ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ್ ಪೇ 11 ಶಾಪ್ ಕೀಪರ್ ಗಳಿಗೆ ಇಂಗ್ಲೆಂಡ್ ಪ್ರವಾಸ ಬಹುಮಾನ

BharatPe 11 Shopkeepers win a trip to England to see the WorldCup live!

ಬೆಂಗಳೂರು, ಮೇ 21: ಭಾರತದ ಅತಿದೊಡ್ಡ ಮರ್ಚೆಂಟ್ ಸರ್ವೀಸ್ ಮತ್ತು ಯುಪಿಐ ಪಾವತಿ ಆಪ್ಲಿಕೇಶನ್ ಆಗಿರುವ ಭಾರತ್‍ಪೇ 2019ರ ವಿಶ್ವಕಪ್ ಸ್ಪರ್ಧೆಯ ವಿಜೇತರ ಹೆಸರನ್ನು ಘೋಷಿಸಿದೆ. ಬಹುತೇಕ ಸ್ವತಂತ್ರ ವಹಿವಾಟುದಾರರನ್ನು ಒಳಗೊಂಡ 11 ಮಂದಿ ವ್ಯಾಪಾರಿಗಳು 2019ರ ಜುಲೈ 2ರಂದು ಇಂಗ್ಲೆಂಡಿಗೆ ಪ್ರವಾಸ ಕೈಗೊಂಡು, ಭಾರತ- ಬಾಂಗ್ಲಾದೇಶ ನಡುವಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಈ ಪಂದ್ಯ ಬರ್ಮಿಂಗ್‍ಹ್ಯಾಂನ ಎಜ್‍ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಭಾರತ್‍ಪೇ ಶಾಪ್‍ಕೀಪರ್ ಗಳು ಒಟ್ಟಾರೆ 55 ಲಕ್ಷ ರೂಪಾಯಿಯ ಬಹುಮಾನಗಳನ್ನು ಗೆದ್ದಿದ್ದಾರೆ. ಭಾರತ್ 11 ಮೊಟ್ಟಮೊದಲ ಬಾರಿಗೆ ದೇಶದಿಂದ ಹೊರಗೆ ಪ್ರವಾಸ ಕೈಗೊಳ್ಳುತ್ತಿದ್ದು, ಭಾರತ್‍ಪೇ ಕ್ಯೂಆರ್‍ನಲ್ಲಿ ಯುಪಿಐ ಪಾವತಿಸಿದ್ದಕ್ಕಾಗಿ ಬಹುಮಾನಗಳನ್ನು ಪಡೆದಿದ್ದಾರೆ. ಇತರೆ 1364 ಮಂದಿ ವಿಜೇತರ ಪೈಕಿ 44 ಮಂದಿ ಥಾಯ್ಲೆಂಡ್ ಪ್ರವಾಸ ಗೆದ್ದಿದ್ದರೆ, 55 ಎಲ್‍ಇಡಿ ಟಿವಿ, 55 ಸ್ಮಾರ್ಟ್‍ಫೋನ್, 110 ಅಮೆಝಾನ್ ಎಕ್ಹೋ ಮತ್ತು 1100 ಬಿಎಂಎಸ್ ವೋಚರ್ ಗಳನ್ನು ಗೆದ್ದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ್‍ಪೇ ಸಿಇಓ ಮತ್ತು ಸಹ ಸಂಸ್ಥಾಪಕ ಅಶ್ನೀರ್ ಗ್ರೋವರ್, "ಭಾರತ್‍ಪೇ, ದೇಶಕ್ಕೆ ಸೇವೆ ಸಲ್ಲಿಸುವ ಬದ್ಧತೆಯಾಗಿದ್ದು, ವ್ಯಾಪಾರಿಗಳು ಆಫ್‍ಲೈನ್‍ನಲ್ಲಿ ಕೂಡಾ ಸುಲಲಿತವಾಗಿ ಯುಪಿಐ ಪಾವತಿಯನ್ನು ಸ್ವೀಕರಿಸುವ ಅವಕಾಶ ಮಾಡಿಕೊಡುತ್ತಿದೆ.

ವಿಶ್ವಕಪ್ ಅಭಿಯಾನದ ಮುಖ್ಯ ಉದ್ದೇಶವೆಂದರೆ, ನಮ್ಮ ಬಳಕೆದಾರರಿಗೆ ಬಹುಮಾನ ನೀಡುವುದು ಮಾತ್ರವಲ್ಲದೇ, ವಿಶ್ವಾಸ, ನಿಷ್ಠೆಯನ್ನು ಉತ್ತೇಜಿಸುವುದು ಮತ್ತು ವ್ಯಾಪಾರಿ ಸಮುದಾಯದಲ್ಲಿ ರೋಮಾಂಚನ ಮೂಡಿಸುವುದಾಗಿದೆ" ಎಂದು ಹೇಳಿದ್ದಾರೆ.

ಕ್ರಿಕೆಟ್ ವಿಶ್ವಕಪ್ ಸ್ಪರ್ಧೆಯು ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ ಮತ್ತು ಮುಂಬೈ ಹೀಗೆ ಐದು ನಗರಗಳಿಗೆ ನೇರ ಸ್ಪರ್ಧೆಯಾಗಿದ್ದು, 2019ರ ಫೆಬ್ರವರಿಯಿಂದ ಏಪ್ರಿಲ್‍ವರೆಗೆ ನಡೆಸಲಾಗಿದೆ. ಪ್ರತಿ ಸ್ಥಳದಿಂದ 11 ಮಂದಿಯ ತಂಡವನ್ನು ಭಾರತ್‍ಪೇ ರಚಿಸಿದ್ದು, ಇದು ಭಾರತದ ಮೊಟ್ಟಮೊದಲ ಸಮುದಾಯ ಆಧರಿತ ಬಹುಮಾನ ಯೋಜನೆಯಾಗಿದೆ.

ಇಡೀ ತಂಡದ ಅಂಕಗಳನ್ನು ಲೆಕ್ಕ ಹಾಕಿ ಬಹುಮಾನಕ್ಕಾಗಿ ಅವರಿಗೆ ರ್ಯಾಂಕಿಂಗ್ ನೀಡಲಾಗಿದೆ. ಇದರ ಮುಖ್ಯ ಉದ್ದೇಶವೆಂದರೆ, ಆಫ್‍ಲೈನ್ ವ್ಯಾಪಾರಿಗಳಲ್ಲಿ ಕೂಡಾ ಈ ಸ್ಪರ್ಧೆಯ ಮೂಲಕ ಯುಪಿಐ ಪಾವತಿಯನ್ನು ಉತ್ತೇಜಿಸುವುದಾಗಿತ್ತು.

ಇದಲ್ಲದೇ ಭಾರತ್‍ಪೇ ಸಲ್ಮಾನ್ ಖಾನ್ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಂಡು ದೇಶದಲ್ಲಿ ಆಫ್‍ಲೈನ್ ಮೂಲಕವೂ ಯುಪಿಐ ಪಾವತಿಯನ್ನು ಸ್ವೀಕರಿಸುವ ವಿಧಾನವನ್ನು ಪ್ರಚುರಪಡಿಸುತ್ತಿದೆ. ಭಾರತ್‍ಪೇ ಕಂಪನಿಯು ಕ್ಷಿಪ್ರ ಪ್ರಗತಿಪಥದಲ್ಲಿದ್ದು, ಸಲ್ಮಾನ್‍ಖಾನ್ ಅವರನ್ನು ಒಳಗೊಂಡ ಬ್ರಾಂಡ್ ಜಾಹೀರಾತು ಅಭಿಯಾನವನ್ನು ಸದ್ಯದಲ್ಲೇ ಆರಂಭಿಸಲಿದೆ.

ಸಲ್ಮಾನ್‍ಖಾನ್ ಅವರನ್ನು ಒಳಗೊಂಡ ಬ್ರಾಂಡ್ ಜಾಹೀರಾತು ಅಭಿಯಾನದ ಮುಖ್ಯ ಉದ್ದೇಶ ಶಾಪ್‍ಕೀಪರ್‍ಗಳಿಗೆ ಶಿಕ್ಷಣ ನೀಡುವುದು ಹಾಗೂ ಯುಪಿಐ ಪಾವತಿಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವದು ಹಾಗೂ ತಮ್ಮ ವ್ಯವಹಾರ ಅಗತ್ಯತೆಗಳಲ್ಲಿ ಭಾರತ್‍ಪೇ ಅಪ್ಲಿಖೇಶನ್ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದಾಗಿದೆ.

Story first published: Tuesday, May 21, 2019, 22:45 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X