ವೇಗಿ ಭುವನೇಶ್ವರ್ ಕುಮಾರ್ ಸಿನಿಮಾ ಆದರೆ ರಾಜ್‌ಕುಮಾರ್ ನಟಿಸಬೇಕಂತೆ!

ಮೀರತ್: ಸರಣಿ ಗಾಯದಿಂದಾಗಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ವೃತ್ತಿ ಜೀವನ ನಲುಗಿದ್ದು ನಿಜ. ಇತ್ತ 2020ರಲ್ಲಿ ಭುವಿ ಗಾಯದಿಂದ ಚೇತರಿಸಿಕೊಂಡಿದ್ದರಾದರೂ ಭುವಿಗೆ 2020ರ ವರ್ಷ ಉತ್ತಮ ಆರಂಭ ನೀಡಲಿಲ್ಲ. ಗಾಯದಿಂದ ಚೇತರಿಸಿಕೊಂಡಿದ್ದ ಭುವನೇಶ್ವರ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಹೆಸರಿಸಲಾಗಿತ್ತು. ಆದರೆ ಮಳೆಯಿಂದ ಮೊದಲ ಪಂದ್ಯ ರದ್ದಾದರೆ, ಇನ್ನುಳಿದ ಪಂದ್ಯಗಳು ಕೊರೊನಾವೈರಸ್ ಕಾರಣ ನಡೆಯಲೇ ಇಲ್ಲ.

'ಆಸ್ಟ್ರೇಲಿಯಾದಲ್ಲಿ ಸಾಧಿಸುವ ಸಾಮರ್ಥ್ಯ ಆತನಿಗೆ': ಭಾರತೀಯನ ಹೆಸರಿಸಿದ ಹಸ್ಸಿ

ಉತ್ತರ ಪ್ರದೇಶದ ಮೀರತ್‌ನಲ್ಲಿ ಜನಿಸಿರುವ, 30ರ ಹರೆಯದ ವೇಗಿ ಭುವನೇಶ್ವರ್ ಈಗ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಟೀಮ್ ಇಂಡಿಯಾ ಜೆರ್ಸಿ ಧರಿಸಲು ಭುವಿ ಎದುರು ನೋಡುತ್ತಿದ್ದಾರೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಇತ್ತೀಚೆಗೆ ಸಂವಾದಲ್ಲಿ ಪಾಲ್ಗೊಂಡಿದ್ದಾಗ ಭುವಿಯಲ್ಲಿ, 'ನಿಮ್ಮ ಸಿನಿಮಾ ಆದರೆ ಯಾವ ನಟ ನಿಮ್ಮ ಪಾತ್ರದಲ್ಲಿ ನಟಿಸಲು ಬಯಸುತ್ತೀರಿ,' ಎಂಬ ಪ್ರಶ್ನೆ ಕೇಳಾಗಿತ್ತು. ಇದಕ್ಕೆ ಬುವಿ ಪ್ರತಿಕ್ರಿಯಿಸಿದ್ದಾರೆ.

ಮೀರತ್‌ನಲ್ಲಿ ಕ್ರಿಕೆಟ್ ಅಕಾಡೆಮಿ

ಮೀರತ್‌ನಲ್ಲಿ ಕ್ರಿಕೆಟ್ ಅಕಾಡೆಮಿ

ಗೇನ್ ಆ್ಯಕ್ಸೆಸ್ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೇನ್ಮೆಂಟ್ ಮತ್ತು ಸ್ಪೋರ್ಟ್ಸ್ ಪವರ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಭುವಿ, 'ಮೀರತ್‌ನಲ್ಲಿ ಒಂದು ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ನಾನು ಬಯಸಿದ್ದೇನೆ. ಯಾಕೆಂದರೆ ಮೀರತ್ ನನಗೆ ಬಹಳಷ್ಟು ಕೊಟ್ಟಿದೆ,' ಎಂದರು.

ಬಯೋಪಿಕ್ ಬಗ್ಗೆ ಮಾತು

ಬಯೋಪಿಕ್ ಬಗ್ಗೆ ಮಾತು

ಮೀರತ್‌ನಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ ಭುವಿ, ತನ್ನ ಬಯೋಪಿಕ್‌ ಬಗ್ಗೆಯೂ ಮಾತನಾಡಿದರು. ತನ್ನ ಬಯೋಪಿಕ್ ಏನಾದರೂ ಬರುವುದಿದ್ದರೆ, ನನ್ನ ಪಾತ್ರವನ್ನು ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ನಿರ್ವಹಿಸಲು ಬಯಸುತ್ತೇನೆ ಎಂದು ಭುವನೇಶ್ವರ್ ಹೇಳಿಕೊಂಡಿದ್ದಾರೆ.

ರಾಜ್‌ಕುಮಾರ್ ನಟಿಸಲಿ

ರಾಜ್‌ಕುಮಾರ್ ನಟಿಸಲಿ

'ದೈಹಿಕ ನೋಟದ ವಿಚಾರದಲ್ಲಿ ನಟ ರಾಜ್‌ಕುಮಾರ್ ರಾವ್ ನನಗೆ ಸಾಕಷ್ಟು ಹೋಲಿಕೆಯಾಗುತ್ತಾರೆ ಎಂದು ಒಮ್ಮೆ ಯಾರೋ ಒಬ್ಬರು ನನಗೆ ಸಲಹೆ ನೀಡಿದರು. ಹೀಗಾಗಿ ನನ್ನ ಬಯೋಪಿಕ್ ಬರುವುದಾರೆ ರಾಜ್‌ಕುಮಾರ್ ರಾವ್ ಅವರೇ ನನ್ನ ಪಾತ್ರ ನಿರ್ವಹಿಸಲು ಬಯಸುತ್ತೇನೆ,' ಎಂದು ಭುವಿ ಹೇಳಿದ್ದಾರೆ.

ಹಲವಾರು ಪ್ರಶಸ್ತಿ ಗೆದ್ದಿರುವ ರಾಜ್‌ಕುಮಾರ್

ಹಲವಾರು ಪ್ರಶಸ್ತಿ ಗೆದ್ದಿರುವ ರಾಜ್‌ಕುಮಾರ್

ಹರ್ಯಾಣ ರಾಜ್ಯದ ಗುರುಗ್ರಾಮದವರಾದ ರಾಜ್‌ಕುಮಾರ್‌ ರಾವ್ ಅವರಿಗೀಗ 31 ಹರೆಯ. ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಭಿನ್ನ ಪಾತ್ರಗಳಿಗಾಗಿ ರಾಜ್‌ಕುಮಾರ್ ಅವರು ನ್ಯಾಷನಲ್ ಫಿಲ್ಮ್ ಅವಾರ್ಡ್, ಮೂರು ಬಾರಿ ಫೀಲ್ಮ್ ಫೇರ್ ಅವಾರ್ಡ್, ಏಷ್ಯಾ ಪೆಸಿಪಿಕ್ ಸ್ಕ್ರೀನ್ ಅವಾರ್ಡ್ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 2, 2020, 11:09 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X