ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ

‘Best, calm and great human being’: Mohammad Nabi praise for MS Dhoni

ಕಾಬೂಲ್, ಜೂನ್ 26: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, ಭಾರತೀಯ ಕ್ರಿಕೆಟ್‌ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು. ಧೋನಿ ಮುಂದಾಳತ್ವದ ಭಾರತ ತಂಡ 2007ರ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಟ್ರೋಫಿ ಜಯಿಸಿತ್ತು. 2011ರಲ್ಲೂ ಧೋನಿ ನಾಯಕತ್ವದ ಭಾರತೀಯ ತಂಡ ಏಕದಿನ ವಿಶ್ವಕಪ್‌ ಚಾಂಪಿಯನ್ಸ್ ಆಗಿ ಮಿನುಗಿತ್ತು. ಅಷ್ಟೇ ಅಲ್ಲ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಮೂಲಕ ವಿಶ್ವದ ಬಲಿಷ್ಠ ಕ್ರಿಕೆಟ್‌ ತಂಡವೆಂಬುದನ್ನು ಭಾರತ ಮತ್ತೆ ಜಗತ್ತಿಗೆ ಸಾರಿ ಹೇಳಿತ್ತು.

ಇಂಟರ್‌ ನ್ಯಾಷನಲ್ ಕ್ರಿಕೆಟ್ ಕ್ಯಾಪ್ಟನ್‌ಗಳ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ?!ಇಂಟರ್‌ ನ್ಯಾಷನಲ್ ಕ್ರಿಕೆಟ್ ಕ್ಯಾಪ್ಟನ್‌ಗಳ ವಾರ್ಷಿಕ ಸಂಬಳ ಎಷ್ಟಿದೆ ಗೊತ್ತಾ?!

ನಾಯಕತ್ವದದೊಂದಿಗೆ, ವಿಕೆಟ್ ಕೀಪಿಂಗ್, ದೊಡ್ಡ ದೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಇಂಥವಕ್ಕೆಲ್ಲ ಕೂಲ್ ಕ್ಯಾಪ್ಟನ್ ಧೋನಿ ಯುವಕರಿಗೆ ಅತ್ಯುತ್ತಮ ಮಾರ್ಗದರ್ಶಕರೂ ಹೌದು.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

ಇತ್ತೀಚೆಗೆ ಸಂದರ್ಶನದ ವೇಳೆ ಅಫ್ಘಾನಿಸ್ತಾನದ ಆಲ್ ರೌಂಡರ್ ರಮೊಹಮ್ಮದ್ ನಬಿ, ಎಂಎಸ್ ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಶಾಂತ ಮತ್ತು ಶ್ರೇಷ್ಠ ಮನುಷ್ಯ

ಶಾಂತ ಮತ್ತು ಶ್ರೇಷ್ಠ ಮನುಷ್ಯ

ಯೂಟ್ಯೂಬ್ ಚಾಟ್ ಶೋನಲ್ಲಿ ಅನಿಸ್ ಸಾಜನ್ ಜೊತೆ ಮಾತನಾಡಿದ ಮೊಹಮ್ಮದ್ ನಬಿ, ಧೋನಿ ಜೊತೆಗಿನ ಮಾತುಕತೆಗಳನ್ನು ನೆನಪಿಸಿಕೊಂಡಿದ್ದಾರೆ. ಧೋನಿಯನ್ನು ಶ್ರೇಷ್ಠ ವ್ಯಕ್ತಿ ಎಂದು ಕರೆದರು. 'ಧೋನಿ ಒಬ್ಬ ಅತ್ಯುತ್ತಮ, ಶಾಂತ ಮತ್ತು ಶ್ರೇಷ್ಠ ಮನುಷ್ಯ,' ಎಂದು ನಬಿ ಹೇಳಿದರು.

ಕಳೆದ ಬಾರಿಯೂ ಫೈನಲ್‌ಗೇರಿದ್ದ ಸಿಎಸ್‌ಕೆ

ಕಳೆದ ಬಾರಿಯೂ ಫೈನಲ್‌ಗೇರಿದ್ದ ಸಿಎಸ್‌ಕೆ

ಧೋನಿ ಕ್ಯಾಪ್ಟನ್ಸಿಯಡಿಯಲ್ಲಿ ಸಿಎಸ್‌ಕೆ ತಂಡ ಒಟ್ಟು ಮೂರು ಬಾರಿ ಚಾಂಪಿಯನ್ ಆಗಿದೆ. ಕಳೆದ ಬಾರಿಯೂ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ತಂಡಗಳು ಫೈನಲ್‌ನಲ್ಲಿ ಕಾದಾಡಿದ್ದವು. ಆದರೆ ರೋಹಿತ್ ಶರ್ಮಾ ನಾಯಕತ್ವದ ಎಂಐ ಪ್ರಶಸ್ತಿ ಗೆದ್ದು, ನಾಲ್ಕನೇ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.

ರೂಮ್ ಬಾಗಿಲು ಇಡೀ ದಿನ ತೆರೆದಿರುತ್ತದೆ

ರೂಮ್ ಬಾಗಿಲು ಇಡೀ ದಿನ ತೆರೆದಿರುತ್ತದೆ

ಮಾತು ಮುಂದುವರೆಸಿದ ನಬಿ, 'ಜೊತೆಯಲ್ಲಿ ಟೀ ಕುಡಿಯಲು ಅಥವಾ ಮಾತನಾಡಲು ಬಯಸುವ ಪ್ರತಿಯೊಬ್ಬರಿಗೂ ಧೋನಿ ರೂಮಿನ ಬಾಗಿಲು 24X7 ಸಮಯ ತೆರೆದೇ ಇರುತ್ತದೆ. ನಾನು ಧೋನಿಯನ್ನು ಒಂದೆರಡು ಬಾರಿ ಭೇಟಿ ಮಾಡಿದ್ದೇನೆ. ಆತ ನಿಜಕ್ಕೂ ಒಳ್ಳೆಯ ಮನುಷ್ಯ,' ಎಂದಿದ್ದಾರೆ.

ಮೈದಾನಕ್ಕಿಳಿಯದ ಧೋನಿ

ಮೈದಾನಕ್ಕಿಳಿಯದ ಧೋನಿ

2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದ ಬಳಿಕ, ಧೋನಿ ಯಾವುದೇ ಪಂದ್ಯವನ್ನಾಡಿಲ್ಲ. ಐಪಿಎಲ್ ಆರಂಭವಾಗಿದ್ದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕನಾಗಿ ಮೈದಾನಕ್ಕಿಳಿಯುತ್ತಿದ್ದರು. ಆದರೆ ಕೊರೊನಾದಿಂದ ಐಪಿಎಲ್ ಮುಂದೂಡಲ್ಪಟ್ಟಿರುವುದರಿಂದ ಧೋನಿ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಬೇಕಾಗಿದೆ.

Story first published: Friday, June 26, 2020, 21:48 [IST]
Other articles published on Jun 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X