ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?

BGT 2023: Australia Prepared Spin Track For Practice At Sydney Cricket Ground

ಭಾರತ ತಂಡದ ವಿರುದ್ಧ ಸತತವಾಗಿ ಮೂರು ಟೆಸ್ಟ್ ಸರಣಿಗಳನ್ನು ಸೋತಿರುವ ಆಸ್ಟ್ರೇಲಿಯಾ 2023ರಲ್ಲಿ ನಡೆಯುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಗೆಲ್ಲಲೇಬೇಕೆನ್ನುವ ಹಠಕ್ಕೆ ಬಿದ್ದಂತಿದೆ. ಅದಕ್ಕಾಗಿ ಆಸ್ಟ್ರೇಲಿಯಾ ಈ ಬಾರಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ.

ವೇಗದ ಪಿಚ್‌ಗಳಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ನಿಧಾನಗತಿಯ ಸ್ಪಿನ್‌ ಪಿಚ್‌ಗಳಲ್ಲಿ ಆಡುವುದು ಎಂದಿಗೂ ಸವಾಲಿನ ಕೆಲಸ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್‌ರಂತಹ ಸ್ಪಿನ್ನರ್ ಗಳನ್ನು ಎದುರಿಸಲು ಆಸ್ಟ್ರೇಲಿಯಾ ವಿಶೇಷವಾಗಿ ಸಿದ್ಧವಾಗುತ್ತಿದೆ. ಸಿಡ್ನಿ ಬಾನ್ ಆಂಡ್ರ್ಯೂಸ್ ಓವಲ್‌ನಲ್ಲಿ ಸ್ಪಿನ್‌ ಟ್ಯ್ರಾಕ್ ಸಿದ್ಧಪಡಿಸಿ ಅಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಆಡುವುದನ್ನು ಆಸ್ಟ್ರೇಲಿಯಾ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ.

ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ

ಆಸ್ಟ್ರೇಲಿಯಾ ತಂಡಕ್ಕೆ ಭಾರತ ಎಂದಿಗೂ ಅಪಾಯವೇ ಎಂದು ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿದೆ. ಐಸಿಸಿ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ನಂಬರ್ 1 ಸ್ಥಾನದಲ್ಲಿದೆ. ಭಾರತದ ವಿರುದ್ಧ ಸರಣಿ ಸೋತರೆ, ಭಾರತ ನಂಬರ್ 1 ಸ್ಥಾನಕ್ಕೇರಲಿದೆ, ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ಗೆ ತಲುಪಲಿದ್ದು, ಆಸ್ಟ್ರೇಲಿಯಾಕ್ಕೆ ದೊಡ್ಡ ಸವಾಲಾಗಲಿದೆ.

ಅದಕ್ಕೆ ಹೇಗಾದರೂ ಟೆಸ್ಟ್ ಸರಣಿಯನ್ನು ಗೆದ್ದು ಭಾರತವನ್ನು ಫೈನಲ್‌ಗೆ ಬರದಂತೆ ತಡೆಯುವುದು, ಭಾರತದ ವಿರುದ್ಧ ಸತತ ಮೂರು ಸರಣಿ ಸೋಲಿನ ಸೇಡು ತೀರಿಸಿಕೊಳ್ಳುವುದು ಕಾಂಗರೂ ಪಡೆಯ ಉದ್ದೇಶವಾಗಿದೆ.

ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ

ಭಾರತದ ಮಾದರಿ ಪಿಚ್‌ ತಯಾರಿ

ಭಾರತದ ಮಾದರಿ ಪಿಚ್‌ ತಯಾರಿ

ಭಾರತದ ನೆಲದಲ್ಲಿ ಗೆಲ್ಲುವುದು ಸುಲಭವಲ್ಲ ಎಂದು ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿರುವುದರಿಂದಲೇ ಅದು ಗಂಭೀರವಾಗಿ ತಯಾರಿ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಭಾರತದ ಸ್ಪಿನ್ ಮಾಂತ್ರಿಕರನ್ನು ಎದುರಿಸುವುದು ಅವರಿಗೆ ಕಷ್ಟವಾಗಿದ್ದು, ಆಸ್ಟ್ರೇಲಿಯಾ ಸಿಡ್ನಿಯಲ್ಲಿ ವಿಶೇಷವಾದ ಧೂಳಿನ ಪಿಚ್‌ಗಳನ್ನು ಸಿದ್ಧಪಡಿಸಿದೆ.

ಉತ್ತರ ಸಿಡ್ನಿಯ ಬಾನ್ ಆಂಡ್ರ್ಯೂಸ್ ಓವಲ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಅಭ್ಯಾಸ ಮಾಡುತ್ತಿದ್ದಾರೆ. ಫೆಬ್ರವರಿ 1 ರಂದು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರಯಾಣಿಸಲಿದೆ.

 ಆಸ್ಟ್ರೇಲಿಯಾ ಕೋಚ್ ಸಂತಸ

ಆಸ್ಟ್ರೇಲಿಯಾ ಕೋಚ್ ಸಂತಸ

"ಭಾರತದ ನೆಲದಂತೆ ಸ್ಪಿನ್‌ ಪಿಚ್‌ ಸಿದ್ಧಪಡಿಸಲು ಕೀರನ್ ಇಲ್ಲಿನ ಸಿಬ್ಬಂದಿಯೊಂದಿಗೆ ಉತ್ತಮವಾದ ಕೆಲಸ ಮಾಡಿದ್ದಾರೆ. ಇಲ್ಲಿರುವ ಪಿಚ್ ಭಾರತದ ಪಿಚ್‌ಗಳಿಗೆ ಬಹುತೇಕ ಹೋಲಿಕೆಯಾಗುತ್ತದೆ ಎಂದು ನಾವು ನಂಬಿದ್ದೇವೆ. ಭಾರತ ಪಿಚ್‌ಗಳಂತೆ ಯಥಾವತ್ತು ಪಿಚ್‌ಗಳನ್ನು ಸಿದ್ದಪಡಿಸುವುದು ಕಷ್ಟ. ಆದರೂ, ಬಹುತೇಕ ಭಾರತದ ಪಿಚ್‌ಗಳಿಗೆ ಹೋಲಿಕೆಯಾಗುವಂತೆ ಸಿದ್ಧಪಡಿಸಿದ್ದು, ಅಭ್ಯಾಸ ಮಾಡುತ್ತಿದ್ದೇವೆ" ಎಂದು ಹೇಳಿದರು.

ಆಸ್ಟ್ರೇಲಿಯಾ ವಿಶೇಷ ಪಿಚ್‌ ಧೂಳಿನ ಸ್ವಭಾವದ ಹೊರತಾಗಿ, ಭಾರತದ ಪಿಚ್‌ಗಳಂತೆ ಬಿರುಕುಗಳನ್ನು ಹೊಂದಿದೆ. ಈ ಪಿಚ್‌ಗಳಲ್ಲಿ ಹೆಚ್ಚಿನ ತಿರುವು ಪಡೆಯುವುದರಿಂದ ಆಸ್ಟ್ರೇಲಿಯಾ ಬ್ಯಾಟರ್ ಗಳಿಗೆ ಕಠಿಣ ಸವಾಲು ಎದುರಾಗಲಿದೆ.

 ಬೆಂಗಳೂರಿನಲ್ಲಿ 5 ದಿನ ಅಭ್ಯಾಸ

ಬೆಂಗಳೂರಿನಲ್ಲಿ 5 ದಿನ ಅಭ್ಯಾಸ

ಫೆಬ್ರವರಿ 1 ರಂದು ಭಾರತಕ್ಕೆ ಬರುತ್ತಿರುವ ಆಸ್ಟ್ರೇಲಿಯಾ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸದ ಶಿಬಿರವನ್ನು ಹೊಂದಿದ್ದಾರೆ. ಯಾವುದೇ ಅಭ್ಯಾಸ ಪಂದ್ಯವನ್ನು ಆಡದಿದ್ದರು, ಆಸ್ಟ್ರೇಲಿಯಾ ತಂಡಕ್ಕೆ ಅಭ್ಯಾಸ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿಶೇಷ ಸ್ಪಿನ್ ಪಿಚ್‌ಗಳನ್ನು ವ್ಯವಸ್ಥೆ ಮಾಡಿದೆ.

ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ತೆರಳುವ ಮುನ್ನ ಆಸ್ಟ್ರೇಲಿಯಾ ಆಟಗಾರರು ಬೆಂಗಳೂರಿನಲ್ಲಿ 5 ದಿನಗಳ ಕಾಲ ಅಭ್ಯಾಸ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಸ್ಪಿನ್‌ಗೆ ನೆರವಾಗುವ ಧೂಳಿನ ಪಿಚ್‌ಗಳನ್ನು ಸಿದ್ಧಪಡಿಸುವಂತೆ ಆಸ್ಟ್ರೇಲಿಯಾ ಕ್ರಿಕೆಟ್‌ ಬಿಸಿಸಿಐಗೆ ಕೇಳಿಕೊಂಡಿದೆ.

ಆಸ್ಟ್ರೇಲಿಯಾ 2004 ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ, ಅದರಲ್ಲೂ ಕಳೆದ ಮೂರು ಟೆಸ್ಟ್ ಸರಣಿಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಈ ಬಾರಿ ಭಾರತವನ್ನು ಮಣಿಸಲು ಆಸ್ಟ್ರೇಲಿಯಾ ಸಿದ್ಧತೆ ಮಾಡಿಕೊಂಡಿದೆ. ಫೆಬ್ರವರಿ 9 ರಂದು ನಾಗ್ಪುರದಲ್ಲಿ ಸರಣಿಯ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Story first published: Monday, January 30, 2023, 13:28 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X