ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟೂರ್ನಿಗೂ ಮುನ್ನ ದೊಡ್ಡ ಆಘಾತ: ಬೆಂಗಾಲ್‌ನ 7 ಸದಸ್ಯರಿಗೆ ಕೊರೊನಾ ಪಾಸಿಟಿವ್

Bengal Ranaji team

ಪ್ರತಿಷ್ಠಿತ ದೇಶೀಯ ಟೂರ್ನಮೆಂಟ್‌ಗಳಲ್ಲಿ ಒಂದಾದ ರಣಜಿ ಟೂರ್ನಮೆಂಟ್ ಆರಂಭಕ್ಕೂ ಮುನ್ನವೇ ದೊಡ್ಡ ಆಘಾತವುಂಟಾಗಿದೆ. ಬೆಂಗಾಳ ತಂಡವು ರಣಜಿ ಟೂರ್ನಿಗೆ ತಯಾರಿ ನಡೆಸುತ್ತಿರುವಾಗಲೇ ತಂಡದ ಏಳು ಸದಸ್ಯರು ಕೋವಿಡ್-19 ಪಾಸಿಟಿವ್‌ ಆಗಿ ಕ್ವಾರಂಟೈನ್‌ಗೆ ಒಳಗಾಗುವಂತಾಗಿದೆ.

ಧೋನಿಗೆ ಇದ್ದ ಸಪೋರ್ಟ್‌, ನನಗೂ ಇದ್ದಿದ್ರೆ ಇನ್ನೂ ಹೆಚ್ಚಿನ ಕಾಲ ಆಡ್ತಿದ್ದೆ: ಹರ್ಭಜನ್ ಸಿಂಗ್ಧೋನಿಗೆ ಇದ್ದ ಸಪೋರ್ಟ್‌, ನನಗೂ ಇದ್ದಿದ್ರೆ ಇನ್ನೂ ಹೆಚ್ಚಿನ ಕಾಲ ಆಡ್ತಿದ್ದೆ: ಹರ್ಭಜನ್ ಸಿಂಗ್

ಗ್ರೂಪ್‌ ಬಿನಲ್ಲಿ ಸ್ಥಾನ ಪಡೆದಿರುವ ಬೆಂಗಾಳ ಜೊತೆಗೆ ವಿದರ್ಭ, ರಾಜಸ್ತಾನ, ಕೇರಳ, ಹರಿಯಾಣ ಮತ್ತು ತ್ರಿಪುರಾ ಜೊತೆಗೆ ಪಂದ್ಯಗಳನ್ನಾಡಲಿದೆ. ಜನವರಿ 13ರಂದು ಬೆಂಗಳೂರಿನಲ್ಲಿ ತ್ರಿಪುರಾ ವಿರುದ್ಧ ಮೊದಲ ಪಂದ್ಯವನ್ನಾಡಲು ಬೆಂಗಾಳ ಎಲ್ಲಾ ತಯಾರಿ ನಡೆಸಲು ಸಜ್ಜಾಗಿತ್ತು. ಅಷ್ಟರೊಳಗೆ ತಂಡದಲ್ಲಿನ ಏಳು ಸದಸ್ಯರಿಗೆ ಕೊರೊನಾ ವಕ್ಕರಿಸಿದೆ.

'' ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಅಸೋಸಿಯೇಷನ್ ಬೆಂಗಾಲ್ (CAB) ಎಲ್ಲಾ ಆಟಗಾರರಿಗೆ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಿದೆ'' ಎಂದು ಸಿಎಬಿ ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಹೇಳಿದ್ದಾರೆ.

"ಫಲಿತಾಂಶಗಳು ಹೊರಬಂದಿವೆ ಮತ್ತು ಕೆಲವು ಆಟಗಾರರು ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ ಎಂದು ಕಂಡುಬಂದಿದೆ. ಸಿಎಬಿ ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ." ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಆರು ಬೆಂಗಾಳ ಆಟಗಾರರಾದ ಸುದೀಪ್ ಚಟರ್ಜಿ, ಅನುಷ್ತಪ್‌ ಮಜೂಂದಾರ್, ಖಾಜಿ ಜುನೈದ್ ಸೈಫಿ, ಗೀತ್ ಪುರಿ, ಪ್ರದೀಪ್ತ ಪ್ರಾಮಾಣಿಕ್, ಸೂರಜಿತ್ ಯಾದವ್ ಮತ್ತು ಅಸಿಸ್ಟೆಂಟ್ ಕೋಚ್ ಸೌರಶಿಶ್ ಲಹಿರಿ ಕೋವಿಡ್-19 ಪಾಸಿಟಿವ್ ಆಗಿದ್ದಾರೆ.

ಈ ಎಲ್ಲಾ ಆಟಗಾರರು ಮತ್ತು ಕೋಚ್ ಜಾದವ್‌ಪುರ್ ಯೂನಿವರ್ಸಿಯ ಎರಡನೇ ಕ್ಯಾಂಪಸ್ ಗ್ರೌಂಡ್‌ನಲ್ಲಿ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದ್ರು.

Virat Kohli ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ | Oneindia Kannada

ಈ ಬೆಳವಣಿಗೆ ಹಿನ್ನಲೆಯಲ್ಲಿ ಬೆಂಗಾಳ ಜೊತೆಗಿನ ಎರಡು ದಿನಗಳ ಅಭ್ಯಾಸ ಪಂದ್ಯವನ್ನ ಪೃಥ್ವಿ ಶಾ ನೇತೃತ್ವದ ಮುಂಬೈ ತಂಡ ರದ್ದು ಮಾಡಿದೆ.

Story first published: Tuesday, January 4, 2022, 11:23 [IST]
Other articles published on Jan 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X