ಮುಂಬೈ ಇಂಡಿಯನ್ಸ್‌ನ ಈ ಆಟಗಾರರನ್ನು ಆಯ್ಕೆ ಮಾಡಿದ್ದು ಭಾರತಕ್ಕೆ ತಲೆನೋವಾಗಿದೆ ಎಂದ ಅಗರ್ಕರ್

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಪ್ರಸ್ತುತ ಯುಎಇಯಲ್ಲಿ ಜರುಗುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯತ್ತ ಇದೆ. ಈ ಟೂರ್ನಿ ಮುಗಿದ ನಂತರ ಅಕ್ಟೋಬರ್ 17ರಿಂದ ನವೆಂಬರ್‌ 14ರವರೆಗೆ ಇದೇ ಯುಎಇಯಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು ಐಪಿಎಲ್ ನಡುವೆಯೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತ ತಂಡದ ಆಟಗಾರರು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿಯೂ ಭಾಗವಹಿಸಿದ್ದು ಅವರ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿವೆ.

ಐಪಿಎಲ್: ಸಾಲು ಸಾಲು ಪಂದ್ಯ ಸೋತ ಮುಂಬೈಗೆ ಪ್ಲೇ ಆಫ್ ಪ್ರವೇಶಿಸಲು ಇವೆ ಈ 2 ಮಾರ್ಗಗಳುಐಪಿಎಲ್: ಸಾಲು ಸಾಲು ಪಂದ್ಯ ಸೋತ ಮುಂಬೈಗೆ ಪ್ಲೇ ಆಫ್ ಪ್ರವೇಶಿಸಲು ಇವೆ ಈ 2 ಮಾರ್ಗಗಳು

ಅಕ್ಟೋಬರ್ 17ರಿಂದ ನವೆಂಬರ್‌ 14ರವರೆಗೆ ಯುಎಇಯಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ವಿವಿಧ ದೇಶಗಳು ತಮ್ಮ ತಂಡದ ಆಟಗಾರರ ಪಟ್ಟಿಯನ್ನು ಇತ್ತೀಚೆಗಷ್ಟೇ ಪ್ರಕಟಿಸಿದ್ದವು. ಹೀಗೆ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ವಿವಿಧ ತಂಡಗಳು ಪ್ರಕಟವಾದ ನಂತರ ಭಾರೀ ದೊಡ್ಡ ಮಟ್ಟದ ಚರ್ಚೆಗೂ ಸಹ ಕಾರಣವಾಗಿದ್ದವು. ಅದರಲ್ಲಿಯೂ ಬಿಸಿಸಿಐ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ನಂತರ ಈ ಚರ್ಚೆಗಳು ದೊಡ್ಡ ಮಟ್ಟಕ್ಕೆ ತಲುಪಿದವು. ಹಾಗೂ ಟೂರ್ನಿಗೆ ಪ್ರಕಟವಾಗಿರುವ ತಂಡಗಳಲ್ಲಿ ಯಾವ ತಂಡ ಬಲಿಷ್ಠವಾಗಿದೆ, ಯಾವ ತಂಡ ಕಳಪೆ ಆಟಗಾರರಿಂದ ಕೂಡಿದೆ ಮತ್ತು ಯಾವ ತಂಡ ಟ್ರೋಫಿಯನ್ನು ಜಯಗಳಿಸಲಿದೆ ಎಂಬ ಊಹೆಗಳನ್ನು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರು ಮಾಡತೊಡಗಿದರು.

ಮುಂಬೈ ಸೋಲಿನ ಬಳಿಕ ಕಣ್ಣೀರಿಟ್ಟ ಇಶಾನ್ ಕಿಶನ್; ಕ್ರೀಡಾಸ್ಫೂರ್ತಿ ಮೆರೆದ ಕೊಹ್ಲಿಮುಂಬೈ ಸೋಲಿನ ಬಳಿಕ ಕಣ್ಣೀರಿಟ್ಟ ಇಶಾನ್ ಕಿಶನ್; ಕ್ರೀಡಾಸ್ಫೂರ್ತಿ ಮೆರೆದ ಕೊಹ್ಲಿ

ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಯುಎಇ ಚರಣ ಆರಂಭವಾಗುವ ಮುನ್ನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಆದರೆ ಭಾರತ ತಂಡದ ಪರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಕೆಲ ಆಟಗಾರರು ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡುವುದರ ಮೂಲಕ ಟೀಕಾಕಾರರ ಬಾಯಿಗೆ ಆಹಾರವಾಗಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಕೂಡ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ಆಟಗಾರರ ಕುರಿತು ಮಾತನಾಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಯ್ಕೆ ಬಗ್ಗೆ ಭಾರತ ಕೊಂಚ ತಲೆಕೆಡಿಸಿಕೊಂಡಿದೆ

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಯ್ಕೆ ಬಗ್ಗೆ ಭಾರತ ಕೊಂಚ ತಲೆಕೆಡಿಸಿಕೊಂಡಿದೆ

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಚರಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅಕ್ಷರಶಃ ಮಂಕಾಗಿದ್ದಾರೆ. ಈ ಇಬ್ಬರ ಪ್ರದರ್ಶನದ ಕುರಿತು ಮಾತನಾಡಿರುವ ಅಜಿತ್ ಅಗರ್ಕರ್ 'ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೇ ರನ್ ಗಳಿಸಲು ಪರದಾಡುತ್ತಿರುವ ಈ ಇಬ್ಬರನ್ನು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿಕೊಂಡಿರುವ ಟೀಮ್ ಇಂಡಿಯಾ ಕೊಂಚ ತಲೆಬಿಸಿ ಮಾಡಿಕೊಂಡಿದೆ' ಎಂದು ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಪಿಚ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಕಿದೆ

ಸೂರ್ಯಕುಮಾರ್ ಯಾದವ್ ಪಿಚ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಬೇಕಿದೆ

ಹೀಗೆ ಈ ಇಬ್ಬರೂ ಆಟಗಾರರ ಕಳಪೆ ಪ್ರದರ್ಶನ ಟೀಂ ಇಂಡಿಯಾಗೆ ಕೊಂಚ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಿಕೆ ನೀಡಿರುವ ಅಜಿತ್ ಅಗರ್ಕರ್ ಸೂರ್ಯಕುಮಾರ್ ಯಾದವ್ ಕುರಿತು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 'ಸೂರ್ಯಕುಮಾರ್ ಯಾದವ್ ವಿಶ್ವಾಸವನ್ನು ಕಳೆದುಕೊಂಡು ಬ್ಯಾಟ್ ಬೀಸುತ್ತಿದ್ದಾರೆ ಎನಿಸುತ್ತಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಇನ್ನೂ ಕೊಂಚ ಹೆಚ್ಚು ಸಮಯದ ಕಾಲ ಪಿಚ್‌ನಲ್ಲಿ ನಿಂತು, ಪಿಚ್‌ನ್ನು ಅರ್ಥ ಮಾಡಿಕೊಂಡು ಆಟವನ್ನಾಡಬೇಕಿದೆ. ಹೀಗೆ ಮಾಡುವುದರಿಂದ ಸೂರ್ಯಕುಮಾರ್ ಯಾದವ್ ಲಯ ಕಂಡುಕೊಳ್ಳಬಹುದು' ಎಂದು ಅಜಿತ್ ಅಗರ್ಕರ್ ಸಲಹೆ ನೀಡಿದ್ದಾರೆ.

ಕಳಪೆ ಫಾರ್ಮ್‌ನಿಂದ ಮೈದಾನದಲ್ಲಿಯೇ ಕಣ್ಣೀರಿಟ್ಟಿದ್ದ ಇಶಾನ್ ಕಿಶನ್

ಕಳಪೆ ಫಾರ್ಮ್‌ನಿಂದ ಮೈದಾನದಲ್ಲಿಯೇ ಕಣ್ಣೀರಿಟ್ಟಿದ್ದ ಇಶಾನ್ ಕಿಶನ್

ಕಳೆದ ಭಾನುವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೀನಾಯವಾದ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿಯೂ ಕಳಪೆ ಆಟವನ್ನಾಡಿ ಮತ್ತೊಮ್ಮೆ ವಿಫಲವಾಗಿದ್ದ ಇಶಾನ್ ಕಿಶನ್ ಕಣ್ಣೀರಿಡುತ್ತಾ ಕುಳಿತಿದ್ದರು. ಹೀಗೆ ಕಳಪೆ ಫಾರ್ಮ್ ಕುರಿತು ಚಿಂತಿಸುತ್ತಿದ್ದ ಇಶಾನ್ ಕಿಶನ್ ಬಳಿ ಬಂದ ವಿರಾಟ್ ಕೊಹ್ಲಿ ಆತನನ್ನು ಸಮಾಧಾನಪಡಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Wednesday, September 29, 2021, 17:43 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X