ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಹೈದರಾಬಾದ್ ಕಂಡಿರುವ ದೊಡ್ಡ ಗೆಲುವುಗಳಿವು!

Biggest wins for SRH (by runs) in IPL history

ದುಬೈ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೃದ್ಧಿಮಾನ್ ಸಾಹ, ಡೇವಿಡ್ ವಾರ್ನರ್ ಬಿರುಸಿನ ಆಟ ಮತ್ತು ರಶೀದ್ ಖಾನ್ ಮ್ಯಾಜಿಕ್ ಬೌಲಿಂಗ್‌ನಿಂದಾಗಿ ಮಂಗಳವಾರ (ಅಕ್ಟೋಬರ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 88 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದು ಎಸ್‌ಆರ್‌ಎಚ್‌ಗೆ ಟೂರ್ನಿಯಲ್ಲಿ ಲಭಿಸುತ್ತಿರುವ 5ನೇ ಗೆಲುವು 2ನೇ ದೊಡ್ಡ ವಿಜಯ.

ಐಪಿಎಲ್ 2020: ಆರ್‌ಸಿಬಿ ತಂಡಕ್ಕೆ ಹಿನ್ನಡೆ, ಪ್ರಮುಖ ಬೌಲರ್‌ಗೆ ಗಾಯಐಪಿಎಲ್ 2020: ಆರ್‌ಸಿಬಿ ತಂಡಕ್ಕೆ ಹಿನ್ನಡೆ, ಪ್ರಮುಖ ಬೌಲರ್‌ಗೆ ಗಾಯ

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್, ಪಂದ್ಯದ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ನಡೆಸಿತು. ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಾಹ ಅರ್ಧ ಶತಕ ಚಚ್ಚಿದರು.

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

ಡೆಲ್ಲಿ ವಿರುದ್ಧದ ಗೆಲುವು, ಹೈದರಾಬಾದ್ ತಂಡ ಐಪಿಎಲ್‌ನಲ್ಲಿ ಕಂಡಿರುವ ದೊಡ್ಡ ಗೆಲುವುಗಳ ಸಾಲಿಗೆ ಸೇರಿಕೊಂಡಿದೆ. ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ದಾಖಲಿಸಿರುವ ದೊಡ್ಡ ಗೆಲುವುಗಳ ಪಟ್ಟಿ ಕೆಳಗಿದೆ.

ಸಾಹ ಭರ್ಜರಿ ಬ್ಯಾಟಿಂಗ್

ಸಾಹ ಭರ್ಜರಿ ಬ್ಯಾಟಿಂಗ್

ಟೆಸ್ಟ್‌ಗೆ ಹೆಚ್ಚು ಸೂಕ್ತ ಎಂಬಂತೆ ಕಾಣಲಾಗುತ್ತಿದ್ದ ವೃದ್ಧಿಮಾನ್ ಸಾಹ ಮಂಗಳವಾರ ಆಡಿದ್ದು ಟೂರ್ನಿಯ ಎರಡನೇ ಪಂದ್ಯ. ಈ ಪಂದ್ಯದಲ್ಲೇ ಸಹಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.45 ಎಸೆತಗಳಲ್ಲಿ 87 ರನ್ ಚಚ್ಚಿರುವ ಸಾಹ, 12 ಫೋರ್ಸ್, 2 ಸಿಕ್ಸರ್‌ ಕೂಡ ಸಿಡಿಸಿದ್ದರು.

ರಶೀದ್ ಖಾನ್ ಮಾರಕ ಬೌಲಿಂಗ್

ರಶೀದ್ ಖಾನ್ ಮಾರಕ ಬೌಲಿಂಗ್

ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹ ಬ್ಯಾಟಿಂಗ್‌ನಲ್ಲಿ ಬೆಂಬಲಿಸಿದರೆ ಬೌಲಿಂಗ್‌ನಲ್ಲಿ ಸ್ಪಿನ್ನರ್ ರಶೀದ್ ಖಾನ್ (7 ರನ್‌ಗೆ 3 ವಿಕೆಟ್, 4 ಓವರ್‌ಗಳು), ಸಂದೀಪ್ ಶರ್ಮಾ (27 ರನ್‌ಗೆ 2 ವಿಕೆಟ್), ಟಿ ನಟರಾಜನ್ (26 ರನ್‌ಗೆ 2), ಶಹಬಾಝ್ ನದೀಮ್, ಜೇಸನ್ ಹೋಲ್ಡರ್ ಮತ್ತು ವಿಜಯ್ ಶಂಕರ್ ತಲಾ 1 ವಿಕೆಟ್ ಪಡೆದು ತಂಡಕ್ಕೆ ಬಲ ತುಂಬಿದ್ದರು.

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್

ಹೈದರಾಬಾದ್‌ನಿಂದ ಡೇವಿಡ್ ವಾರ್ನರ್ 66 (34 ಎಸೆತ), ವೃದ್ಧಿಮಾನ್ ಸಾಹ 87 (45 ಎಸೆತ), ಮನೀಶ್ ಪಾಂಡೆ 44 (31), ಕೇನ್ ವಿಲಿಯಮ್ಸನ್ 11 ರನ್ ಬಾರಿಸಿದರು. ಎಸ್‌ಆರ್‌ಎಚ್ 20 ಓವರ್‌ಗೆ 2 ವಿಕೆಟ್ ಕಳೆದು 219 ರನ್ ಗಳಿಸಿತು. ಡೆಲ್ಲಿ ತಂಡದಿಂದ ಅಜಿಂಕ್ಯ ರಹಾನೆ 16, ಶಿಮ್ರನ್ ಹೆಟ್ಮೈಯರ್ 16, ರಿಷಭ್ ಪಂತ್ 36, ತುಷಾರ್ ದೇಶಪಾಂಡೆ 20 ರನ್‌ನೊಂದಿಗೆ ಡಿಸಿ 19 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 131 ರನ್ ಬಾರಿಸಿತು.

ಎಸ್‌ಆರ್‌ಎಚ್‌ ದೊಡ್ಡ ಗೆಲುವುಗಳಿವು

ಎಸ್‌ಆರ್‌ಎಚ್‌ ದೊಡ್ಡ ಗೆಲುವುಗಳಿವು

* 118 ರನ್‌ಗಳು vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್, 2019
* 88 ರನ್‌ಗಳು, vs ಡೆಲ್ಲಿ ಕ್ಯಾಪಿಟಲ್ಸ್, ದುಬೈ, 2020*
* 85 ರನ್‌ಗಳು, vs ಮುಂಬೈ ಇಂಡಿಯನ್ಸ್, ವಿಶಾಖಪಟ್ಟಣ, 2016
* 69 ರನ್‌ಗಳು, vs ಕಿಂಗ್ಸ್ 11 ಪಂಜಾಬ್, ದುಬೈ, 2020

Story first published: Wednesday, October 28, 2020, 9:45 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X