ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃದ್ದಿಮಾನ್ ಸಹಾಗೆ ಬೆದರಿಕೆ ಪ್ರಕರಣ: ಖ್ಯಾತ ಪತ್ರಕರ್ತನಿಗೆ 2 ವರ್ಷಗಳ ಬ್ಯಾನ್ ಶಿಕ್ಷೆ! ಯಾರು ಆ ಪತ್ರಕರ್ತ?

Boria Majumdar likely to be banned for 2 years by BCCI regarding Wriddhiman Saha row says report

ಕಳೆದ ಫೆಬ್ರವರಿ ತಿಂಗಳಿನಲ್ಲಿ ವೃದ್ಧಿಮಾನ್ ಸಹಾ ನೀಡಿದ್ದ ಪ್ರತಿಯೊಂದು ಹೇಳಿಕೆಯೂ ಸಹ ದೊಡ್ಡ ಮಟ್ಟದ ವಿವಾದಗಳನ್ನು ಹುಟ್ಟುಹಾಕಿತ್ತು. ರಾಹುಲ್ ದ್ರಾವಿಡ್ ಅವರೇ ನನಗೆ ನಿವೃತ್ತಿ ಘೋಷಿಸು ಎಂಬ ಸಲಹೆಯನ್ನು ನೀಡಿದ್ದರು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಭಾರಿ ಟೀಕೆಗೆ ಕಾರಣವಾಗಿತ್ತು ಹಾಗೂ ವೃದ್ಧಿಮಾನ್ ಸಹಾ ಭಾರತದ ಖ್ಯಾತ ಪತ್ರಕರ್ತನೋರ್ವ ತನಗೆ ಬೆದರಿಕೆಯನ್ನು ಹಾಕಿದ್ದರು ಎಂಬ ಹೇಳಿಕೆಯನ್ನು ನೀಡಿ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದರು.

ಆರ್‌ಸಿಬಿ ಸೋತ ನಂತರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ; ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?ಆರ್‌ಸಿಬಿ ಸೋತ ನಂತರ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ; ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?

ಖ್ಯಾತ ಕ್ರೀಡಾ ಪತ್ರಕರ್ತನೋರ್ವ ತನಗೆ ಬೆದರಿಕೆಯನ್ನು ಒಡ್ಡಿದ್ದರು ಎಂದು ಆರೋಪಿಸಿದ್ದ ವೃದ್ದಿಮಾನ್ ಸಹಾ ಸಾಮಾಜಿಕ ಜಾಲತಾಣದಲ್ಲಿ ಆ ಪತ್ರಕರ್ತ ತನಗೆ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್ ಶಾಟ್ ಹಾಕಿದ್ದರು. ಈ ಚಿತ್ರಗಳಲ್ಲಿ ಆ ಪತ್ರಕರ್ತ ವೃದ್ದಿಮಾನ್ ಸಹಾ ವಿರುದ್ಧ ಬೆದರಿಕೆಯನ್ನು ಹಾಕಿದ್ದ ಸಂದೇಶಗಳು ಇರುವುದು ಸ್ಪಷ್ಟವಾಗಿ ಕಾಣ ಸಿಕ್ಕಿತ್ತು.

ಐಪಿಎಲ್ ಮುಗಿದ ಬೆನ್ನಲ್ಲೇ ನಡೆಯಲಿದೆ ಭಾರತ vs ದ.ಆಫ್ರಿಕಾ ಸರಣಿ: ಪ್ರಾರಂಭ ಯಾವಾಗ? ಇಲ್ಲಿದೆ ವೇಳಾಪಟ್ಟಿಐಪಿಎಲ್ ಮುಗಿದ ಬೆನ್ನಲ್ಲೇ ನಡೆಯಲಿದೆ ಭಾರತ vs ದ.ಆಫ್ರಿಕಾ ಸರಣಿ: ಪ್ರಾರಂಭ ಯಾವಾಗ? ಇಲ್ಲಿದೆ ವೇಳಾಪಟ್ಟಿ

'ನೀವು ನನ್ನ ಕರೆಯನ್ನು ಸ್ವೀಕರಿಸಿಲ್ಲ, ಇನ್ನು ಮುಂದೆ ನಾನು ನಿಮ್ಮ ಸಂದರ್ಶನವನ್ನು ಮಾಡುವುದಿಲ್ಲ. ನನಗೆ ಈ ರೀತಿಯ ಅವಮಾನಗಳೆಂದರೆ ಇಷ್ಟವಾಗುವುದಿಲ್ಲ ಹಾಗೂ ಈ ಇದನ್ನು ನಾನು ಎಂದಿಗೂ ಮರೆಯುವುದಿಲ್ಲ' ಎಂದು ಕರೆಯನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ವೃದ್ಧಿಮಾನ್ ಸಹಾ ವಿರುದ್ಧ ಆ ಪತ್ರಕರ್ತ ಸಂದೇಶಗಳ ಮೂಲಕ ಬೆದರಿಕೆಯನ್ನು ಹಾಕಿದ್ದರು. ಇನ್ನು ಪತ್ರಕರ್ತ ಕಳುಹಿಸಿದ್ದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವೃದ್ದಿಮಾನ್ ಸಹಾ ಹೆಸರನ್ನು ಬಹಿರಂಗಪಡಿಸಿರಲಿಲ್ಲ ಹಾಗೂ ಕ್ರಿಕೆಟಿಗನೋರ್ವನಿಗೆ ಈ ರೀತಿ ಬೆದರಿಕೆಯನ್ನು ಹಾಕಿದ ಆ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೂಗು ಕೇಳಿಬಂದಿತ್ತು. ಹಾಗೂ ಈ ಕುರಿತಾಗಿ ಪ್ರತಿಕ್ರಿಯಿಸಿದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಈ ಪ್ರಕರಣದ ಕುರಿತು ತನಿಖೆಯನ್ನು ನಡೆಸಲಾಗುವುದು ಹಾಗೂ ತಪ್ಪು ರುಜುವಾತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸದೊಂದು ಸುದ್ದಿ ಹೊರಬಂದಿದ್ದು, ವೃದ್ದಿಮಾನ್ ಸಹಾಗೆ ಬೆದರಿಕೆಯನ್ನು ಹಾಕಿದ್ದ ಪತ್ರಕರ್ತ 2 ವರ್ಷ ನಿಷೇಧದ ಶಿಕ್ಷೆಗೆ ಒಳಪಡಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

ವೃದ್ದಿಮಾನ್ ಸಹಾಗೆ ಬೆದರಿಕೆ ಹಾಕಿದ್ದ ಬೊರಿಯಾ ಮಜುಂದಾರ್

ವೃದ್ದಿಮಾನ್ ಸಹಾಗೆ ಬೆದರಿಕೆ ಹಾಕಿದ್ದ ಬೊರಿಯಾ ಮಜುಂದಾರ್

ಇನ್ನು ತನಗೆ ಪತ್ರಕರ್ತನೋರ್ವ ಬೆದರಿಕೆಯನ್ನು ಹಾಕುತ್ತಿದ್ದರು ಎಂಬ ಆರೋಪವನ್ನು ಮಾಡಿ ಪತ್ರಕರ್ತನ ಹೆಸರನ್ನು ತಿಳಿಸಲು ಹಿಂಜರಿದಿದ್ದ ವೃದ್ಧಿಮಾನ್ ಸಹಾಗೆ ಬೆದರಿಸಿದ್ದ ಆ ಪತ್ರಕರ್ತನ ಹೆಸರು ಬೋರಿಯಾ ಮಜುಂದಾರ್ ಎನ್ನಲಾಗುತ್ತಿದೆ. ಹಿರಿಯ ಕ್ರೀಡಾ ಪತ್ರಕರ್ತನಾಗಿರುವ ಬೋರಿಯಾ ಮಜುಂದಾರ್ ಕ್ರಿಕೆಟಿಗರ ಜತೆ ಟಾಕ್ ಶೋ ನಡೆಸಿ ಹಲವಾರು ಸಂದರ್ಶನಗಳನ್ನು ಮಾಡಿದ ಅನುಭವವನ್ನು ಹೊಂದಿದ್ದಾರೆ.

ಈ ಕುರಿತಾಗಿ ಮಾತನಾಡಿದ ಬಿಸಿಸಿಐ ಉನ್ನತ ಅಧಿಕಾರಿ ಹೇಳಿದ್ದಿಷ್ಟು

ಈ ಕುರಿತಾಗಿ ಮಾತನಾಡಿದ ಬಿಸಿಸಿಐ ಉನ್ನತ ಅಧಿಕಾರಿ ಹೇಳಿದ್ದಿಷ್ಟು

ದಿ ಸಂಡೇ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಬಿಸಿಸಿಐನ ಉನ್ನತ ಅಧಿಕಾರಿಯೋರ್ವರು "ಬೋರಿಯಾ ಮಜುಂದಾರ್ ಅವರನ್ನು ದೇಶದಲ್ಲಿನ ಯಾವುದೇ ಕ್ರೀಡಾಂಗಣಗಳಿಗೂ ಪ್ರವೇಶಿಸದಂತೆ ನಿಷೇಧ ಹೇರಲು ಎಲ್ಲಾ ರಾಜ್ಯ ಘಟಕಗಳಿಗೂ ಅಧಿಸೂಚನೆ ಹೊರಡಿಸುತ್ತೇವೆ. ದೇಶದಲ್ಲಿ ನಡೆಯಲಿರುವ ಪಂದ್ಯಗಳನ್ನು ವೀಕ್ಷಿಸಲು ಅವರಿಗೆ ಅವಕಾಶವನ್ನು ನೀಡದೇ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಹಾಗೂ ಮಾಧ್ಯಮ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಮತ್ತು ಯಾವುದೇ ಆಟಗಾರರು ಅವರಿಗೆ ಸಂದರ್ಶನವನ್ನು ನೀಡಬಾರದು ಎಂದು ಘೋಷಿಸಲಾಗುವುದು" ಎಂದಿದ್ದಾರೆ. ಹೀಗಾಗಿ ಬೊರಿಯಾ ಮಜುಂದಾರ್ ಅವರಿಗೆ 2 ವರ್ಷಗಳ ಬ್ಯಾನ್ ಸಂಕಷ್ಟ ಎದುರಾಗುವುದು ಖಚಿತ ಎನ್ನಲಾಗುತ್ತಿದೆ.

ಮುಂಬೈ ಪ್ಲೇ ಆಫ್ ಎಂಟ್ರಿಗೆ ಇದೊಂದೇ ಉಳಿದಿರೋ ದಾರಿ... | Oneindia Kannada
ಬೋರಿಯಾ ಮಜುಂದಾರ್ ಕಿರು ಪರಿಚಯ

ಬೋರಿಯಾ ಮಜುಂದಾರ್ ಕಿರು ಪರಿಚಯ

ಮಾರ್ಚ್ 8, 1976ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಬೊರಿಯಾ ಮಜುಂದಾರ್ ಕ್ರಿಕೆಟ್ ಕಾಮೆಂಟೇಟರ್ ಹಾಗೂ ಕ್ರೀಡಾ ಪತ್ರಕರ್ತನಾಗಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. 46 ವರ್ಷದ ಬೊರಿಯಾ ಮಜುಂದಾರ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಬರೆದಿದ್ದ 'ಪ್ಲೇಯಿಂಗ್ ಇಟ್ ಮೈ ವೇ' ಎಂಬ ಆತ್ಮಚರಿತ್ರೆಗೆ ಸಹಾಯಕ ಲೇಖಕನಾಗಿ ಕೂಡ ಕೆಲಸ ನಿರ್ವಹಿಸಿದ್ದರು. ಹೀಗೆ ಕ್ರೀಡಾ ಪತ್ರಕರ್ತ ಆಗಿರುವುದರ ಜತೆಗೆ ಪುಸ್ತಕ ಬರೆಯುವ ಹವ್ಯಾಸವನ್ನು ಕೂಡ ಬೋರಿಯಾ ಮಜುಂದಾರ್ ಹೊಂದಿದ್ದಾರೆ.

Story first published: Monday, April 25, 2022, 10:15 [IST]
Other articles published on Apr 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X