ಐಪಿಎಲ್ 2020: ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಕ್ರಿಕೆಟ್ ಜಗತ್ತು ಬೆರಗು

ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಭಾನುವಾರ ನಡೆದ ಪಂದ್ಯ ಐಪಿಎಲ್ ಇತಿಹಾಸದಲ್ಲಿ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಸಾಕಷ್ಟು ರೋಮಾಂಚನಕಾರಿ ಕ್ಷಣಗಳಿಗೆ ಈ ಪಂದ್ಯ ಸಾಕ್ಷಿಯಾಯಿತು. ಶಾರ್ಜಾ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರದ ಆಟದ ಮಧ್ಯೆ ಪಂಜಾಬ್ ಆಟಗಾರ ನಿಕೋಲಸ್ ಪೂರನ್ ಫೀಲ್ಡಿಂಗ್ ಚಮತ್ಕಾರಕ್ಕೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಬ್ಬೆರಗಾಗಿದ್ದಾರೆ.

ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ ಬೃಹತ್ ಗುರಿಯನ್ನು ಆರ್‌ಆರ್‌ ನಾಯಕ ಸಂಜು ಸ್ಯಾಮ್ಸನ್ ಹಾಗೂ ಸ್ಟೀವ್ ಸ್ಮಿತ್ ಭರ್ಜರಿ ಆಟದ ಮೂಲಕ ಬೆನ್ನತ್ತಿದ್ದರು. ಈ ಸಂದರ್ಭದಲ್ಲ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಮುರುಗನ್ ಅಶ್ವಿನ್ ಎಸೆದ ಎಸೆತವನ್ನು ಸಂಜು ಸ್ಯಾಮ್ಸನ್ ಭರ್ಜರಿಯಾಗಿ ಬೀಸಿ ಹೊಡೆದರು. ಎಲ್ಲರೂ ಈ ಹೊಡೆತ ಖಂಡಿತಾ ಸಿಕ್ಸರ್ ಎಂದೇ ಭಾವಿಸಿದರು.

ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!

ಆದರೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆಟಗಾರ ನಿಕೋಲಸ್ ಪೂರನ್ ಮಿಂಚಿನಂತೆ ಓಡಿ ಬಂದು ಸಿಕ್ಸರ್‌ಗೆ ಹೋಗುತ್ತಿದ್ದ ಚೆಂಡನ್ನು ಅಂತಿಮ ಕ್ಷಣದಲ್ಲಿ ಅಕ್ಷರಶಃ ಸೂಪರ್‌ಮ್ಯಾನ್‌ ರೀತಿಯಲ್ಲಿ ತಡೆದು ಹುಬ್ಬೇರುವಂತೆ ಮಾಡಿದರು. ಗಾಳಿಯಲ್ಲಿ ಹಾರಿ ದೇಹದ 99 ಶೇಕಡಾದಷ್ಟು ಭಾಗ ಬೌಂಡರಿ ಲೈನ್‌ನ ಆಚೆಗಿದ್ದರೂ ನೆಲಕ್ಕೆ ತಾಗುವ ಮುನ್ನವೇ ಚೆಂಡನ್ನು ಹಿಡಿದು ಬೌಂಡರಿ ಲೈನ್‌ನ ಆಚೆ ಹಾಕಿದ್ದರು. ಈ ಮೂಲಕ ತಂಡಕ್ಕೆ ಅಮೂಲ್ಯ ರನ್ ಉಳಿಸುವಲ್ಲಿ ಯಶಸ್ವಿಯಾಗಿದ್ದರು.

ನಿಕೋಲಸ್ ಪೂರನ್ ಮಾಡಿದ ಈ ಅದ್ಭುತ ಕ್ಯಾಚ್‌ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಬೆರಗು ವ್ಯಕ್ತಪಡಿಸಿದ್ದಾರೆ. "ನಾನು ಕಂಡ ಅತಿ ಶ್ರೇಷ್ಠ ರನ್ ಉಳಿಕೆಯಿದು. ನಿಜಕ್ಕೂ ನಂಬಲು ಅಸಾಧ್ಯ" ಎಂದು ಸಚಿನ್ ತೆಂಡೂಲ್ಕರ್ ಟ್ವೀಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಕೋಲಸ್ ಊರನ್ ಅವರ ಈ ಕ್ಯಾಚ್ ವೈರಲ್ ಆಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 28, 2020, 8:56 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X