ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಭಾರತವನ್ನು ಹುರಿದುಂಬಿಸಲಿದೆ 8000 ಜನರ 'ಭಾರತ್ ಆರ್ಮಿ'

Bharat Army’s 8000 fans from 22 countries to converge in UK

ನವದೆಹಲಿ, ಮಾರ್ಚ್ 21: ಇಂಗ್ಲೆಂಡ್ ಆ್ಯಂಡ್ ವೇಲ್ಸ್‌ನಲ್ಲಿ ಮೇ 30ರಿಂದ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವುದಕ್ಕಾಗಿ ವಿಶ್ವದ 22 ರಾಷ್ಟ್ರಗಳಿಂದ ಸುಮಾರು 8000 ಅಭಿಮಾನಿಗಿಳಿರುವ 'ಭಾರತ್ ಆರ್ಮಿ' ಇಂಗ್ಲೆಂಡ್‌ನಲ್ಲಿ ಒಟ್ಟು ಸೇರಲಿದೆ.

ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರಾ ಸ್ಮಿತ್, ವಾರ್ನರ್!?ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರಾ ಸ್ಮಿತ್, ವಾರ್ನರ್!?

ವಿಶ್ವಕಪ್ ವೇಳೆ ಭಾರತ ಆರ್ಮಿಯ ಸುಮಾರು 8 ಸಾವಿರ ಅಭಿಮಾನಿಗಳು ಕ್ರೀಡಾಂಗಣದ ಸಮೀಪ ಕಾಣಿಸಿಕೊಳ್ಳಲಿದ್ದಾರೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂದಾಜಿಸಿದೆ. ಭಾರತ್ ಆರ್ಮಿ ಅನ್ನೋ ವಿಶಿಷ್ಟ ಅಭಿಮಾನಿಗಳ ಬಣ ಶುರುವಾಗಿದ್ದು 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್ ವೇಳೆ.

1999ರಲ್ಲಿ ಕೇವಲ ನಾಲ್ಕು ಮಂದಿಯಿಂದ ಶುರುವಾದ ಈ ಅಭಿಮಾನಿಗಳ ಗುಂಪು ಬೆಳೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಭಾರತ್ ಆರ್ಮಿಯ ಸದಸ್ಯರ ಸಂಖ್ಯೆ ಹೆಚ್ಚುತ್ತಿದ್ದು, ವಿಶ್ವದಲ್ಲಿ ಎಲ್ಲೇ ಪಂದ್ಯಗಳಿದ್ದರೂ ಅಲ್ಲಿ ಭಾರತವನ್ನು ಬೆಂಬಲಿಸಲು ಪ್ರತೀಸಾರಿ ಸುಮಾರು 5000-6000 ಭಾರತ್ ಆರ್ಮಿಯ ಅಭಿಮಾನಿಗಳು ಉಪಸ್ಥಿತರಿರುತ್ತಾರೆ.

ಸಿಎಸ್‌ಕೆ ವಿರುದ್ಧ ಜಯದೊಂದಿಗೆ ವೈಯಕ್ತಿಕ ದಾಖಲೆ ಬರೆಯುವತ್ತ ಕೊಹ್ಲಿ ಚಿತ್ತ!ಸಿಎಸ್‌ಕೆ ವಿರುದ್ಧ ಜಯದೊಂದಿಗೆ ವೈಯಕ್ತಿಕ ದಾಖಲೆ ಬರೆಯುವತ್ತ ಕೊಹ್ಲಿ ಚಿತ್ತ!

'ವಿಶ್ವಮಟ್ಟದ ಪಂದ್ಯಗಳಾದಾಗ ಭಾರತವನ್ನು ಬೆಂಬಲಿಸುವ ಉದ್ದೇಶದಿಂದ ಯುಕೆ ಮೂಲದ ಬೆಂಬಲಿಗರಿಂದ ಶುರುವಾದ ಈ 'ಭಾರತ್ ಆರ್ಮಿ' ಬೆಳೆಯುತ್ತಲೇ ಇದೆ' ಎಂದು ಭಾರತ್ ಆರ್ಮಿಯ ಸ್ಥಾಪಕರಲ್ಲಿ ಒಬ್ಬರಾದ ರಾಕೇಶ್ ಪಾಟೆಲ್ ಹೇಳಿದ್ದಾರೆ.

Story first published: Thursday, March 21, 2019, 16:12 [IST]
Other articles published on Mar 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X