ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ

IND VS AUS 4TH TEST : ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ | Oneindia Kannada

ಸಿಡ್ನಿ, ಜನವರಿ 07 : ಆಸ್ಟ್ರೇಲಿಯಾದವರ ವಿರುದ್ಧದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾದಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದ್ದು, ಇದು ನನ್ನ ಅತ್ಯುತ್ತಮ ಸಾಧನೆಯಲ್ಲಿ ಒಂದು ಎಂದು ವಿರಾಟ್ ಹೆಮ್ಮೆಯಿಂದ ಹೇಳಿದ್ದಾರೆ.

ಮಳೆಯಿಂದಾಗಿ ನಾಲ್ಕನೇ ಟೆಸ್ಟ್ ಡ್ರಾ ಆಗಿದ್ದರಿಂದ, ಮುಕ್ತಾಯವಾದ ಸರಣಿಯನ್ನು ವಿರಾಟ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ 2-1 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ನಾಲ್ಕನೇ ಟೆಸ್ಟ್ ನಲ್ಲಿ ಮಳೆಯ ಆಟ ನಡೆಯದಿದ್ದರೆ, ಫಾಲೋ ಆನ್ ಹೇರಿದ್ದ ಭಾರತ ಖಂಡಿತ ಗೆಲ್ಲುವ ಅವಕಾಶ ಪಡೆದಿತ್ತು.

ತಾವೇ ಸ್ವತಃ ಉತ್ತಮವಾಗಿ ಆಡಿರುವ ವಿರಾಟ್ ಕೊಹ್ಲಿ ಅವರು, ಪರ್ತ್ ನಲ್ಲಿ ಸೆಂಚುರಿ ಬಾರಿಸಿದ್ದಲ್ಲದೆ ಸರಣಿಯಲ್ಲಿ 282 ರನ್ ಗಳಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ನಿಪುಣ ಮತ್ತು ಯುವ ಕ್ರಿಕೆಟ್ ಆಟಗಾರರೊಂದಿಗೆ ಆಟವಾಡುತ್ತಿರುವುದು ತಮಗೆ ಅತ್ಯಂತ ಸಂತಸದಾಯಕವಾಗಿದೆ ಎಂದು ಬೀಗಿದ್ದಾರೆ ವಿರಾಟ್ ಕೊಹ್ಲಿ.

2-1 ಗೆಲುವು: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಸಾಧನೆ 2-1 ಗೆಲುವು: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಸಾಧನೆ

ಕಳೆದ 71 ವರ್ಷಗಳಲ್ಲಿ ಮೊದಲ ಬಾರಿಗೆ ಸಿಕ್ಕಿರುವ ಈ ಟೆಸ್ಟ್ ಸರಣಿ ಗೆಲುವನ್ನು ವಿರಾಟ್ ಕೊಹ್ಲಿ ಅವರು 2011ರಲ್ಲಿ ಭಾರತದ ವಿಶ್ವಕಪ್ ಗೆಲುವಿಗಿಂತಲೂ ದೊಡ್ಡದು ಎಂದು ವಿರಾಟ್ ಹೇಳಿಕೊಂಡಿದ್ದಾರೆ.

ಇಷ್ಟು ಸಂತಸ ಯಾವತ್ತೂ ಆಗಿರಲಿಲ್ಲ

ಇಷ್ಟು ಸಂತಸ ಯಾವತ್ತೂ ಆಗಿರಲಿಲ್ಲ

ಸಿಡ್ನಿ ಟೆಸ್ಟ್ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದೇ ಮಾತು ಹೇಳಬೇಕೆಂದರೆ, ಈ ಗೆಲುವು ನನಗೆ ಹೆಮ್ಮೆ ತಂದಿದೆ. ನನಗಿವತ್ತಾದಷ್ಟು ಸಂತಸ ಯಾವತ್ತೂ ಆಗಿರಲಿಲ್ಲ. ಕಳೆದ ಹನ್ನೆರಡು ತಿಂಗಳುಗಳಿಂದ ನಾವು ಒಂದು ತಂಡವಾಗಿ ಅತ್ಯುತ್ತಮವಾಗಿ ಆಡುತ್ತಿದ್ದೇವೆ. ಇಂತಹ ತಂಡದ ನೇತೃತ್ವ ವಹಿಸಿರುವುದೇ ನನಗೆ ಸಿಕ್ಕ ಗೌರವ. ಈ ಸಂತಸವನ್ನು ಭರ್ಜರಿಯಾಗಿ ಆಚರಿಸುತ್ತೇವೆ ಎಂದು ವಿರಾಟ್ ಕೊಹ್ಲಿ ಅನಿಸಿಕೆ ಹಂಚಿಕೊಂಡರು.

ಸಿಡ್ನಿ ಟೆಸ್ಟ್ : ಆಸ್ಟ್ರೇಲಿಯಾ 300ಕ್ಕೆ ಆಲೌಟ್, ಫಾಲೋಅನ್ ನೀಡಿದ ಭಾರತ

ಅಡಿಲೇಡ್, ಮೆಲ್ಬೋರ್ನ್ ನಲ್ಲಿ ಗೆಲುವು

ಅಡಿಲೇಡ್, ಮೆಲ್ಬೋರ್ನ್ ನಲ್ಲಿ ಗೆಲುವು

ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಅನ್ನು ಗೆದ್ದು ಸರಣಿಯನ್ನು ಭಾರತ ತಂಡ ಭರ್ಜರಿಯಾಗಿ ಆರಂಭಿಸಿತ್ತು. ನಂತರ ಪರ್ತ್ ನಲ್ಲಿ ನಡೆದ ಎರಡನೇ ಟೆಸ್ಟ್ ಅನ್ನು ಭಾರತ ಸೋತರೂ, ಮೆಲ್ಬೋರ್ನ್ ನಲ್ಲಿ ನಡೆದ ಮೂರನೇ ಟೆಸ್ಟ್ ಅನ್ನು ಗೆದ್ದುಕೊಂಡು 2-1 ಅಂತರದಿಂದ ಮುನ್ನಡೆ ಕಾದುಕೊಂಡಿತು. ಸಿಡ್ನಿ ಟೆಸ್ಟ್ ನಲ್ಲಿ ಕೂಡ, ಆಸ್ಟ್ರೇಲಿಯಾ ನೆಲದಲ್ಲಿಯೇ ಆಸೀಸ್ ಗೆ ಫಾಲೋ ಆನ್ ಹೇರಿ ಭಾರತ ಗೆಲ್ಲುವ ದಾರಿಯಲ್ಲಿತ್ತು. ಆದರೆ ಮಳೆರಾಯ ಆಸ್ಟ್ರೇಲಿಯಾಗೆ ಭಾರೀ ಮುಜುಗರವನ್ನು ತಪ್ಪಿಸಿದ.

ಸಿಡ್ನಿ, 4ನೇ ಟೆಸ್ಟ್: ವಿಶೇಷತೆಯೊಂದಿಗೆ ಅಭಿಮಾನಿಗಳ ಮನಗೆದ್ದ ಕೊಹ್ಲಿ

ವಿಶ್ವಕಪ್ ಗೆಲುವಿಗಿಂತ ದೊಡ್ಡದು

ವಿಶ್ವಕಪ್ ಗೆಲುವಿಗಿಂತ ದೊಡ್ಡದು

ಈ ಗೆಲುವನ್ನು ಭಾರತದ 2011ರ ಐಸಿಸಿ ವಿಶ್ವಕಪ್ ಗೆಲುವಿಗಿಂತಲೂ ಅತ್ಯುತ್ತಮವಾದದ್ದು ಎಂದು ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿದ್ದ 28 ವರ್ಷಗಳ ನಂತರ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಶ್ರೀಲಂಕಾವನ್ನು ಫೈನಲ್ ನಲ್ಲಿ ಮಣಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ಆಗ ನಾನಿನ್ನೂ ಯುವ ಆಟಗಾರನಾಗಿದ್ದೆ, ಇತರರು ಗೆದ್ದ ಖುಷಿಯಲ್ಲಿ ಭಾವುಕರಾಗುವುದನ್ನು ನೋಡಿದ್ದೆ. ಆದರೆ, ವೈಯಕ್ತಿಕವಾಗಿ ಇದು ನನ್ನ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯಾ ನೆಲದಲ್ಲಿಯೇ ಸಿಕ್ಕ ಸರಣಿಯ ಗೆಲುವು ಅದಕ್ಕಿಂತಲೂ ಸಿಹಿಯಾಗಿದೆ ಎಂಬುದು ವಿರಾಟ್ ಕೊಹ್ಲಿ ಅವರ ಅಭಿಮತ.

ಮೊದಲ ಬಾರಿ ಸರಣಿ ಗೆಲುವು

ಮೊದಲ ಬಾರಿ ಸರಣಿ ಗೆಲುವು

ಕಳೆದ 71 ವರ್ಷಗಳಲ್ಲಿ 11 ಬಾರಿ ಭಾರತ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಳನ್ನು ಆಡಿದ್ದರೂ ಇದು ಭಾರತಕ್ಕೆ ದಕ್ಕಿದ ಮೊದಲ ಸರಣಿ ಗೆಲುವು. ಭಾರತದಿಂದ ಹೊರಗೆ ವಿರಾಟ್ ಕೊಹ್ಲಿ ನಾಲ್ಕನೇ ಬಾರಿ ಸರಣಿಯನ್ನು ಭಾರತಕ್ಕಾಗಿ ಗೆದ್ದಿದ್ದಾರೆ. ಹಿಂದೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ವಿರಾಟ್ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ನಮ್ಮ ಮೇಲೆ ನಾವು ಇಟ್ಟ ನಂಬಿಕೆಗೆ ಆ ಸರಣಿ ಗೆಲುವು ಸಾಕ್ಷಿಯಾಗಿದೆ. ಭಾರತವನ್ನು ಇನ್ನೂ ಮುಂದೆ ತೆಗೆದುಕೊಂಡು ಹೋಗಲು ಈ ಗೆಲುವು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.

Story first published: Monday, January 7, 2019, 11:12 [IST]
Other articles published on Jan 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X