ಫ್ಯಾಂಟಸಿ ಕ್ರಿಕೆಟ್ ಲೀಗ್ ಫ್ಯಾನ್ಸ್ ಗಳಿಗೆ ಆಘಾತ, ಡ್ರೀಮ್ಸ್11 ನಿರ್ಬಂಧ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ಹೆಸರಿನಲ್ಲಿ ಸಾವಿರಾರು ಕೋಟಿ ರು ಬೆಟ್ಟಿಂಗ್ ವ್ಯವಹಾರ ನಡೆಯುವುದು ಗೊತ್ತಿರಬಹುದು. ಆದರೆ, ಭಾರತದಲ್ಲಿ ಬೆಟ್ಟಿಂಗ್ ನಿಷೇಧವಿದ್ದರೂ ಆನ್ ಲೈನ್ ಫ್ಯಾಂಟಸಿ ಕ್ರಿಕೆಟ್ ಲೀಗ್ ಆಡಲು ಅನುಮತಿಯಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟರ್ ಧೋನಿ, ರಿಷಬ್ ಪಂತ್, ಕೆಎಲ್ ರಾಹುಲ್, ಬೂಮ್ರಾ, ರೋಹಿತ್ ಶರ್ಮ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಒಂದಲ್ಲ ಒಂದು ಫ್ಯಾಂಟಸಿ ಲೀಗ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಈ ಪೈಕಿ ಭಾರತದ ಅತ್ಯಂತ ಜನಪ್ರಿಯ ಫ್ಯಾಂಟಸಿ ಲೀಗ್ ವೇದಿಕೆ ಡ್ರೀಮ್ಸ್11ಫ್ಯಾನ್ಸ್ ಗಳಿಗೆ ಕಹಿ ಸುದ್ದಿ ಇಲ್ಲಿದೆ. ಆಂಧ್ರಪ್ರದೇಶದಲ್ಲಿ ಮಂಗಳವಾರದಿಂದ ಡ್ರೀಮ್ಸ್11 ಆಡೋಕೆ ಆಗುವುದಿಲ್ಲವಂತೆ. ಈ ಬಗ್ಗೆ ಡ್ರೀಮ್ಸ್11 ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಡ್ರೀಮ್ಸ್11ರ ಹಣ ನೀಡಿ ಆಡುವ pay-to-play ಸ್ಪರ್ಧೆಗಳಲ್ಲಿ ಆಂಧ್ರಪ್ರದೇಶದ ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಳ್ಳಲು ಸಾಧ್ಯವಿಲ್ಲ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಸೆಪ್ಟೆಂಬರ್ 29ರ ಬೆಳಗ್ಗೆ 11:30ರಿಂದ ಆಂಧ್ರದ ಜನತೆ pay-to-play ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಆಂಧ್ರಪ್ರದೇಶ ಸರ್ಕಾರದ ಹೊಸ ನೀತಿಯೇ ಕಾರಣ. ಆದ್ರೆ, ಉಚಿತ ಸ್ಪರ್ಧೆ ಅಥವಾ ಖಾಸಗಿ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆದರೆ, ದುಡ್ಡು ಕಟ್ಟಿ ಆಟ ಆಡುವಂತಿಲ್ಲ.

RCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ಡ್ರೀಮ್11 ಅಕೌಂಟ್ ಬ್ಯಾಲೆನ್ಸ್: ಡ್ರೀಮ್11 ಆಡುವವರು ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಗಾಬರಿಯಾಗಬೇಕಾಗಿಲ್ಲ. ಅದು ಸುರಕ್ಷಿತವಾಗಿರಲಿದೆ. ನಿಮಗೆ ಬೇಕೆನಿಸಿದಾಗ ವಿಥ್ ಡ್ರಾ ಮನವಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ ನೀವು ಡ್ರೀಮ್11 ಹೆಲ್ಪ್ ಡೆಸ್ಕ್ ಸಂಪರ್ಕಿಸಬಹುದು. ಆದರೆ ಕ್ಯಾಶ್ ಬೋನಸ್ ನೀಡಿರುವುದು ಮಾತ್ರ ವಿಥ್ ಡ್ರಾಗೆ ಸಿಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಡ್ರೀಮ್11 ಬಳಸುತ್ತಿದ್ದ ಆಂಧ್ರಪ್ರದೇಶದ ಅಭಿಮಾನಿಗಳಿಗೆ ಐಪಿಎಲ್ ಸಂದರ್ಭದಲ್ಲಿ ಕೈಕಟ್ಟಿ ಹಾಕಿದ್ದಂತಾಗಿದೆ. ಸರ್ಕಾರದ ನಿರ್ಬಂಧದಿಂದ ಡ್ರೀಮ್11 ಪೂರ್ಣಪ್ರಮಾಣ ಬಳಕೆ ಸಾಧ್ಯವಾಗುತ್ತಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 30, 2020, 0:15 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X