ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯರ ಬಗ್ಗೆ ಮುತ್ತಿನಂತ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ

Biggest reward is to bring a smile on the faces of Indians, says Ajinkya Rahane

ಸಿಡ್ನಿ: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 8 ವಿಕೆಟ್ ಸುಲಭ ಜಯ ಗಳಿಸಿತ್ತು. ಈ ಪಂದ್ಯದ ಬಳಿಕ ಭಾರತ ಟೆಸ್ಟ್‌ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಭಾರತೀಯರ, ಕ್ರಿಕೆಟ್‌ ಪರಿಣಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!

ದ್ವಿತೀಯ ಟೆಸ್ಟ್‌ನಲ್ಲಿ ತಂಡದ ನಾಯಕತ್ವ ಅಜಿಂಕ್ಯ ರಹಾನೆಗೆ ನೀಡಲಾಗಿತ್ತು. ಎಂದಿನ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದುಕೊಂಡಿದ್ದರಿಂದ ರಹಾನೆ ನಾಯಕತ್ವ ವಹಿಸಿಕೊಂಡಿದ್ದರು. ಪಂದ್ಯದಲ್ಲಿ ಯೋಜಿತ ಫೀಲ್ಡ್ ಸೆಟ್ಟಿಂಗ್ ಜೊತೆಗೆ ಒಟ್ಟಾರೆ ನಾಯಕತ್ವಕ್ಕಾಗಿ ರಹಾನೆ ಗಮನ ಸೆಳೆದಿದ್ದರು. ಪಂದ್ಯವೂ ಗೆದ್ದಿದ್ದರಿಂದ ರಹಾನೆ ಬಗೆಗಿನ ಭರವಸೆ ಇನ್ನಷ್ಟು ಹೆಚ್ಚಿತ್ತು.

ಮೆಲ್ಬರ್ನ್ ಟೆಸ್ಟ್‌ನಲ್ಲಿ ಭಾರತ ಗೆದ್ದ ಬಳಿಕ ಪ್ರತಿಕ್ರಿಯಿಸಿರುವ ರಹಾನೆ, 'ನಮಗೆ ಲಭಿಸಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಒಂದು ತಂಡವಾಗಿ ನಮಗೆ ದೊರೆತಿರುವ ಬಹುಮಾನವೆಂದರೆ, ಅದು ಕ್ರೀಡೆಯನ್ನು ಪ್ರೀತಿಸುವ ಎಲ್ಲಾ ಭಾರತೀಯರ ಮುಖದಲ್ಲಿ ಮಂದಹಾಸ ಮೂಡಿಸುವ ಸಾಮರ್ಥ್ಯ,' ಎಂದಿದ್ದಾರೆ.

ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್

ದ್ವಿತೀಯ ಪಂದ್ಯದ ಗೆಲುವಿನ ಬಳಿಕ ಭಾರತ-ಆಸ್ಟ್ರೇಲಿಯಾ ಭಾರತ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ. ಮೂರನೇ ಪಂದ್ಯ 2021ರ ಜನವರಿ 7ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭಗೊಳ್ಳಲಿದೆ. ಮೂರನೇ ಪಂದ್ಯದಲ್ಲೂ ಗೆಲ್ಲುವತ್ತ ಭಾರತ ಚಿತ್ತ ನೆಟ್ಟಿದೆ. ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮೈದಾನಕ್ಕಿಳಿಯಲಿದ್ದಾರೆ.

Story first published: Thursday, December 31, 2020, 14:46 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X