ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆ ಪಟ್ಟಿ ಸೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು

Biggest chases without losing a wicket in IPL-Stats

ಮುಂಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡವಾಗಿ ರೂಪುಗೊಂಡಿದೆ ಅನ್ನೋದಕ್ಕೆ ಗುರುವಾರ (ಏಪ್ರಿಲ್ 23) ಮತ್ತೊಂದು ಸಾಕ್ಷಿ ಲಭಿಸಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಸುಲಭವಾಗಿ ಗೆದ್ದುಕೊಂಡಿದೆ.

ಐಪಿಎಲ್‌ನಲ್ಲಿ ಮೊದಲ 1000 ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಐಪಿಎಲ್‌ನಲ್ಲಿ ಮೊದಲ 1000 ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಇದರಲ್ಲಿ ಆರ್‌ಸಿಬಿ 10 ವಿಕೆಟ್‌ ಭರ್ಜರಿ ಜಯ ಗಳಿಸಿದೆ. ಇದಕ್ಕೆ ಮುಖ್ಯ ಕಾರಣ ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್, 20 ಓವರ್‌ಗೆ 9 ವಿಕೆಟ್ ಕಳೆದು 177 ರನ್ ಗಳಿಸಿದ್ದರೆ, ಗುರಿ ಬೆನ್ನಟ್ಟಿದ ಆರ್‌ಸಿಬಿಯಿಂದ ಕೊಹ್ಲಿ 72 (47), ದೇವದತ್ ಪಡಿಕ್ಕಲ್ 101 (52) ರನ್‌ ಸೇರಿಸಿದರು. ಹೀಗಾಗಿ ಆರ್‌ಸಿಬಿ ತಂಡ 16.3 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿತು. ಇದರೊಂದಿಗೆ ವಿಶೇಷ ದಾಖಲೆ ಪಟ್ಟಿಗೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಸೇರ್ಪಡೆಯಾಗಿದ್ದಾರೆ.

ಐಪಿಎಲ್ 2021: ಅಜೇಯ ಶತಕ ಸಿಡಿಸಿ ದಾಖಲೆ ಬರೆದ ದೇವದತ್ ಪಡಿಕ್ಕಲ್ಐಪಿಎಲ್ 2021: ಅಜೇಯ ಶತಕ ಸಿಡಿಸಿ ದಾಖಲೆ ಬರೆದ ದೇವದತ್ ಪಡಿಕ್ಕಲ್

ಐಪಿಎಲ್ ಇತಿಹಾಸದಲ್ಲಿ ವಿಕೆಟ್‌ ನಷ್ಟವಿಲ್ಲದೆ ಚೇಸಿಂಗ್‌ನಲ್ಲಿ ಪಂದ್ಯ ಗೆದ್ದ ದಾಖಲೆಗಳು (ಬ್ಯಾಟ್ಸ್‌ಮನ್‌ಗಳು)
* 184 ಒಟ್ಟು ರನ್, ಗೌತಮ್ ಗಂಭೀರ್/ಕ್ರಿಸ್ ಲಿನ್, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಲಯನ್ಸ್, 2017
* 181 ಒಟ್ಟು ರನ್, ಫಾಫ್ ಡು ಪ್ಲೆಸಿಸ್/ಶೇನ್ ವಾಟ್ಸನ್, ಚೆನ್ನೈ ಸೂಪರ್ ಕಿಂಗ್ಸ್, vs ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್‌ XI ಪಂಜಾಬ್), 2020
* 181 ಒಟ್ಟು ರನ್, ವಿರಾಟ್ ಕೊಹ್ಲಿ/ದೇವದತ್ ಪಡಿಕ್ಕಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, vs ರಾಜಸ್ಥಾನ್ ರಾಯಲ್ಸ್, 2021
* 163 ಒಟ್ಟು ರನ್, ಸಚಿನ್ ತೆಂಡೂಲ್ಕರ್/ಡ್ವೇನ್ ಸ್ಮಿತ್, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, 2012
* 155 ಒಟ್ಟು ರನ್, ಗಿಲ್‌ಕ್ರಿಸ್ಟ್‌, ವಿವಿಎಸ್‌ ಲಕ್ಷ್ಮಣ್, ಡೆಲ್ಲಿ ಕ್ಯಾಪಿಟಲ್ಸ್, vs ಮುಂಬೈ ಇಂಡಿಯನ್ಸ್, 2008

Story first published: Friday, April 23, 2021, 12:11 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X