ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs Aus Test: ಟೆಸ್ಟ್ ಸರಣಿಗೆ ತಯಾರಿ: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್

BGT 2023: KL Rahul Started Batting Practice The Day After Married With Athiya Shetty

ಭಾರತದ ವಿಕೆಟ್ ಕೀಪರ್ ಬ್ಯಾಟರ್, ಟೆಸ್ಟ್ ತಂಡದ ಉಪನಾಯಕ ಕೆಎಲ್ ರಾಹುಲ್‌ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಬಾಲಿವುಡ್ ನಟಿ ಅಥಿಯಾ ಶೆಟ್ಟಿಯನ್ನು ಮದುವೆಯಾದ ಕೆಲವೇ ದಿನಗಳ ಬಳಿಕ ಮುಂಬೈನಲ್ಲಿ ತರಬೇತಿ ಮೈದಾನಕ್ಕೆ ಬಂದಿದ್ದಾರೆ.

ಫೆಬ್ರವರಿ 9ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ ಹೊಂದಿರುವ ಕೆಎಲ್ ರಾಹುಲ್‌ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಬೇಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕವಾಗಿರಲಿದೆ.

2022ರ ಡಿಸೆಂಬರ್‍‌ ನಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತದ ನಾಯಕತ್ವ ವಹಿಸಿಕೊಂಡಿದ್ದರು. ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದಿತ್ತು. ಆದರೆ, ನಾಯಕನಾಗಿ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ಕೆಎಲ್ ರಾಹುಲ್ ವಿಫಲರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಮ್ಮ ಫಾರ್ಮ್ ಮರಳಿ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಬಾಂದ್ರಾದಲ್ಲಿ ಕೆಎಲ್ ರಾಹುಲ್ ಅಭ್ಯಾಸ

ಟ್ವಿಟರ್ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಎಲ್ ರಾಹುಲ್ ಬಾಂದ್ರಾದ ಎಂಐಜಿ ಸಿಸಿಯ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಅನುಭವಿ ಬ್ಯಾಟರ್ ಆಗಿರುವ ರಾಹುಲ್ ಇತ್ತೀಚೆಗೆ ಉತ್ತಮ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.

ಮುಂದಿನ ದಿನಗಳಲ್ಲಿ ಕೆಎಲ್‌ ರಾಹುಲ್‌ರನ್ನು ಟೆಸ್ಟ್ ತಂಡದ ನಾಯಕತ್ವಕ್ಕೆ ಬಿಸಿಸಿಐ ಪರಿಗಣಿಸುವ ಸಾಧ್ಯತೆ ಇರುವುದರಿಂದ ಅವರು ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

BGT 2023: KL Rahul Started Batting Practice The Day After Married With Athiya Shetty

ಕೆಎಲ್‌ ರಾಹುಲ್‌ಗೆ ಹೆಚ್ಚಿನ ಆದ್ಯತೆ

ಕೆಎಲ್ ರಾಹುಲ್‌ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಕ್ಲಾಸ್ ಬ್ಯಾಟರ್ ಎಂದೇ ಪರಿಗಣಿಸಲ್ಪಡುವ ಕೆಎಲ್ ರಾಹುಲ್‌ಗೆ ರೋಹಿತ್ ಶರ್ಮಾ ಮೊದಲನೇ ಆದ್ಯತೆ ನೀಡುವುದು ಖಚಿತವಾಗಿದೆ. ನಾಯಕ ಮತ್ತು ತಂಡದ ಆಡಳಿತ ಮಂಡಳಿಯ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಕೆಎಲ್ ರಾಹುಲ್‌ ಮೇಲಿದೆ.

ಆರಂಭದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಬಿಂಬಿತರಾಗಿದ್ದ ಕೆಎಲ್ ರಾಹುಲ್ ನಂತರ ಎಲ್ಲಾ ಮಾದರಿಯಲ್ಲಿ ಆಡುವ ಮೂಲಕ ಛಾಪು ಮೂಡಿಸಿದ್ದರು. ಹಲವು ಪಂದ್ಯಗಳಲ್ಲಿ ಭಾರತಕ್ಕಾಗಿ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಮದುವೆಯಾದ ಬಳಿಕವಾದರೂ ಕೆಎಲ್ ರಾಹುಲ್‌ಗೆ ಅದೃಷ್ಟ ಕೈ ಹಿಡಿಯುತ್ತಾ?, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನವನ್ನು ನೀಡುತ್ತಾರ ಎನ್ನುವುದು ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ತಿಳಿಯಲಿದೆ.

Story first published: Tuesday, January 31, 2023, 13:48 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X