ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ಗೆ ವೀಕ್ಷಕರನ್ನು ಸೆಳೆಯಲು ರಾಹುಲ್ ದ್ರಾವಿಡ್ ಅಮೂಲ್ಯ ಸಲಹೆ

ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಬಂದು ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸಲು ಅಮೂಲ್ಯ ಸಲಹೆ ಕೊಟ್ಟ ದ್ರಾವಿಡ್
Better stadium facilities needed apart from Day Night games

ಭಾರತ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಟೆಸ್ಟ್‌ಪಂದ್ಯ ಆರಂಭವಾಗಲು ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಈ ಐತಿಹಾಸಿಕ ಪಂದ್ಯ ಕ್ರಿಕೆಟ್ ಆಟಗಾರರಲ್ಲಿ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಭಾರತದಲ್ಲಿ ಟೆಸ್ಟ್‌ಕ್ರಿಕೆಟ್‌ನಿಂದ ಅಭಿಮಾನಿಗಳು ದೂರವಾಗುತ್ತಿರುವ ಕಾರಣ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಡೇ ನೈಟ್‌ ಪಂದ್ಯದ ತೀರ್ಮಾನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಹಾಗೂ ಎನ್‌ಸಿಎ ಮುಖಂಡ ರಾಹುಲ್ ದ್ರಾವಿಡ್ ವೀಕ್ಷಕರನ್ನು ಟೆಸ್ಟ್‌ಪಂದ್ಯಗಳತ್ತ ಸೆಳೆಯಲು ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.

ಸಿಂಗಾಪುರದಲ್ಲಿ ರಾಹುಲ್ ದ್ರಾವಿಡ್ ಮಾತನಾಡಿದ್ದು, ಟೆಸ್ಟ್‌ ಕ್ರಿಕೆಟ್‌ಗೆ ಅಭಿಮಾನಿಗಳನ್ನು ಸೆಳೆಯಲು ಡೇ ನೈಟ್‌ ಪಂದ್ಯ ಮಾಡಿದರಷ್ಟೇ ಸಾಕಾಗುವುದಿಲ್ಲ. ಸ್ಟೇಡಿಯಮ್‌ಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಅವರ ನೇತೃತ್ವದ ತಂಡ ಐತಿಹಾಸಿಕ ಪಮದ್ಯಕ್ಕೆ ಅಭಿಮಾನಿಗಳನ್ನು ಸೆಳೆಯಲು ತಮ್ಮೆಲ್ಲಾ ಪರಿಶ್ರಮವನ್ನು ಹಾಕಿದ್ದಾರೆ. ಆದರೆ ಅಭಿಮಾನಿಗಳಿಗೆ ಅನುಕೂಲಕರವಾಗುವ ವ್ಯವಸ್ಥೆಗಳನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಗಳು ನಡೆಯಬೇಕಿದೆ ಎಂಬ ಅಭಿಪ್ರಾಯವನ್ನು ದ್ರಾವಿಡ್ ವ್ಯಕ್ತಪಡಿಸಿದ್ದಾರೆ.

ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!

ಮುಂದುವರಿದು ಮಾತನಾಡಿರುವ ಮಾಜಿ ನಾಯಕ ರಾಹುಲ್ ದ್ರಾವಿಡ್ ಇದೊಂದೇ ಕಾರಣಕ್ಕೆ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಬಂದು ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸುತ್ತಾರೆ ಎಂದಲ್ಲ. ಆದರೆ ಈ ಅಂಶಗಳನ್ನು ಮಾಡಲೇ ಕಾರ್ಯರೂಪಕ್ಕೆ ತರಲೇಬೇಕಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ವೀಕ್ಷಕರಿಗೆ ಮೈದಾನದಲ್ಲಿ ನೀಡಬೇಕಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವತ್ತ ಗಮನ ನೀಡಬೇಕು ಎಂದರು. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಮೈದಾನದಲ್ಲಿ ಶೌಚಾಲಯ, ಪಾರ್ಕಿಂಗ್ ಸೇರಿದಂತೆ ಅಗತ್ಯ ಸೌಲಭ್ಯಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿತ್ತು.

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ ಆಡಲಿದೆ ಟೀಮ್ ಇಂಡಿಯಾಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ ಆಡಲಿದೆ ಟೀಮ್ ಇಂಡಿಯಾ

ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೆಳೆಯಲು ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಪಂದ್ಯದ ಮಾದರಿಯಲ್ಲಿ ನಿಗದಿತ ದಿನಾಂಕದಲ್ಲಿ ಪಂದ್ಯವನ್ನು ಆರಂಭಿಸುವಂತೆ ಮೊದಲೇ ನಿರ್ಧಾರವನ್ನು ಕೈಗೊಳ್ಳಬೇಕು. ಆಗ ಪಂದ್ಯವನ್ನು ವೀಕ್ಷಿಸುವ ನಿಟ್ಟಿನಲ್ಲಿ ಅಭಿಮಾನಿಗಳು ಸಾಕಷ್ಟು ಮೊದಲೇ ತಯಾರಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದಿದ್ದಾರೆ.

Story first published: Thursday, November 21, 2019, 16:22 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X