ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂತ್ vs ಧೋನಿ, ಸಂಗಕ್ಕಾರ, ಗಿಲ್‌ಕ್ರಿಸ್ಟ್: 31 ಟೆಸ್ಟ್ ನಂತರ ಹೆಚ್ಚು ರನ್ ಮತ್ತು ಶತಕ ಸಿಡಿಸಿದ ಕೀಪರ್ ಯಾರು?

Best wicketkeeper batsman: Which wicketkeeper has scored most runs and centuries after 31 test matches?

ರಿಷಭ್ ಪಂತ್, ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಗಬ್ಬಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಯರಹಿತ ಶತಕ ಸಿಡಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದಂತಹ ಕ್ರಿಕೆಟಿಗ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಅಬ್ಬರದ ಶತಕ ಸಿಡಿಸಿ ಟೀಂ ಇಂಡಿಯಾಗೆ ಆಪತ್ಬಾಂಧವನಾಗಿ ನಿಂತ ರಿಷಭ್ ಪಂತ್ 24ರ ಹರೆಯದಲ್ಲಿಯೇ 2000 ಟೆಸ್ಟ್ ರನ್ ಪೂರೈಸಿದ್ದಾರೆ. ಈ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ 2000 ಟೆಸ್ಟ್ ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ರಿಷಭ್ ಪಂತ್ ನಿರ್ಮಿಸಿದ್ದಾರೆ.

ಇದು ಬುಮ್ರಾನಾ ಅಥವಾ ಯುವಿನಾ?: ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ತೆಂಡೂಲ್ಕರ್!ಇದು ಬುಮ್ರಾನಾ ಅಥವಾ ಯುವಿನಾ?: ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ತೆಂಡೂಲ್ಕರ್!

ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಿಷಭ್ ಪಂತ್ ಟೀಮ್ ಇಂಡಿಯಾ ಹೊಂದಿರುವ ದೊಡ್ಡ ಆಸ್ತಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ರೀತಿಯ ಬಹು ದೊಡ್ಡ ಮಟ್ಟದ ಪ್ರಶಂಸೆಗಳು ರಿಷಭ್ ಪಂತ್ ಕುರಿತಾಗಿ ವ್ಯಕ್ತವಾಗುತ್ತಿರುವುದಕ್ಕೆ ಇಂಗ್ಲೆಂಡ್ ವಿರುದ್ಧದ ಈ ಒಂದು ಇನ್ನಿಂಗ್ಸ್ ಮಾತ್ರವಲ್ಲ ಈ ಹಿಂದೆ ಪಂತ್ ಟೀಮ್ ಇಂಡಿಯಾಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ನೀಡಿರುವ ಹಲವು ಕೊಡುಗೆಗಳು ಕೂಡ ಕಾರಣ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಹೌದು, ಪಂತ್ ಟೀಮ್ ಇಂಡಿಯಾ ಪರ ಹಲವು ಟೆಸ್ಟ್ ಪಂದ್ಯಗಳಲ್ಲಿ ಅತ್ಯಮೂಲ್ಯ ಪ್ರದರ್ಶನವನ್ನು ನೀಡಿ ಆಸರೆಯಾಗಿದ್ದಾರೆ. ಹೀಗಾಗಿಯೇ ರಿಷಭ್ ಪಂತ್ ಅವರನ್ನು ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ಎಂಎಸ್ ಧೋನಿ, ಕುಮಾರ ಸಂಗಕ್ಕಾರ ಹಾಗೂ ಆ್ಯಡಮ್ ಗಿಲ್‌ಕ್ರಿಸ್ಟ್ ಜತೆ ಹೋಲಿಕೆ ಮಾಡಲಾಗುತ್ತಿದೆ. ಹಾಗಿದ್ದರೆ 31 ಟೆಸ್ಟ್ ಪಂದ್ಯಗಳು ಮುಕ್ತಾಯವಾದ ನಂತರ ಈ ನಾಲ್ವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ಯಾರು ಎಷ್ಟು ರನ್ ಗಳಿಸಿದ್ದಾರೆ ಮತ್ತು ಎಷ್ಟು ಶತಕಗಳನ್ನು ದಾಖಲಿಸಿದ್ದಾರೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ಅತಿ ಹೆಚ್ಚು ರನ್ ಬಾರಿಸಿದವರು

ಅತಿ ಹೆಚ್ಚು ರನ್ ಬಾರಿಸಿದವರು

31 ಟೆಸ್ಟ್ ಪಂದ್ಯಗಳು ಮುಕ್ತಾಯವಾದ ನಂತರ ಈ ನಾಲ್ವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ಗಳಿಸಿದ ರನ್ ವಿವರ

ಕುಮಾರ ಸಂಗಕ್ಕಾರ - 2211 ರನ್

ಆ್ಯಡಮ್ ಗಿಲ್‌ಕ್ರಿಸ್ಟ್ - 2160 ರನ್

ರಿಷಭ್ ಪಂತ್ - 2066 ರನ್

ಎಂಎಸ್ ಧೋನಿ - 1587 ರನ್

ಅತಿ ಹೆಚ್ಚು ಶತಕ ಬಾರಿಸಿದವರು

ಅತಿ ಹೆಚ್ಚು ಶತಕ ಬಾರಿಸಿದವರು

ಈ ನಾಲ್ವರ ಪೈಕಿ 31 ಟೆಸ್ಟ್ ಪಂದ್ಯಗಳು ಮುಕ್ತಾಯವಾದ ನಂತರ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿ ಕೆಳಕಂಡಂತಿದೆ

ಆ್ಯಡಮ್ ಗಿಲ್‌ಕ್ರಿಸ್ಟ್ - 6 ಶತಕಗಳು

ರಿಷಭ್ ಪಂತ್ - 5 ಶತಕಗಳು

ಕುಮಾರ ಸಂಗಕ್ಕಾರ - 4 ಶತಕಗಳು

ಎಂಎಸ್ ಧೋನಿ - 1 ಶತಕ

Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada
ಪಂತ್ ಅಂಕಿಅಂಶ ಬಲು ವಿಶೇಷ ಮತ್ತು ಗಿಲ್‌ಕ್ರಿಸ್ಟ್ ದಾಖಲೆ ಸರಿಗಟ್ಟಬಹುದು

ಪಂತ್ ಅಂಕಿಅಂಶ ಬಲು ವಿಶೇಷ ಮತ್ತು ಗಿಲ್‌ಕ್ರಿಸ್ಟ್ ದಾಖಲೆ ಸರಿಗಟ್ಟಬಹುದು

ಇನ್ನು ರಿಷಭ್ ಪಂತ್ 31 ಪಂದ್ಯಗಳಲ್ಲಿ ಕಲೆಹಾಕಿರುವ ರನ್ ಮತ್ತು ಶತಕಗಳು ಈ ಕೆಳಕಂಡ ಕಾರಣಕ್ಕೆ ಇತರರಿಗಿಂತ ವಿಶೇಷ ಎನಿಸಲಿವೆ.

• ರಿಷಭ್ ಪಂತ್ ದಾಖಲಿಸಿರುವ 5 ಟೆಸ್ಟ್ ಶತಕಗಳ ಪೈಕಿ 4 ಶತಕಗಳನ್ನು ವಿದೇಶಿ ನೆಲದಲ್ಲಿ ದಾಖಲಿಸಿರುವುದು ವಿಶೇಷ.

• ಸೆನಾ ( ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ) ದೇಶಗಳಲ್ಲಿ ಶತಕ ಬಾರಿಸುವುದು ದೊಡ್ಡ ಹಾಗೂ ಕಷ್ಟಕರ ಕೆಲಸ ಎಂಬ ಭಾವನೆ ಇತ್ತು. ಆದರೆ ರಿಷಭ್ ಪಂತ್ ಕಿರಿಯ ವಯಸ್ಸಿನಲ್ಲಿಯೇ ಈ ಪ್ರಾಂತ್ಯದಲ್ಲಿ ಶತಕ ಬಾರಿಸಿದ್ದಾರೆ.

ಇನ್ನು ರಿಷಭ್ ಪಂತ್ ಇನ್ನೂ ಸಹ 31ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಬಾಕಿ ಉಳಿದಿದೆ. ಒಂದುವೇಳೆ ಎರಡನೆ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದೇ ಆದರೆ 6 ಶತಕಗಳನ್ನು ಪೂರೈಸಿ 31 ಟೆಸ್ಟ್ ಪಂದ್ಯಗಳ ಬಳಿಕ ಅತಿಹೆಚ್ಚು ಶತಕ ಬಾರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಎಂಬ ದಾಖಲೆಯಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ಅವರನ್ನು ಸರಿದೂಗಿಸಲಿದ್ದಾರೆ.

Story first published: Saturday, July 2, 2022, 21:36 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X