ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ

 Border Gavaskar Trophy: former pacer Mitchell Johnson suggestion to Australia ahead of Nagpur Test

ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತವನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಆಸ್ಟ್ರೇಲಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಬಹುತೇಕ ಎರಡು ದಶಕಗಳಿಂದ ಭಾರತದಲ್ಲಿ ಅಸಾಧ್ಯವಾಗಿರುವ ಟೆಸ್ಟ್ ಸರಣಿ ಗೆಲುವು ಸಾಧಿಸಲು ಆಸಿಸ್ ಬಳಗ ಎದುರು ನೋಡುತ್ತಿದೆ. ಇತ್ತೀಚಿನ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡ ನೀಡಿರುವ ಅದ್ಭುತ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಕೂಡ ಹೆಚ್ಚಿಸಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರರು ಪ್ಯಾಟ್ ಕಮ್ಮಿನ್ಸ್ ಪಡೆಗೆ ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಕ್ರಿಕೆಟ್ ದಿಗ್ಗಜರು ಈ ಸರಣಿಯನ್ನು ವಿಶ್ಲೇಷಣೆ ಮಾಡುತ್ತಿದ್ದು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಕೂಡ ಈ ಸರಣಿಯ ವಿಚಾರವಾಗಿ ಮಾತನಾಡಿದ್ದು ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.

IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್

ಮೊದಲು ಬ್ಯಾಟಿಂಗ್‌ಗೆ ಜಾನ್ಸನ್ ಸಲಹೆ

ಮೊದಲು ಬ್ಯಾಟಿಂಗ್‌ಗೆ ಜಾನ್ಸನ್ ಸಲಹೆ

ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಮೊದಲು ಬ್ಯಾಟಿಂಗ್ ನಡೆಸಬೇಕು ಎಂದಿದ್ದಾರೆ. "ಈ ಸರಣಿಯಲ್ಲಿ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವ ಕಾರಣ ಮೊದಲಿಗೆ ಬ್ಯಾಟಿಂಗ್‌ ನಡೆಸಿದರೆ ಉತ್ತಮ ರನ್ ಗಳಿಸಲು ಸಾಧ್ಯವಾಗಬಹುದು. ಈ ಮೂಲಕ ಭಾರತ ತಂಡದ ಮೇಲೆ ಒತ್ತಡವನ್ನು ಹೇರಲು ಅವಕಾಶ ದೊರೆಯುತ್ತದೆ. ಇನ್ನು ಈ ಸರಣಿಗೆ ಆಸ್ಟ್ರೇಲಿಯಾ ನಾಲ್ಕು ಸ್ಪಿನ್ನರ್‌ಗಳೊಂದಿಗೆ ತೆರಳಿದೆ. ಇದರಲ್ಲಿ ನಾಥನ್ ಲಿಯಾನ್ ಅನುಭವಕ್ಕೆ ಭಾರತೀಯ ಬ್ಯಾಟರ್‌ಗಳು ಗೌರವ ನೀಡಬಹುದು. ಉಳಿದಂತೆ ಯಾರಿಗೂ ಭಯಪಡಲಾರರು" ಎಂದಿದ್ದಾರೆ ಮಿಚೆಲ್ ಜಾನ್ಸನ್.

ಸ್ಪಿನ್ನರ್‌ಗಳಿಗೆ ಭಾರತೀಯರು ಉತ್ತಮವಾಗಿ ಆಡುತ್ತಾರೆ

ಸ್ಪಿನ್ನರ್‌ಗಳಿಗೆ ಭಾರತೀಯರು ಉತ್ತಮವಾಗಿ ಆಡುತ್ತಾರೆ

'ವೆಸ್ಟ್ ಆಸ್ಟ್ರೇಲಿಯನ್‌'ಗೆ ಬರೆದಿರುವ ಅಂಕಣದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕೆಲ ಎಚ್ಚರಿಕೆಗಳನ್ನು ಕೂಡ ಅವರು ನೀಡಿದ್ದಾರೆ. "ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅವರ ಅನುಭವಕ್ಕೆ ಹಾಗೂ ಅವರ ಟೆಸ್ಟ್ ದಾಖಲೆಗಳಿಗೆ ಭಾರತೀಯ ಬ್ಯಾಟರ್‌ಗಳು ಗೌರವ ನೀಡಬಹುದು. ಆದರೆ ಆಸ್ಟ್ರೇಲಿಯಾದ ಯಾವ ಸ್ಪಿನ್ನರ್‌ಗಳಿಗೂ ಅವರು ಭಯಪಡಲಾರರು. ಭಾರತೀಯ ಆಟಗಾರರು ಸ್ಪಿನ್ ವಿರುದ್ಧ ಪಾದವನ್ನು ಬಳಸಿಕೊಂಡು ಅದ್ಭುತವಾಗಿ ಆಡುತ್ತಾರೆ" ಎಂದಿದ್ದಾರೆ ಆಸಿಸ್ ತಂಡದ ಮಾಜಿ ವೇಗಿ.

2008ರಲ್ಲಿ ನಾಗ್ಪುರದಲ್ಲಿ ಟೆಸ್ಟ್‌ನಲ್ಲಿ ಮುಖಾಮುಖಿಯಾಗಿದ್ದವು ಭಾರತ ಆಸಿಸ್ ತಂಡಗಳು

2008ರಲ್ಲಿ ನಾಗ್ಪುರದಲ್ಲಿ ಟೆಸ್ಟ್‌ನಲ್ಲಿ ಮುಖಾಮುಖಿಯಾಗಿದ್ದವು ಭಾರತ ಆಸಿಸ್ ತಂಡಗಳು

ಇನ್ನು ನಾಗ್ಪುರದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 2008ರ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿತ್ತಿದೆ. 2008ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 172 ರನ್‌ಗಳ ಅಂತರದಿಂದ ಸೋಲಿಸಿತ್ತು. ಅಂದಿನ ಆಸ್ಟ್ರೇಲಿಯಾ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಬ್ರೇಟ್‌ ಲೀ ಜೊತೆಗೆ ಮಿಚೆಲ್ ಜಾನ್ಸನ್ ಕೂಡ ನೇತೃತ್ವ ವಹಿಸಿಕೊಂಡಿದ್ದರು.

"ಆಸ್ಟ್ರೇಲಿಯಾ ನಾಗ್ಪುರದಲ್ಲಿ 2008ರ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್ ಆಡುತ್ತಿದೆ. ಅಂದಿನ ಪಂದ್ಯದಲ್ಲಿ ಜೇಸನ್ ಕ್ರೇಜಾ 12 ವಿಕೆಟ್ ಪಡೆದಿದ್ದರು. ಇಲ್ಲಿನ ಪಿಚ್ ಫ್ಲ್ಯಾಟ್ ಆಗಿರಲಿದ್ದು ಹುಲ್ಲು ಇರುವ ಸಾಧ್ಯತೆಯಿಲ್ಲ. ಹೆಚ್ಚಿನ ಸ್ಪಿನ್ ಇಲ್ಲದಿದ್ದರೂ ವೇಗಿಗಳಿಗೆ ಹೆಚ್ಚಿನ ನೆರವು ದೊರೆಯುವ ಸಾಧ್ಯತೆಯಿಲ್ಲ. ಈ ಪಿಚ್‌ನಲ್ಲಿ ನಾಥನ್ ಲಿಯಾನ್ ಬೌಲಿಂಗ್ ನಡೆಸುವುದನ್ನು ಆನಂದಿಸಬೇಕು" ಎಂದಿದ್ದಾರೆ ಮಿಚೆಲ್ ಜಾನ್ಸನ್.

Story first published: Monday, February 6, 2023, 11:55 [IST]
Other articles published on Feb 6, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X