ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus Test: ಬೆಂಗಳೂರಿಗೆ ಬಂದ ಕಾಂಗರೂ ಪಡೆ: ಫೆಬ್ರವರಿ 2ರಿಂದ ಆಲೂರಿನಲ್ಲಿ ಅಭ್ಯಾಸ

BGT 2023: Australia Team Reached To Bengaluru To Prepare For Test Series

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದೆ. ಫೆಬ್ರವರಿ 1 ರಂದು ಬೆಂಗಳೂರಿಗೆ ಆಗಮಿಸಿರುವ ಕಾಂಗರೂ ಪಡೆ, 5 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲಿದೆ.

ಫೆಬ್ರವರಿ 1ರಂದು ಬುಧವಾರ ಬೆಂಗಳೂರಿಗೆ ಆಗಮಿಸಿರುವ ಆಸ್ಟ್ರೇಲಿಯಾ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದ ಫೋಟೋಗಳನ್ನು ಸ್ಪಿನ್ನರ್ ಆಶ್ಟನ್ ಅಗರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

IND vs NZ 3rd T20: ಅಹಮದಾಬಾದ್ ಪಿಚ್‌ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್‌?IND vs NZ 3rd T20: ಅಹಮದಾಬಾದ್ ಪಿಚ್‌ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್‌?

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ಆಸ್ಟ್ರೇಲಿಯಾ ತಂಡ 5 ದಿನಗಳ ಕಾಲ ಭರ್ಜರಿ ತಯಾರಿ ಮಾಡಿಕೊಳ್ಳಲಿದೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರಮುಖ ಆಟಗಾರ ಉಸ್ಮಾನ್ ಖವಾಜಾ ಮಾತ್ರ ಭಾರತದ ವೀಸಾ ಸಮಸ್ಯೆಯಿಂದ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಪ್ರಯಾಣಿಸಲಿದ್ದು ಬೆಂಗಳೂರಿನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಫೆಬ್ರವರಿ 9ರಂದು ಈ ಪಂದ್ಯ ಆರಂಭವಾಗಲಿದೆ. 4 ಪಂದ್ಯಗಳ ಟೆಸ್ಟ್ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಕೂಡ ಆಸ್ಟ್ರೇಲಿಯಾ ಭಾರತದ ವಿರುದ್ಧ ಆಡಲಿದೆ.

ಕೆಜಿಗಟ್ಟಲೆ ಕಾಫಿಬೀಜವನ್ನು ತಂದ ಲ್ಯಾಬುಸ್ಚಾಗ್ನೆ

ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಆಸ್ಟ್ರೇಲಿಯಾದಿಂದ ಹೊರಟಿರುವ ಫೋಟೋವನ್ನು ಹಂಚಿಕೊಂಡಿದ್ದರು. ಕಾಫಿ ಪ್ರಿಯರಾದ ಲ್ಯಾಬುಸ್ಚಾಗ್ನೆ ಒಂದು ಬ್ಯಾಗ್‌ನಲ್ಲಿ ಕಾಫಿ ಬೀಜಗಳ ಪ್ಯಾಕೆಟ್ ಅನ್ನು ತುಂಬಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಭಾರತಕ್ಕೆ ಬರುತ್ತಿದ್ದಂತೆ ಕಾಫಿ ಕುಡಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಷ್ಟನ್ ಅಗರ್ ಮಾರ್ನಸ್ ಲ್ಯಾಬುಸ್ಚಾಗ್ನೆ, ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ವೆಪ್ಸನ್ ವಿಮಾನದಲ್ಲಿ ಕಿತ್ತಳೆ ಜ್ಯೂಸ್ ಕುಡಿಯುತ್ತಿರುವ ಫೋಟೋವನ್ನು ಆಷ್ಟನ್ ಅಗರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 2004-05ರ ನಂತರ ಭಾರತದಲ್ಲಿ ಸರಣಿ ಗೆದ್ದಿಲ್ಲ

2004-05ರ ನಂತರ ಭಾರತದಲ್ಲಿ ಸರಣಿ ಗೆದ್ದಿಲ್ಲ

2004-05ರ ಬಳಿಕ ಭಾರತದಲ್ಲಿ ಆಸ್ಟ್ರೇಲಿಯಾ ಒಂದು ಬಾರಿಯೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಅಲ್ಲದೆ ಕಳೆದ ಎರಡು ಬಾರಿ ಬಾರ್ಡರ್ ಗವಾಸ್ಕರ್ ಸರಣಿ ತವರಿನಲ್ಲಿ ನಡೆದರು ಕೂಡ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ತವರಿನಲ್ಲೇ ಎರಡು ಬಾರಿ ಮುಖಭಂಗ ಅನುಭವಿಸಿರುವ ಕಾಂಗರೂ ಪಡೆ ಈ ಬಾರಿ ಸರಣಿ ಗೆಲ್ಲಲೇಬೇಕೆನ್ನುವ ಉತ್ಸಾಹದಲ್ಲಿ ಭಾರತಕ್ಕೆ ಬಂದಿದೆ.

4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ಈ ವರ್ಷಕ್ಕೆ ಅಂತ್ಯವಾಗಲಿದೆ ಎಂದು ಬಿಸಿಸಿಐ ಹೇಳಿದೆ. ಮುಂದಿನ ಬಾರಿ ಹೊಸ ಮಾದರಿಯಲ್ಲಿ ಟೆಸ್ಟ್ ಸರಣಿಯನ್ನು ಆಯೋಜಿಸಲು ಚಿಂತನೆ ನಡೆಸುತ್ತಿದೆ.

 ಟೆಸ್ಟ್ ಸರಣಿಗೆ ಯಾಕಿಷ್ಟು ಮಹತ್ವ?

ಟೆಸ್ಟ್ ಸರಣಿಗೆ ಯಾಕಿಷ್ಟು ಮಹತ್ವ?

ಉಭಯ ತಂಡಗಳು ಕೂಡ ಈ ಸರಣಿಯನ್ನು ಪ್ರತಿಷ್ಟೆಯನ್ನಾಗಿ ಪರಿಗಣಿಸಿವೆ. ಅದರಲ್ಲೂ ತಾನೇ ನಂಬರ್ 1 ಎಂದು ಮೆರೆಯುತ್ತಿದ್ದ ಕಾಂಗರೂ ಪಡೆಗೆ ಅವರದ್ದೇ ನೆಲದಲ್ಲಿ ಸೋಲಿನ ರುಚಿ ತೋರಿಸಿದ್ದು ಟೀಂ ಇಂಡಿಯಾ. ಉಭಯ ತಂಡಗಳ ಆಟಗಾರರ ನಡುವಿನ ಮಾತಿನ ಚಕಮಕಿ, ಪ್ರತಿಷ್ಟೆಯಿಂದಾಗಿ, ಮೈಂಡ್‌ ಗೇಮ್ ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ.

ಭಾರತ ಈ ಸರಣಿಯಲ್ಲಿ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಲುಪಲಿದೆ. ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಪ್ರಶಸ್ತಿ ಗೆಲ್ಲುವ ಕಾಂಗರೂ ಪಡೆಯ ಆಸೆಗೆ ಭಾರತ ತಂಡ ದೊಡ್ಡ ಅಡ್ಡಿ ಎಂದು ಗೊತ್ತಿರುವ ಆಸ್ಟ್ರೇಲಿಯಾ ಸರಣಿಯಲ್ಲಿ ಸೋಲಿಸಿ ಅವರು ಫೈನಲ್ ತಲುಪದಂತೆ ಮಾಡುವ ಲೆಕ್ಕಾಚಾರ ಕೂಡ ಇದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಲ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

Story first published: Wednesday, February 1, 2023, 12:57 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X