ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮಳೆ ಬಂದದ್ದು ಎರಡು ತಂಡಗಳಿಗೂ ಅನುಕೂಲವಾಯಿತು ಎಂದ ಮಾಜಿ ಕ್ರಿಕೆಟಿಗ

Both India and England will consider themselves lucky says Zaheer Khan

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲನೆಯ ದಿನ ಯಾವುದೇ ಅಡಚಣೆಯಿಲ್ಲದೇ ಸರಾಗವಾಗಿ ನಡೆದ ಪಂದ್ಯಕ್ಕೆ ಎರಡನೇ ದಿನದಿಂದ ಮಳೆಯ ಕಾಟ ಆರಂಭವಾಯಿತು.

ಆಗಸ್ಟ್ 9ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದದ್ದೇನು?ಆಗಸ್ಟ್ 9ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದದ್ದೇನು?

ಕೊನೆಯ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಆಗುವುದಿಲ್ಲ, ಫಲಿತಾಂಶ ಸಿಗಲಿದೆ ಎಂದೇ ಎಣಿಸಲಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿಯೂ ವರುಣನ ಆಗಮನವಾದ ಕಾರಣದಿಂದ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಂಕಾಗಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 303 ರನ್ ಗಳಿಸುವುದರ ಮೂಲಕ ಭರ್ಜರಿ ಪ್ರದರ್ಶನವನ್ನು ನೀಡಿತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ 278 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ನೀಡಿದ್ದ 208 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಿದ್ಧವಾಗಿತ್ತು.

ಪಾಕ್ ವಿರುದ್ಧ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!ಪಾಕ್ ವಿರುದ್ಧ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದ್ದ ಸಂದರ್ಭದಲ್ಲಿ ವರುಣನ ಆಗಮನವಾದ್ದರಿಂದ ಪಂದ್ಯ ಸ್ಥಗಿತಗೊಂಡಿತು ಮತ್ತು ಐದನೇ ದಿನದ ಪೂರ್ತಿ ಮಳೆರಾಯನ ಆಟ ಮುಂದುವರೆದ ಕಾರಣ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಹೀಗೆ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿರುವುದರ ಕುರಿತು ಇದೀಗ ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮಾತನಾಡಿದ್ದು ಮೊದಲನೇ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದ್ದು ಎರಡೂ ತಂಡಗಳಿಗೂ ಸಹ ಅನುಕೂಲವಾಯಿತು ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಭಾರತ ಗೆಲ್ಲುವ ವಿಶ್ವಾಸದಲ್ಲಿತ್ತು

ಭಾರತ ಗೆಲ್ಲುವ ವಿಶ್ವಾಸದಲ್ಲಿತ್ತು

ಪಂದ್ಯ ಡ್ರಾ ಆಗಿರುವುದರ ಕುರಿತು ಮಾತನಾಡಿದ ಜಹೀರ್ ಖಾನ್ ಮಳೆ ಆಗಮನವಾದದ್ದು ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಿಗೂ ಅನುಕೂಲವೆನಿಸಿರುತ್ತದೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಜಹೀರ್ ಖಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಐದನೇ ದಿನ ಮಳೆ ಆಗಮನವಾಗುವ ಸಮಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂದೇ ಒಂದು ಕಳೆದುಕೊಂಡು ಒಂಬತ್ತು ವಿಕೆಟ್ ಉಳಿಸಿಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಇನ್ನೂ ಒಂಬತ್ತು ವಿಕೆಟ್‍ಗಳು ಕೈನಲ್ಲಿದ್ದ ಟೀಮ್ ಇಂಡಿಯಾ ಗೆಲ್ಲುವ ವಿಶ್ವಾಸದಲ್ಲಿತ್ತು ಎಂದು ಜಹೀರ್ ಖಾನ್ ಹೇಳಿದ್ದಾರೆ.

ಅತ್ತ ಇಂಗ್ಲೆಂಡ್ ಕೂಡ ಮೇಲುಗೈ ಸಾಧಿಸಿತ್ತು

ಅತ್ತ ಇಂಗ್ಲೆಂಡ್ ಕೂಡ ಮೇಲುಗೈ ಸಾಧಿಸಿತ್ತು

ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ಇಂಗ್ಲೆಂಡ್ ತಂಡ ಎರಡನೆ ಇನ್ನಿಂಗ್ಸ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ 303 ರನ್ ಗಳಿಸಿ ಟೀಮ್ ಇಂಡಿಯಾಗೆ 208 ರನ್‌ಗಳ ಗುರಿ ನೀಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 200ರ ಗಡಿ ದಾಟಲು ಪರದಾಡಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಗಿಸಿ 208 ರನ್ ಟಾರ್ಗೆಟ್ ನೀಡುವಷ್ಟು ವಿಶ್ವಾಸದ ಆಟವನ್ನಾಡಿತ್ತು. ಐದನೇ ದಿನ ಮಳೆಯ ಆಗಮನವಾದಾಗ ಇಂಗ್ಲೆಂಡ್ ತಂಡ ಕೂಡ ವಿಶ್ವಾಸದಲ್ಲಿಯೇ ಇತ್ತು ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

IPL ಮುಂದುವರೆದರೆ ಯಾವ ದೇಶದ ಆಟಗಾರರು ಪಾಲ್ಗೊಳ್ಳಲಿದ್ದಾರೆ | Oneindia Kannada
ಎರಡೂ ತಂಡಗಳ ಚಿತ್ರ ಗೆಲುವಿನತ್ತ ಇತ್ತು

ಎರಡೂ ತಂಡಗಳ ಚಿತ್ರ ಗೆಲುವಿನತ್ತ ಇತ್ತು

ಐದನೇ ದಿನ ಮಳೆಯಾಗಮನವಾಗಿದೆ ಪಂದ್ಯ ಸ್ಥಗಿತಗೊಂಡಾಗ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ಗೆಲುವಿನತ್ತ ಗುರಿ ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಮಳೆ ಬಂದಾಗ ಯಾವುದೇ ತಂಡ ಕೂಡ ನಿಟ್ಟುಸಿರು ಬಿಡಲಿಲ್ಲ, ಇತ್ತ ಟೀಮ್ ಇಂಡಿಯಾ ಗುರಿಯನ್ನು ಬೆನ್ನಟ್ಟಿ ಮೊದಲ ಪಂದ್ಯವನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಅತ್ತ ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಯಿಂದ ಟೀಮ್ ಇಂಡಿಯಾವನ್ನು ಮಣಿಸುವ ಯೋಜನೆಯಲ್ಲಿತ್ತು ಎಂದು ಜಹೀರ್ ಖಾನ್ ಹೇಳಿದ್ದಾರೆ.

Story first published: Tuesday, August 10, 2021, 1:13 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X