ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಣಕಾಸು ಮುಗ್ಗಟ್ಟಿನತ್ತ ಕ್ರಿಕೆಟ್ ಆಸ್ಟ್ರೇಲಿಯಾ: ಅಚ್ಚರಿ ವ್ಯಕ್ತಪಡಿಸಿದ ಆಸಿಸ್ ವೇಗಿ

‘Bit Surprised By Cricket Australia’s Financial Health’: Josh Hazlewood

ಕೊರೊನಾ ವೈರಸ್‌ನಿಂದಾಗಿ ವಿಶ್ವ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಈ ಮಹಾಮಾರಿಯ ವಿರುದ್ಧ ಹೋರಾಟವನ್ನು ನಡೆಸಲು ಬಲಾಢ್ಯ ರಾಷ್ಟ್ರಗಳು ಕೂಡ ಪರದಾಟವನ್ನು ನಡೆಸುತ್ತಿದೆ. ಇದರ ಮಧ್ಯೆ ಆರ್ಥಿಕತೆ ಸಂಪೂರ್ಣವಾಗಿ ಅಧಃಪತನದತ್ತ ಸಾಗುತ್ತಿರುವುದು ಭವಿಷ್ಯದ ಭೀಕರತೆಯನ್ನು ಸಾರುತ್ತಿದೆ.

ಈ ಆರ್ಥಿಕ ಹೊಡೆತ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯನ್ನೂ ಬಿಟ್ಟಿಲ್ಲ. ಆರ್ಥಿಕವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಭಾರೀ ಸಂಕಷ್ಟಕ್ಕೆ ಒಳಗಾಗಿದೆ. ಇದೇ ಕಾರಣಕ್ಕೆ ಜೂನ್ 30ಕ್ಕೆ ಅಂತ್ಯವಾಗುವ ಆರ್ಥಿಕ ವರ್ಷದ ಬಳಿಕ ಬರೊಬ್ಬರಿ 80 ಶೇಕಡಾ ಸಿಬ್ಬಂದಿಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತೆಗದುಹಾಕುವ ನಿರ್ಧಾರವನ್ನು ತೆಗದುಕೊಂಡಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಆರ್ಥಿಕ ಪರಿಸ್ಥಿಯ ಬಗ್ಗೆ ಸ್ವತಃ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಸಲ್ವುಡ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. 'ಕೊರೊನಾ ವೈರಸ್ ಸಹಜವಾಗಿಯೇ ಆರ್ಥಿಕತೆಯ ಮೇಲೆ ಪ್ರಭಾವವನ್ನು ಬೀರುತ್ತದೆ, ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಆರ್ಥಿಕ ಪರಿಸ್ಥಿತ ನನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಹ್ಯಾಸಲ್‌ವುಡ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕ್ರಿಕೆಟರ್‌ಗಳಿಗೂ ಆರ್ಥಿಕ ಮುಗ್ಗಟ್ಟು ಉಂಟಾಗಲಿದೆ. ಆದರೆ ತಮ್ಮ ಸಂಬಳವನ್ನು ಕಡಿಮೆ ಮಾಡಿಕೊಳ್ಳಲು ಅವರು ಸಿದ್ಧರಿದ್ದಾರೆ ಎಂದು ಹ್ಯಾಸಲ್‌ವುಡ್ ಹೇಳಿದ್ದಾರೆ. ಮುಂದಿನ ಬೇಸಿಗೆವರೆಗೂ ಇದೇ ಸ್ಥಿತಿಯಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿರಲಿದೆ ಎಂದು ಹ್ಯಾಸಲ್‌ವುಡ್ ಹೇಳಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಭಾರೀ ಹಣಕಾಸಿನ ಮುಗ್ಗಟ್ಟನ್ನ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಆಗಸ್ಟ್‌ ವೇಳೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಬಳಿಯಿರುವ ನಗದು ಖಾಲಿಯಾಗಲಿದೆ ಎಂದು ವರದಿಗಳು ಹೇಳುತ್ತಿದ್ದು ಈ ಕಾರಣಕ್ಕೆ ಸಿಬ್ಬಂಧಿಗಳನ್ನು ವಜಾಗೊಳಿಸುವ ನಿರ್ಧಾರಕ್ಕೆ ಸಿಎ ಬಂದಿದೆ ಎನ್ನಲಾಗ್ತಿದೆ.

Story first published: Monday, April 20, 2020, 17:48 [IST]
Other articles published on Apr 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X