ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್ ಬ್ಯಾಷ್: ಮೆಲ್ಬರ್ನ್‌ ರೆನೆಗೇಡ್ಸ್ ವಿರುದ್ಧ ಹೊಬಾರ್ಟ್‌ ಹರಿಕೇನ್ಸ್‌ಗೆ 6 ರನ್‌ಗಳ ರೋಚಕ ಜಯ

Big bash league team hobart hurricanes

ಬಿಗ್ ಬ್ಯಾಷ್ ಲೀಗ್ 2021-22 ಸೀಸನ್‌ನ 54ನೇ ಪಂದ್ಯದಲ್ಲಿ ಮೆಲ್ಬರ್ನ್‌ ರೆನೆಗೇಟ್ಸ್‌ ವಿರುದ್ಧ ಕೊನೆಯ ಓವರ್‌ನಲ್ಲಿ ಹೊಬಾರ್ಟ್‌ ಹರಿಕೇನ್ಸ್ 6ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹೊಬಾರ್ಟ್‌ ಹರಿಕೇನ್ಸ್ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತು.

ಆರಂಭಿಕ ಬ್ಯಾಟ್ಸ್ ಬೆನ್ ಮೆಕ್‌ಡರ್ಮೊಟ್ ಕೇವಲ 3 ರನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಹೊಬಾರ್ಟ್ ಆರಂಭಿಕ ಆಘಾತ ಅನುಭವಿಸಿತು. ಆದ್ರೆ ಮತ್ತೊಬ್ಬ ಓಪನರ್ ಕ್ಯಾಲೆಬ್ ಜುವೆಲ್ 35 ರನ್ ಮತ್ತು ನಾಯಕ ಮ್ಯಾಥ್ಯೂ ವೇಡ್ 48 ರನ್‌ಗಳಿಸಿ ತಂಡಕ್ಕೆ ಆಧಾರವಾದ್ರು.

ಕ್ಯಾಲೆಬ್ ಜುವೆಲ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಡಿ ಆರ್ಸಿ ಶಾರ್ಟ್ 22 ಎಸೆತಗಳಲ್ಲಿ 37 ರನ್ ಸಿಡಿಸಿದ್ರು. ಟಿಮ್ ಡೇವಿಡ್ ಕೇವಲ 20 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಸಹಿತ 46 ರನ್‌ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚುವಲ್ಲಿ ನೆರವಾದ್ರು.

IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!IPL 2022: ಲಕ್ನೋ ತಂಡಕ್ಕೆ ಕೆ.ಎಲ್ ರಾಹುಲ್, ಸ್ಟೊಯ್ನಿಸ್, ರವಿ ಬಿಷ್ಣೋಯ್ ಸೇರ್ಪಡೆ!

5 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿದ ಹೊಬಾರ್ಟ್ ಹರಿಕೇನ್ಸ್, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು.

183ರನ್ ಗುರಿ ಬೆನ್ನತ್ತಿದ ಆ್ಯರೋನ್ ಫಿಂಚ್ ನಾಯಕತ್ವದ ಮೆಲ್ಬರ್ನ್ ರೆನೆಗೇಡ್ಸ್‌ ಉತ್ತಮ ಆರಂಭ ಪಡೆದ್ರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡಿತು. ಜೇಮ್ಸ್ ಸೆಮೌರ್ 24, ಆ್ಯರೋನ್ ಫಿಂಚ್ 75 ರನ್, ಶಾನ್ ಮಾರ್ಷ್‌ 51 ರನ್ ಸಿಡಿಸುವ ಮೂಲಕ ತಂಡವನ್ನ ಗೆಲುವಿನ ಸಮೀಪ ತೆಗೆದುಕೊಂಡು ಹೋದರು.

ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಭಾರತದ ಉನ್ಮುಕ್ ಚಾಂದ್ 6, ಜೊನಾಥನ್ ಮರ್ಲೊ 1, ಸ್ಯಾಮ್ ಹಾರ್ಪರ್ 3, ವಿಲ್ ಸದರ್ಲ್ಯಾಂಡ್ ಅಜೇಯ 6ರನ್‌ ಕಲೆಹಾಕಿದ್ರು ಸಹ ತಂಡವನ್ನ ಗೆಲುವಿನ ದಡ ತಲುಪಿಸಲು ವಿಫಲಗೊಂಡ್ರು. ಹೊಬಾರ್ಟ್ ವೇಗಿ ಥಾಮಸ್ ರೋಜರ್ಸ್ 3, ನೇಪಾಳ ಮೂಲದ ಸ್ಪಿನ್ನರ್ ಸಂದೀಪ್ 2 ವಿಕೆಟ್ ಕಬಳಿಸುವ ಮೂಲಕ ಎದುರಾಳಿಯನ್ನ ಕಟ್ಟಿಹಾಕಿದ್ರು.

ಅಂತಿಮವಾಗಿ ಮೆಲ್ಬೋರ್ನ್ ರೆನಿಗೇಟ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕುವ ಮೂಲಕ 6 ರನ್‌ಗಳಿಂದ ಸೋಲನ್ನ ಕಂಡಿತು. ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳ ಮುಟ್ಟಿದ್ದು ಆಡಿದ 13 ಪಂದ್ಯಗಳಲ್ಲಿ ಕೇವಲ 3 ಜಯ ಸಾಧಿಸಿದೆ.

ಇನ್ನು ಈ ಪಂದ್ಯದ ಗೆಲುವಿನ ಮೂಲಕ ಹೊಬಾರ್ಟ್‌ ಹರಿಕೇನ್ಸ್ 27 ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದು, ಟೂರ್ನಿಯಲ್ಲಿ ತನ್ನ ಓಟವನ್ನ ಜೀವಂತವಾಗಿರಿಸಿದೆ.

ಹೋಬಾರ್ಟ್ ಹರಿಕೇನ್ಸ್ ಪ್ಲೇಯಿಂಗ್ 11

ಬೆನ್ ಮೆಕ್‌ಡರ್ಮಾಟ್ (ವಿಕೆಟ್ ಕೀಪರ್), ಜೋಶ್ ಕನ್, ಮ್ಯಾಥ್ಯೂ ವೇಡ್ (ನಾಯಕ), ಡಿ ಆರ್ಸಿ ಶಾರ್ಟ್, ಟಿಮ್ ಡೇವಿಡ್, ಕ್ಯಾಲೆಬ್ ಜುವೆಲ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋರ್ಡಾನ್ ಥಾಂಪ್ಸನ್, ಥಾಮಸ್ ರೋಜರ್ಸ್, ರಿಲೆ ಮೆರೆಡಿತ್, ಸಂದೀಪ್ ಲಾಮಿಚಾನೆ

ಬೆಂಚ್: ಮಿಚೆಲ್ ಓವನ್, ವಿಲ್ ಪಾರ್ಕರ್, ಗೇಬ್ ಬೆಲ್, ವಿಲ್ ಸ್ಯಾಂಡರ್ಸ್, ಮ್ಯಾಕಲಿಸ್ಟರ್ ರೈಟ್

ಮೆಲ್ಬೋರ್ನ್ ರೆನೆಗೇಡ್ಸ್ ಪ್ಲೇಯಿಂಗ್ 11
ಆ್ಯರೋನ್ ಫಿಂಚ್‌ (ನಾಯಕ), ಜೇಮ್ಸ್ ಸೆಮೌರ್, ಶಾನ್ ಮಾರ್ಷ್, ಉನ್ಮುಕ್ತ್ ಚಂದ್, ಜೊನಾಥನ್ ಮೆರ್ಲೊ, ಸ್ಯಾಮ್ ಹಾರ್ಪರ್ (ವಿಕೆಟ್ ಕೀಪರ್), ವಿಲ್ ಸದರ್ಲ್ಯಾಂಡ್, ಕ್ಯಾಮರೂನ್ ಬಾಯ್ಸ್, ಝಾಕ್ ಇವಾನ್ಸ್, ಜೋಶ್ ಲಾಲೋರ್, ಜಹೀರ್ ಖಾನ್

ಬೆಂಚ್: ಬ್ರೇಡೆನ್ ಸ್ಟೆಪಿಯನ್, ಮಿಚೆಲ್ ಪೆರ್ರಿ, ಜ್ಯಾಕ್ ಪ್ರೆಸ್‌ವಿಡ್ಜ್

Story first published: Tuesday, January 18, 2022, 18:59 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X