ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್‌ಬ್ಯಾಷ್‌ಲೀಗ್ ಆರಂಭಕ್ಕೆ ಕ್ಷಣಗಣನೆ: ಆಸಿಸ್ ಲೀಗ್‌ನ ಸಂಪೂರ್ಣ ಮಾಹಿತಿ

Big Bash League 2020-21: full details and live in India

ಇತ್ತ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದರೆ ಅತ್ತ ಆಸ್ಟ್ರೇಲಿಯಾ ಚುಟುಕು ಕ್ರಿಕೆಟ್ ಜಾತ್ರೆಗೆ ಸಿದ್ಧವಾಗಿದೆ. ಡಿಸೆಂಬರ್ 10ರಿಂದ ಕ್ರಿಕೆಟ್ ಆಸ್ಟ್ರೇಲಿಯಾ ಆಯೊಜಿಸುವ 10ನೇ ಆವೃತ್ತಿಯ ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್ ಆರಂಭವಾಗಲಿದೆ.

ಐಪಿಎಲ್ ಯಶಸ್ಸಿನ ನಂತರ ಈಗ ಲಂಕಾ ಪ್ರೀಮಿಯರ್ ಲೀಗ್ ಈಗಾಗಲೇ ನಡೆಯುತ್ತಿದ್ದು ಅದರ ಜೊತೆಗೆ ಬಿಗ್‌ಬ್ಯಾಷ್‌ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಭಾರತೀಯರು ಭಾರತೀಯರಿಗೂ ಈ ರೋಚಕ ಕ್ರಿಕೆಟ್ ಟೂರ್ನಿಯ ನೇರಪ್ರಸಾರದ ವೀಕ್ಷಣೆಗೆ ಅವಕಾಶವಿದೆ.

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡ

ಈ ಖ್ಯಾತ ಕ್ರಿಕೆಟ್ ಲೀಗ್‌ನಲ್ಲಿನ ನೇರಪ್ರಸಾರದ ಮಾಹಿತಿ, ಪ್ರಮುಖ ಆಟಗಾರರು ಹಾಗೂ ಹೊಸ ನಿಯಮಗಳ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ

ಟೂರ್ನಿಯ ಆರಂಭ ಹಾಗೂ ನೇರಪ್ರಸಾರ

ಟೂರ್ನಿಯ ಆರಂಭ ಹಾಗೂ ನೇರಪ್ರಸಾರ

ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್‌ನ 2020-21ನೇ ಆವೃತ್ತಿಗೆ ಡಿಸೆಂಬರ್ 10 ಅಂದರೆ ಗುರುವಾರದಂದು ಚಾಲನೆ ದೊರೆಯಲಿದೆ. ಪೈನಲ್ ಪಂದ್ಯ ಫೆಬ್ರವರಿ 6, 2021 ರಂದು ನಡೆಯಲಿದೆ. ಭಾರತದಲ್ಲಿ ಈ ಪಂದ್ಯಗಳ ನೇರಪ್ರಸಾರ ಇರಲಿದ್ದು ಸೋನಿ ಸಿಕ್ಸ್‌ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಬಿಗ್‌ಬ್ಯಾಷ್ ಲೀಗ್‌ನ ಆರಂಭ

ಬಿಗ್‌ಬ್ಯಾಷ್ ಲೀಗ್‌ನ ಆರಂಭ

ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್‌ಅನ್ನು ಕ್ರಿಕೆಟ್ ಆಸ್ಟ್ರೇಲಿಯಾ 2011ರಲ್ಲಿ ಆರಂಬ ಮಾಡಿತು. ಅಂದಿನಿಂದ ಪ್ರತಿ ವರ್ಷವೂ ಈ ಲೀಗ್ ನಡೆಯುತ್ತಿದ್ದು ಸಾಕಷ್ಟು ಅದ್ಭುತ ಕ್ಷಣಗಳನ್ನು ಅಭಿಮಾನಿಗಳಿಗೆ ನೀಡಿದೆ. ವಿಶ್ವ ಕ್ರಿಕೆಟ್‌ನ ಬಹುತೇಕ ದೇಶಗಳ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡು ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ಪಾಲ್ಗೊಳ್ಳುವ ಪ್ರಮುಖ ಆಟಗಾರರು

ಪಾಲ್ಗೊಳ್ಳುವ ಪ್ರಮುಖ ಆಟಗಾರರು

ಆರೋನ್ ಫಿಂಚ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ, ಕ್ರಿಸ್ ಲಿನ್, ಇಮ್ರಾನ್ ತಾಹಿರ್, ಮೊರ್ನೆ ಮೊರ್ಕೆಲ್, ಜೇಸನ್ ಹೋಲ್ಡರ್, ಶಾನ್ ಮಾರ್ಷ್, ಡೇನಿಯಲ್ ಹ್ಯೂಸ್, ಮಿಚೆಲ್ ಮಾರ್ಷ್, ಆಂಡ್ರ್ಯೂ ಟೈ, ಜೇಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಬೆನ್ ಕಟಿಂಗ್, ಅಲೆಕ್ಸ್ ಕ್ಯಾರಿ, ಜೇಮ್ಸ್ ಫಾಕ್ನರ್ , ರಶೀದ್ ಖಾನ್, ನಾಥನ್ ಕೌಲ್ಟರ್-ನೈಲ್, ಆಂಡ್ರೆ ಫ್ಲೆಚರ್ ಮತ್ತು ಇನ್ನೂ ಅನೇಕರು ಈ ಬಾರಿಯ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.

ಪಾಲ್ಗೊಳ್ಳುವ ತಂಡಗಳು

ಪಾಲ್ಗೊಳ್ಳುವ ತಂಡಗಳು

ಹತ್ತನೇ ಆವೃತ್ತಿಯ ಬಿಗ್‌ಬ್ಯಾಷ್ ಲೀಗ್‌ನಲ್ಲಿ 8 ತಂಡಗಳು ಪಾಳ್ಗೊಳ್ಳಲಿದೆ. ಹೋಬರ್ಟ್ ಹೆರಿಕೇನ್ಸ್, ಅಡಿಲೇಡ್ ಸ್ಟ್ರೈಕರ್ಸ್, ಮೇಲ್ಬೋರ್ನ್ ರೆನಿಗೇರ್ಡ್ಸ್, ಸಿಡ್ನಿ ಸಿಕ್ಸರ್ಸ್, ಪರ್ತ್ ಸ್ಕಾಚರ್ಸ್, ಸಿಡ್ನಿ ತಂಡರ್, ಬ್ರಿಸ್ನೇನ್ ಹೀಟ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಪಾಲ್ಗೊಳ್ಳುತ್ತಿದೆ.

ಕುತೂಹಲ ಮೂಡಿಸಿದೆ ಹೊಸ ನಿಯಮಗಳು

ಕುತೂಹಲ ಮೂಡಿಸಿದೆ ಹೊಸ ನಿಯಮಗಳು

ಬಿಗ್‌ಬ್ಯಾಷ್ ಲೀಗ್ ಹೊಸ ನಿಯಮಗಳನ್ನು ಅಳವಡಿಸಿಕೊಲ್ಳುವದರಲ್ಲಿ ಖ್ಯಾತವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಮೂರು ಪ್ರಮುಖ ನಿಯಮಗಳನ್ನು ತರಲಾಗಿದೆ. ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಷ್ ಬೂಸ್ಟ್ ಎಂಬ ನಿಯಮಗಳು ಈ ಬಾರಿಯ ಲೀಗ್‌ನ ಕುತೂಹಲವನ್ನು ಹೆಚ್ಚಿಸಲಿದೆ. ಪವರ್ ಸರ್ಜ್ ಅಂದರೆ ಟಿ20 ಕ್ರಿಕೆಟ್‌ನ ಆರಂಭದಲ್ಲಿ 6 ಓವರ್ ಪವರ್‌ ಪ್ಲೇ ಬದಲಿಗೆ 4 ಓವರ್ ಪವರ್ ಪ್ಲೇ ನಡೆಸಿ 2 ಪವರ್‌ಪ್ಲೇ ಓವರ್‌ಗಳನ್ನು ಬ್ಯಾಟಿಂಗ್ ತಂಡ 10 ಓವರ್‌ಗಳ ಬಳಿಕ ತಮಗಿಷ್ಟ ಬಂದಾಗ ಪಡೆಯಲ ಅವಕಾಶ ದೊರೆಯಲಿದೆ. ಎಕ್ಸ್ ಫ್ಯಾಕ್ಟರ್ ಅಂದರೆ 10 ಓವರ್‌ಗಳ ಬಳಿಕ ಪ್ಲೇಯಿಂಗ್‌ 11ನಲ್ಲಿ ಇಲ್ಲದ ಆಟಗಾರರು ಅಂದರೆ 12, 13ನೇ ಆಟಗಾರರು ಬದಲಿ ಆಟಗಾರರಾಗಿ ಮೈದಾನಕ್ಕೆ ಇಳಿಯಲು ಅವಕಾಶವಿದೆ. ಬ್ಯಾಷ್ ಬೂಸ್ಟ್ ಅಂದರೆ ಚೇಸಿಂಗ್ ತಂಡ 10 ಓವರ್‌ ಒಳಗೆ ಗುರಿ ತಲುಪಿದರೆ ಗೆದ್ದಿದ್ದಕ್ಕಾಗಿ ಕೊಡುವ 3 ಪಾಯಿಂಟ್ಸ್ ಜೊತೆಗೆ ಮತ್ತೊಂದು ಬೋನಸ್ ಅಂಕ ನೀಡಲಾಗುತ್ತದೆ.

Story first published: Thursday, December 10, 2020, 10:26 [IST]
Other articles published on Dec 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X