್ರೀಯ ತಂಡಕ್ಕೆ ಮರು ಸೇರ್ಪಡೆಯಾಗಿರುವ ಉದಾಹರಣೆಯು ಇದೆ.

ಟಿ20 ವಿಶ್ವಕಪ್ ಬಳಿಕ ಸಾಕಷ್ಟು ಜನಪ್ರಿಯಗೊಂಡ ಟಿ20 ಟೂರ್ನಮೆಂಟ್ ಐಪಿಎಲ್‌ನಲ್ಲಿ ಹಲವು ರಾಷ್ಟ್ರಗಳ ಆಟಗಾರರು ಒಂದೆಡೆ ಸೇರುವುದೇ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ ಎನಿಸುವುದು. ಅಂತಹ ದೊಡ್ಡ ಚಮತ್ಕಾರ ಮಾಡುವ ತಾಕತ್ತು ಈ ಚುಟುಕು ಟೂರ್ನಮೆಂಟ್‌ ಹೊಂದಿದೆ.

ಐಪಿಎಲ್‌ನಲ್ಲಿ ಆಟಗಾರರ ಪ್ರದರ್ಶನ ಗಮನ ಒಂದೆಡೆಯಾದ್ರೆ, ಅವರು ಹರಾಜಿನಲ್ಲಿ ಬಿಕರಿ ಆಗುವ ಬೆಲೆಯು ನೋಡುಗರನ್ನ ಆಕರ್ಷಿಸುತ್ತದೆ. ಹರಾಜಿನ ಸಮಯದಲ್ಲಿ ಪ್ರೈಸ್ ಟ್ಯಾಗ್ ಸಹ ಕಾರ್ಯರೂಪಕ್ಕೆ ಬರುತ್ತದೆ. ಕೆಲವು ಆಟಗಾರರು ಹೆಚ್ಚು ಬೆಲೆ ಹೊಂದಿದ್ರೆ ಮತ್ತು ಕೆಲವರು ಕಡಿಮೆ ಮೌಲ್ಯವನ್ನು ಹೊಂದಿದ್ದಾರೆ.

ಪ್ರತಿ ಫ್ರಾಂಚೈಸಿಯು ಹರಾಜಿಗೆ ಹೋಗುವ ಮುನ್ನ ಆಟಗಾರರ ಖರೀದಿಗೆ ತನ್ನದೇ ಆದ ತಂತ್ರವನ್ನ ರೂಪಿಸಿಕೊಂಡು ತೆರಳುತ್ತದೆ. ಒಂದು ವೇಳೆ ಬಲಿಷ್ಠ ತಂಡವನ್ನ ರೂಪಿಸಲು ವಿಫಲಗೊಂಡರೆ ಆಗುವ ನಷ್ಟವು ಫ್ರಾಂಚೈಸಿಗೆ ತಿಳಿದಿರುತ್ತದೆ. ಏಕೆಂದರೆ ಅದರ ನೇರ ಪರಿಣಾಮ ಫಲಿತಾಂಶದ ಮೇಲೆ ಬೀಳುತ್ತದೆ.

ಕೆಲವೊಮ್ಮೆ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ್ರೂ, ಪರ್ಫಾಮೆನ್ಸ್ ಮಾತ್ರ ಸಾಧಾರಣವಾಗಿರುತ್ತದೆ. ಮತ್ತೆ ಕೆಲವರು ಆಟಗಾರರು ಕಡಿಮೆ ಬೆಲೆಗೆ ಹರಾಜಾದ್ರೂ ಪರ್ಫಾಮೆನ್ಸ್ ಅದ್ಭುತವಾಗಿರುತ್ತದೆ. ಹೀಗೆ ಐಪಿಎಲ್‌ನಲ್ಲಿ ಕಡಿಮೆ ಮೌಲ್ಯಕ್ಕೆ ತಂಡ ಸೇರಿಕೊಂಡು ಬೊಂಬಾಟ್ ಪ್ರದರ್ಶನ ನೀಡಿದ ಆಟಗಾರರ ವಿವರ ಈ ಕೆಳಗಿದೆ.

1. ಬ್ರೆಂಡನ್ ಮೆಕಲಮ್, ಕೆಕೆಆರ್ (2014)

1. ಬ್ರೆಂಡನ್ ಮೆಕಲಮ್, ಕೆಕೆಆರ್ (2014)

ತನ್ನ ಸ್ಫೋಟಕ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್ ಮೂಲಕ 2000 ಇಸವಿಯಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿದ ಬ್ರೆಂಡನ್ ಮೆಕಲಮ್ ತಮ್ಮ ಡಿಸ್ಟ್ರಕ್ಟಿವ್ ಬ್ಯಾಟಿಂಗ್ ಹೆಸರುವಾಸಿ. ಐಪಿಎಲ್ 2008ರ ಚೊಚ್ಚಲ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 158ರನ್ ಸಿಡಿಸಿದ್ದ ಮೆಕಲಮ್ ಆಟವನ್ನ ಇಂದಿಗೂ ಅಭಿಮಾನಿಗಳು ಮರೆತಿಲ್ಲ.

ಕೆಕೆಆರ್ ಪರ ಐಪಿಎಲ್ ಜರ್ನಿ ಆರಂಭಿಸಿದ ಮೆಕಲಮ್‌ರನ್ನ ಕೊಲ್ಕತ್ತಾ ನಂತರದ ಸೀಸನ್‌ಗಳಲ್ಲಿ ಪರ್ಫಾಮೆನ್ಸ್ ಆಧರಿಸಿ ಕೊಚ್ಚಿ ಟಸ್ಕರ್ಸ್‌ಗೆ ಮಾರಾಟ ಮಾಡಿತು. ನಂತರದ ಸೀಸನ್‌ನಲ್ಲಿ ಕೊಚ್ಚಿ ಕೂಡ ಬ್ರೆಂಡನ್‌ಗೆ ಗೇಟ್‌ ಪಾಸ್ ನೀಡಿತು. ಆನಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2014ರ ಐಪಿಎಲ್ ಸೀಸನ್‌ನಲ್ಲಿ ಅವರನ್ನ 3.25 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಆ ಸೀಸನ್‌ನಲ್ಲಿ ಮೆಕಲಮ್ ಅಬ್ಬರದ ಬ್ಯಾಟಿಂಗ್ ತೋರಿದ್ರು. ಅವರ ಸಾಮರ್ಥ್ಯಕ್ಕೆ ಪ್ರೈಸ್ ಟ್ಯಾಗ್ ಕಡಿಮೆಯಾಗಿದ್ರೂ ಸಹ, ಉತ್ತಮ ಆಟದ ಮೂಲಕ ಮಿಂಚಿದ್ರು.

2015ರಲ್ಲಿ ನ್ಯೂಜಿಲೆಂಡ್ ತಂಡವನ್ನ ಐಸಿಸಿ 50 ಓವರ್‌ಗಳ ವಿಶ್ವಕಪ್ ಫೈನಲ್‌ಗೇರಿಸಿದ ಕೀರ್ತಿ ಅವರದ್ದಾಗಿದೆ.

2. ರುತುರಾಜ್ ಗಾಯಕ್ವಾಡ್, ಸಿಎಸ್‌ಕೆ (2019)

2. ರುತುರಾಜ್ ಗಾಯಕ್ವಾಡ್, ಸಿಎಸ್‌ಕೆ (2019)

ಭವಿಷ್ಯದ ಟೀಂ ಇಂಡಿಯಾದ ತಾರೆ ಎಂದೇ ಗುರುತಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ 2021ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಕೀರ್ತಿ ಇವರದ್ದಾಗಿದೆ.

2018-2019ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ಅತಿ ಹೆಚ್ಚು ರನ್‌ ಸಿಡಿಸಿದ್ದ ರುತುರಾಜ್ ಗಾಯಕ್ವಾಡ್‌ರನ್ನ ಧೋನಿ ಟೀಮ್ ಸಿಎಸ್‌ಕೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು. 2019ರ ಸೀಸನ್‌ನಲ್ಲಿ ಕೇವಲ 20 ಲಕ್ಷ ರೂಪಾಯಿಗೆ ಗಾಯಕ್ವಡ್‌ರನ್ನ ಸಿಎಸ್‌ಕೆ ಖರೀದಿಸಿತು. ಆನಂತರ ನಡೆದಿದ್ದು ರುತುರಾಜ್‌ ಅದ್ಭುತ ಆಟ.

ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡ ಈ ಯುವ ಮಹಾರಾಷ್ಟ್ರ ಕ್ರಿಕೆಟಿಗ 2021ರ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ಪರ 45.35 ಬ್ಯಾಟಿಂಗ್ ಸರಾಸರಿ ಮತ್ತು 136.26 ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ 635 ರನ್ ಸಿಡಿಸಿದ್ರು.

3. ಕ್ರಿಸ್‌ಗೇಲ್ , ಆರ್‌ಸಿಬಿ (2011)

3. ಕ್ರಿಸ್‌ಗೇಲ್ , ಆರ್‌ಸಿಬಿ (2011)

ಟಿ20 ಕ್ರಿಕೆಟ್‌ನ ಬ್ರಾಂಡ್ ಅಂಬಾಸಿಡರ್, ಯೂನಿವರ್ಸಲ್ ಬಾಸ್ ಖ್ಯಾತಿಯ ವೆಸ್ಟ್‌ ಇಂಡೀಸ್ ದೈತ್ಯ ಕ್ರಿಸ್‌ಗೇಲ್ ಆರ್‌ಸಿಬಿ ತಂಡಕ್ಕೆ ಬರುವ ಮೊದಲು ಕೆಕೆಆರ್ ತಂಡದಲ್ಲಿ ಸಾಧಾರಣ ಪರ್ಫಾಮೆನ್ಸ್ ನೀಡುತ್ತಿದ್ರು. ಆದ್ರೆ ಯಾವಾಗ ಆರ್‌ಸಿಬಿ 2011ರ ಸೀಸನ್‌ನಲ್ಲಿ ಗೇಲ್‌ರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತೋ, ಯೂನಿವರ್ಸಲ್ ಬಾಸ್ ಅಬ್ಬರ ಶುರುವಾಯ್ತು.

ಕ್ರಿಸ್‌ಗೇಲ್‌ರನ್ನ ಆರ್‌ಸಿಬಿ 2011ರಲ್ಲಿ 2.97 ಕೋಟಿ ರೂಪಾಯಿಗೆ ಖರೀದಿಸಿತು. ಈ ಸೀಸನ್‌ನಲ್ಲಿ ಕ್ರಿಸ್‌ಗೇಲ್‌ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿ 608ರನ್‌ ಕಲೆಹಾಕಿದ್ರು. 188.13 ಸ್ಟ್ರೈಕ್‌ರೇಟ್‌ ಬ್ಯಾಟಿಂಗ್ ಮಾಡಿದ ಕ್ರಿಸ್‌ಗೇಲ್ 2 ಶತಕ ಕೂಡ ಸಿಡಿಸಿದ್ರು. ಈ ಮೂಲಕ ತಂಡದ ಬೆನ್ನಲುಬು ಆಗಿ ಗುರುತಿಸಿಕೊಂಡ ಗೇಲ್ ಮುಂದಿನ ಸೀಸನ್‌ನಲ್ಲೇ 733 ರನ್ ಸಿಡಿಸಿದ್ರು.

4. ಮನೀಶ್ ಪಾಂಡೆ, ಕೆಕೆಆರ್ (2014)

4. ಮನೀಶ್ ಪಾಂಡೆ, ಕೆಕೆಆರ್ (2014)

2008ರ ಅಂಡರ್-19 ವಿಶ್ವಕಪ್ ಚಾಂಪಿಯನ್ ಭಾರತದ ತಂಡದ ಭಾಗವಾಗಿದ್ದ ಮನೀಶ್ ಪಾಂಡೆ 2009ರಲ್ಲಿ ಆರ್‌ಸಿಬಿ ಪರ ಶತಕ ಸಿಡಿಸುವ ಮೂಲಕ ಸಾಕಷ್ಟು ಹೈಲೈಟ್ ಆಗಿದ್ದರು. 114ರನ್ ಕಲೆಹಾಕಿದ ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಮ್ಮೆಗೆ ಪಾತ್ರರಾದರು.

ಆರ್‌ಸಿಬಿಯಿಂದ ಪುಣೆ ಮೂಲದ ಫ್ರಾಂಚೈಸಿಗೆ ಹೋಗಿದ್ದ ಪಾಂಡೆ 2014ರ ಐಪಿಎಲ್ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್) 1.7 ಕೋಟಿ ರೂಪಾಯಿಗೆ ಖರೀದಿಸಿತು. ಅದೇ ಸೀಸನ್‌ನ ಫೈನಲ್‌ನಲ್ಲಿ ಮಿಂಚಿದ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್‌ ಸಿಡಿಸಿ ಕೆಕೆಆರ್ ಎರಡನೇ ಬಾರಿ ಐಪಿಎಲ್ ಕಪ್ ಗೆಲ್ಲಲು ನೆರವಾದ್ರು. ಇದು ಪಾಂಡೆಯನ್ನ ಖರೀದಿಸಿದಕ್ಕೂ ಸಾರ್ಥಕವಾಯಿತು ಎಂದು ಫ್ರಾಂಚೈಸಿ ಖುಷಿ ಪಟ್ಟಿತು.

5. ರಾಹುಲ್ ತ್ರಿಪಾಠಿ, ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್‌ (2017)

5. ರಾಹುಲ್ ತ್ರಿಪಾಠಿ, ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್‌ (2017)

2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೇಂಟ್ಸ್ ಪ್ರದರ್ಶನ ತಗ್ಗಿದ್ದರೂ ಸಹ ರಾಹುಲ್ ತ್ರಿಪಾಠಿ ಉತ್ತಮ ಬ್ಯಾಟಿಂಗ್ ಮತ್ತು ಆಕರ್ಷಕ ಫೀಲ್ಡಿಂಗ್ ಮೂಲಕ ಗಮನಸೆಳೆದ್ರು. ಹರಾಜು ವೇಳೆ ಕೇವಲ 10 ಲಕ್ಷ ರೂಪಾಯಿಗೆ ಬಿಕರಿಯಾದ ರಾಹುಲ್ ತ್ರಿಪಾಠಿ 14 ಪಂದ್ಯಗಳಲ್ಲಿ 146.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ 391 ರನ್ ಕಲೆಹಾಕಿದ್ರು. 10 ಲಕ್ಷ ರೂಪಾಯಿ ಖರೀದಿಯಾದ ಆಟಗಾಋ 391ರನ್ ಕಲೆಹಾಕಿದ್ದು ನಿಜಕ್ಕೂ ಫ್ರಾಂಚೈಸಿಗೆ ಪೈಸಾ ವಸೂಲ್‌ನಂತಿತ್ತು.

Guptill ಔಟ್ ಆದಾಗ Chahar ಹೀಗೆ ಮಾಡಿದ್ದೇಕೆ | Oneindia Kannada
6. ಆ್ಯಂಡ್ರೆ ರಸೆಲ್, ಕೆಕೆಆರ್ (2014)

6. ಆ್ಯಂಡ್ರೆ ರಸೆಲ್, ಕೆಕೆಆರ್ (2014)

ಆ್ಯಂಡ್ರೆ ರಸೆಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರುವವರೆಗೂ ಆತನ ನಿಜವಾದ ತಾಕತ್ತೇನು ಎಂದು ಎಲ್ಲರಿಗೂ ತಿಳಿದಿರಲಿಲ್ಲ. 2014 ಐಪಿಎಲ್ ಹರಾಜಿನಲ್ಲಿ ಕೇವಲ 60 ಲಕ್ಷ ರೂಪಾಯಿಗೆ ಆ್ಯಂಡ್ರೆ ರಸೆಲ್ ಕೆಕೆಆರ್ ತಂಡದ ಪರ ಸೇರಿಕೊಂಡ್ರು. ಆನಂತರ ಆತ ನಿಜವಾದ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡ್ರು.

2015ರ ಐಪಿಎಲ್ ಸೀಸನ್‌ನಲ್ಲಿ 326 ರನ್ ಕಲೆಹಾಕಿದ ರಸೆಲ್ 192.89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು. ಇಷ್ಟಲ್ಲದೆ 7.96 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 14 ವಿಕೆಟ್ ಕೂಡ ಕಬಳಿಸಿದ್ರು.

Story first published: Thursday, November 18, 2021, 9:48 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X