ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಬದುಕಿನ ಕೊನೇ ಪಂದ್ಯ ಆಡ್ತಿದ್ದಾರೆ ನ್ಯೂಜಿಲೆಂಡ್‌ನ ಈ ಆಟಗಾರ

BJ Watling says he is retiring from all form of cricket after WTC Final
New Zealand ಆಟಗಾರರ ಪಾಲಿಗೆ ಇದೇ ಕೊನೆಯ ಪಂದ್ಯ | Oneindia Kannada

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್‌ ಪಾಲಿನ ಕೊನೇ ಪಂದ್ಯವಾಗಲಿದೆ. WTC ಫೈನಲ್ ಪಂದ್ಯದ ಬಳಿಕ ವಾಟ್ಲಿಂಗ್ ಎಲ್ಲಾ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಲಿದ್ದಾರೆ.

ಆಸಿಸ್ ಪ್ರಕಟಿಸಿದ ಬಾಂಗ್ಲಾ, ವಿಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದ 7 ಐಪಿಎಲ್ ಸ್ಟಾರ್‌ಗಳುಆಸಿಸ್ ಪ್ರಕಟಿಸಿದ ಬಾಂಗ್ಲಾ, ವಿಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದ 7 ಐಪಿಎಲ್ ಸ್ಟಾರ್‌ಗಳು

35ರ ಹರೆಯದ ಬಿಜೆ ವಾಟ್ಲಿಂಗ್‌ ಕಳೆದ ಮೇ ತಿಂಗಳಲ್ಲೇ ನಿವೃತ್ತಿ ಘೋಷಿಸಿದ್ದರು. ಅಂದರೆ ಇಂಗ್ಲೆಂಡ್ ಪ್ರವಾಸ ಸರಣಿಯ ಬಳಿಕ ತಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಇಂಗ್ಲೆಂಡ್‌ಗೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಿದೆ. ಇನ್ನು WTC ಫೈನಲ್‌ ಪಂದ್ಯ ಮುಗಿದರೆ ಸರಣಿ ಕೊನೆಗೊಳ್ಳಲಿದೆ. ಅಲ್ಲಿಗೆ ವಾಟ್ಲಿಂಗ್ ಕ್ರಿಕೆಟ್ ವೃತ್ತಿ ಬದುಕೂ ಕೊನೆಯಾಗಲಿದೆ.

WTC ಫೈನಲ್ ಪಂದ್ಯ ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಜೂನ್ 18-22ರ ವರೆಗೆ ನಡೆಯಲಿದೆ. ಭಾರತ-ನ್ಯೂಜಿಲೆಂಡ್‌ WTC ಫೈನಲ್‌ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ನಡೆಯಲಿಲ್ಲ. ಎರಡನೇ ದಿನ ಪಂದ್ಯ ಶುರುವಾಗಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ಬ್ಯಾಟಿಂಗ್‌ ಮಾಡುತ್ತಿದೆ.

ಸಿಕ್ಸ್ ಚಚ್ಚಿ ಕಾರಿನ ಗಾಜು ಪುಡಿ ಮಾಡಿದ್ದ ಕೆವಿನ್ ಓಬ್ರಿಯನ್ ಏಕದಿನಕ್ಕೆ ನಿವೃತ್ತಿಸಿಕ್ಸ್ ಚಚ್ಚಿ ಕಾರಿನ ಗಾಜು ಪುಡಿ ಮಾಡಿದ್ದ ಕೆವಿನ್ ಓಬ್ರಿಯನ್ ಏಕದಿನಕ್ಕೆ ನಿವೃತ್ತಿ

ಪಾಕಿಸ್ತಾನ ವಿರುದ್ಧ 2009ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ಪರ 75 ಟೆಸ್ಟ್ ಪಂದ್ಯಗಳಲ್ಲಿ 3789 ರನ್, 28 ಏಕದಿನ ಪಂದ್ಯಗಳಲ್ಲಿ 573 ರನ್, 5 ಟಿ20 ಪಂದ್ಯಗಳಲ್ಲಿ 38 ರನ್ ಗಳಿಸಿದ್ದಾರೆ.

Story first published: Saturday, June 19, 2021, 18:11 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X