ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನ ವರ್ಷದ ತಂಡ: ಅತ್ಯುತ್ತಮ ವರ್ಷದ ಟಿ20ಐ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

Best t20i team of 2020: Eoin morgan to lead kl rahul wicket keeper

2020 ಕ್ಯಾಲೆಂಡರ್ ವರ್ಷ ಅಂತ್ಯವಾಗಲು ದಿನಗಣನೆ ಆರಂಭವಾಗಿದೆ. ಕ್ರೀಡಾಪ್ರೇಮಿಗಳಿಗೆ ಈ ವರ್ಷ ಹಿಂದಿನ ಎಲ್ಲಾ ವರ್ಷಗಳಿಗಿಂತಲೂ ಈ ವರ್ಷ ಭಿನ್ನವಾಗಿತ್ತು. ಅದಕ್ಕೆ ಕಾರಣ ಕೊರೊನಾ ವೈರಸ್. ಬಹುತೇಕ ವರ್ಷ ವೈರಸ್‌ನ ದಾಳಿಗೆ ನಲುಗಿ ಸ್ತಬ್ಧವಾಗಿತ್ತು. ಹೀಗಾಗಿ ಈ ಬಾರಿ ಭಾರೀ ಕಡಿಮೆ ಪ್ರಮಾಣದಲ್ಲಿ ಟೂರ್ನಿಗಳು ನಡೆದಿದೆ. ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಪ್ರೇಕ್ಷಕರ ಗೈರಿನಲ್ಲಿ ಸಾಕಷ್ಟು ಕಠಿಣ ನಿರ್ಬಂಧಗಳ ಮಧ್ಯೆ ಸರಣಿಗಳನ್ನು ಆಯೋಜಿಸಲಾಗಿದೆ.

ಈ ವರ್ಷದಲ್ಲಿ ಆಡಿರುವ ಸೀಮಿತ ಕ್ರಿಕೆಟ್ ಪಂದ್ಯಗಳಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ವರ್ಷದ ತಂಡವನ್ನು ಮೈಖೇಲ್ ಆಯ್ಕೆ ಮಾಡಿದೆ. ಆಡಿದ ಪಂದ್ಯಗಳಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ತಂಡಕ್ಕೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರು ನಾಯಕನಾಗಿದ್ದಾರೆ.

ಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿಧೋನಿ ಪಾದಾರ್ಪಣೆಯ ದಿನವಿದು: MSD ವಿಶೇಷ ದಾಖಲೆಗಳ ಪಟ್ಟಿ

ಹಾಗಾದರೆ ಮೈಖೇಲ್ ಆಯ್ಕೆಯ ವರ್ಷದ ತಂಡ ಹೇಗಿದೆ? ಮುಂದೆ ಓದಿ..

1. ಕೆಎಲ್ ರಾಹುಲ್(ವಿಕೆಟ್ ಕೀಪರ್)

1. ಕೆಎಲ್ ರಾಹುಲ್(ವಿಕೆಟ್ ಕೀಪರ್)

ಕೆಎಲ್ ರಾಹುಲ್ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಟಿ20 ಕ್ರಿಕೆಟ್‌ನಲ್ಲಿ 400+ ರನ್ ಗಳಿಸಿದ 2ನೇ ಆಟಗಾರನಾಗಿದ್ದಾರೆ. ಈ ವರ್ಷದಲ್ಲಿ 11 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ 404 ರನ್ ಗಳಿಸಿದ್ದಾರೆ. 44.89ರ ಸರಾಸರಿಯಲ್ಲಿ ರಾಹುಲ್ 4 ಅರ್ಧ ಶತಕವನ್ನೂ ಗಳಿಸಿದ್ದಾರೆ.

2. ಜೋಸ್ ಬಟ್ಲರ್

2. ಜೋಸ್ ಬಟ್ಲರ್

ಈ ತಂಡದ ಎರಡನೇ ಆರಂಬಿಕನಾಗಿ ಜೋಸ್ ಬಟ್ಲರ್ ಆಯ್ಕೆಯಾಗಿದ್ದು 150ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬಟ್ಲರ್ ಬ್ಯಾಟ್ ಬೀಸಿದ್ದಾರೆ. 8 ಪಂದ್ಯಗಳನ್ನು ಆಡಿರುವ ಬಟ್ಲರ್ 48.50 ಸರಾಸರಿಯಲ್ಲಿ 3 ಅರ್ಧ ಶತಕಗಳ ಜೊತೆಗೆ 291 ರನ್ ಬಾರಿಸಿದ್ದಾರೆ.

3. ಡೇವಿಡ್ ಮಲನ್

3. ಡೇವಿಡ್ ಮಲನ್

ಇಂಗ್ಲೆಂಡ್ ತಂಡದ ಡೇವಿಡ್ ಮಲನ್‌ಗೆ ಇದು ಶ್ರೇಷ್ಠವಾದ ವರ್ಷ. 10 ಪಂದ್ಯಗಳಲ್ಲಿ 49.63ರ ಸರಾಸರಿಯಲ್ಲಿ 397 ರನ್ ಬಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಪ್ರಮುಖ ಟಿ20 ಅಸ್ತ್ರವಾಗಿದ್ದಾರೆ ಮಲನ್. ಮಲನ್ ಚುಟುಕು ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್ ಕೂಡ ಹೌದು.

4. ಇಯಾನ್ ಮಾರ್ಗನ್

4. ಇಯಾನ್ ಮಾರ್ಗನ್

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಈ ವರ್ಷ 11 ಪಂದ್ಯಗಳಲ್ಲಿ ಆಡಿದ್ದು 34.5ರ ಸರಾಸರಿಯಲ್ಲಿ ರನ್ ಗಳಿಸಿದ್ದರೂ ಅವರ ಸ್ಟ್ರೈಕ್‌ರೇಟ್ 168.29ರಷ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಅದ್ಭುತವಾಗಿ ತಂಡಕ್ಕೆ ಆಸರೆಯಾಗಿರುವ ಮಾರ್ಗನ್ 3 ಅರ್ಧ ಶತಕ ಬಾರಿಸಿದ್ದಾರೆ.

5. ಮೊಹಮ್ಮದ್ ಹಫೀಜ್

5. ಮೊಹಮ್ಮದ್ ಹಫೀಜ್

ಪಾಕಿಸ್ತಾನ ಕ್ರಿಕೆಟ್‌ನ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಇತ್ತೀಚೆಗೆ 40ನೇ ಹುಟ್ಟುಹಬ್ಬ ಆಚರಿಸಿಕೊಂಡರಾದರೂ ಚುಟುಕು ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಹುದೊಡ್ಡ ಬಲವಾಗಿದ್ದಾರೆ ಹಫೀಜ್. ಈ ವರ್ಷ ಹಫೀಜ್ 10 ಪಂದ್ಯಗಳನ್ನು ಆಡಿದ್ದು 415 ರನ್ ಗಳಿಸಿದ್ದಾರೆ. 157.57ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.

6. ಕಿರಾನ್ ಪೊಲಾರ್ಡ್

6. ಕಿರಾನ್ ಪೊಲಾರ್ಡ್

ವೆಸ್ಟ್ ಇಂಡೀಸ್ ತಂಡದ ನಾಯಕ ಕಿರಾನ್ ಪೊಲಾರ್ಡ್ ಈ ವರ್ಷ 8 ಪಂದ್ಯಗಳಲ್ಲಿ ಆಡಿದ್ದು 168 ರನ್ ಗಳಿಸಿದ್ದಾರೆ. ಇದು ಸಾಮಾನ್ಯ ಪ್ರದರ್ಶನದಂತೆ ಕಂಡರೂ ಅವರ ಸ್ಟ್ರೈಕ್‌ರೇಟ್ 204.87 ಎಂಬುದು ಗಮನಾರ್ಹ. ಒಂದು ಅರ್ಧ ಶತಕವನ್ನು ಗಳಿಸಿರುವ ಜೊತೆಗೆ 9 ವಿಕೆಟ್ ಕೂಡ ಪಡೆದು ಮಿಂಚಿದ್ದಾರೆ.

7. ಆಷ್ಟನ್ ಅಗರ್

7. ಆಷ್ಟನ್ ಅಗರ್

ಆಸ್ಟ್ರೇಲಿಯಾದ ಸ್ಪಿನ್ನರ್ ಆಷ್ಟನ್ ಅಗರ್ ಈ ವರ್ಷ ಕೇವಲ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 13 ವಿಕೆಟ್ ಕಿತ್ತು ಮಿಂಚಿದ್ದಾರೆ. 14.46ರ ಸರಾಸರಿಯನ್ನು ಹೊಂದಿರುವುದರ ಜೊತೆಗೆ 6.75ರ ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟ್‌ಮೂಲಕವೂ ಕಾಣಿಕೆ ನೀಡಬಲ್ಲ ಆಟಗಾರ ಅಗರ್.

8. ಶಾರ್ದೂಲ್ ಠಾಕೂರ್

8. ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್‌ಅವರ ಎಕಾನಮಿ 9ರಷ್ಟಿದ್ದು ತುಸು ಹೆಚ್ಚೆನಿಸಿದರೂ ವಿಕೆಟ್ ಪಡೆಯುವ ಬೌಲರ್ ಆಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗುರುತಿಸಿಕೊಂಡರು. 10 ಪಂದ್ಯಗಳಲ್ಲಿ 15 ವಿಕೆಟ್ ಗಳಿಸಿರುವ ಶಾರ್ದೂಲ್ ಸರಾಸರಿ 18.73 ಆಗಿದೆ.

9. ಹ್ಯಾರಿಸ್ ರೌಫ್

9. ಹ್ಯಾರಿಸ್ ರೌಫ್

ಪಾಕಿಸ್ತಾನ ತಂಡದ ವೇಗಿ ಈ ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 11 ಪಂದ್ಯಗಳನ್ನು ಆಡಿರುವ ರೌಫ್ 16 ವಿಕೆಟ್ ಕಿತ್ತು ಮಿಂಚಿದ್ದಾರೆ. 8.65ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಬ್ಯಾಟಿಂಗ್‌ನಲ್ಲೂ ಸಹಕಾರಿಯಾಗುವ ಸಾಮರ್ಥ್ಯ ಈ ಆಟಗಾರನಿಗಿದೆ.

10. ಆಡಂ ಜಂಪಾ

10. ಆಡಂ ಜಂಪಾ

ಈ ಸ್ಥಾನಕ್ಕೆ ಆಸ್ಟ್ರೇಲಿಯಾದ ಆಡಂ ಜಂಪಾಗೆ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ತೀವ್ರ ಪೈಪೋಟಿ ನೀಡುವ ಪ್ರದರ್ಶನ ನೀಡಿದ್ದಾರೆ. 9 ಪಂದ್ಯಗಳನ್ನು ಆಡಿರುವ ಜಂಪಾ 7.91ರ ಸರಾಸರಿಯಲ್ಲಿ 11 ವಿಕೆಟ್ ಪಡೆದಿದ್ದಾರೆ.

11. ಲುಂಗಿ ಎನ್‌ಗಿಡಿ

11. ಲುಂಗಿ ಎನ್‌ಗಿಡಿ

ದಕ್ಷಿಣ ಆಫ್ರಿಕಾದ ಯುವ ವೇಗಿ ಎನ್‌ಗಿಡಿ ಚುಟುಕು ಕ್ರಿಕೆಟ್‌ನಲ್ಲಿ ವಿಕೆಟ್ ಟೇಕರ್ ಬೌಲರ್ ಎನಿಸಿದ್ದಾರೆ. 10.47ರ ಎಕಾನಮಿ ಸ್ವಲ್ಪ ದುಬಾರಿ ಎನಿಸಿದರೂ ಈ ವರ್ಷ ಆಡಿರುವ 9 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈವರ್ಷ ಬೌಲರ್ ಓರ್ವ ಪಡೆದಿರುವ ಅತಿ ಹೆಚ್ಚಿನ ವಿಕೆಟ್ ಇದಾಗಿದೆ.

Story first published: Thursday, December 24, 2020, 9:52 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X