ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯ: ಆರಂಭಿಕ ಆಟಗಾರರ ಬಗ್ಗೆ ಮಹತ್ವದ ಸುಳಿವು ನೀಡಿದ ಕೊಹ್ಲಿ

Both Shikhar Dhawan And KL Rahul Can Play: Virat Kohli

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ನಡೆಯಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮಿದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಯಾರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಬೇಕು ಎಂಬುದು ದೊಡ್ಡ ತಲೆನೋವಾಗಿದೆ. ಮೂವರು ಆಟಗಾರರು ಪೈಪೋಟಿ ನಡೆಸುತ್ತಿದ್ದು ಮೂವರೂ ಅದ್ಭುತ ಪ್ರದರ್ಶನ ನೀಡುತ್ತಿರುವುದು ನಾಯಕನ ತಲೆನೋವಿಗೆ ಕಾರಣವಾಗಿದೆ.

ಈ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಹತ್ವದ ಸುಳಿವನ್ನು ನೀಡಿದ್ದಾರೆ. ಆರಂಭಿಕ ಸ್ಥಾನಕ್ಕೆ ಪೈಪೋಟಿಯಿರುವ ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್ ಮೂವರೂ ಕಣಕ್ಕಿಳಿಯಲಿದ್ದು, ವಿರಾಟ್ ಒಂದು ಸ್ಥಾನ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸುಳಿವನ್ನು ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ದೇವರ ದೊಡ್ಡ ದಾಖಲೆ ಮೇಲೆ ಕೊಹ್ಲಿ ಕಣ್ಣು!ಭಾರತ vs ಆಸ್ಟ್ರೇಲಿಯಾ: ಕ್ರಿಕೆಟ್ ದೇವರ ದೊಡ್ಡ ದಾಖಲೆ ಮೇಲೆ ಕೊಹ್ಲಿ ಕಣ್ಣು!

ಆಸ್ಟ್ರೇಲಿಯಾದಂತ ಮಹತ್ವದ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಈ ಬದಲಾವಣೆಗೆ ನಿರ್ಧರಿಸಿದಂತೆ ಕಂಡು ಬರುತ್ತಿದೆ. ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿಕೆಯನ್ನು ನೀಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ವಿರಾಟ್ ಅಗತ್ಯವೆನಿಸಿದರೆ ತಾನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಬಲಿಷ್ಠ ಟಾಪ್ 4 ಅಗತ್ಯವಿದೆ. ರೋಹಿತ್ ಶರ್ಮಾ, ರಾಹುಲ್, ಶಿಖರ್ ಧವನ್ ಮೂವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ರಾಹುಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವ ಪ್ಲ್ಯಾನ್‌ ನಾಯಕನದ್ದು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಶ್ರೇಯಸ್ ಅಯ್ಯರ್ 5 ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.

ಭಾರತ vs ಶ್ರೀಲಂಕಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!ಭಾರತ vs ಶ್ರೀಲಂಕಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!

ನಿಗದಿತ ಓವರ್‌ ಮಾದರಿಯಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಟೀಮ್ ಇಂಡಿಯಾದ ಖಾಯಂ ಆರಂಭಿಕ ಆಟಗಾರರು. ಕಳೆದ ಎರಡು ಸರಣಿಗಳಲ್ಲಿ ಈ ಇಬ್ಬರೂ ಕ್ರಮವಾಗಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಸಿಕ್ಕ ಅವಕಾಶವನ್ನು ಅದ್ಭುತ ರೀತಿಯಲ್ಲಿ ಬಳಸಿಕೊಂಡ ಕೆಎಲ್ ರಾಹುಲ್ ಆರಂಭಿಕನಾಗಿ ಮುಂದುವರಿಯಲು ಎಷ್ಟು ಸಮರ್ಥ ಎಂಬುದನ್ನು ನಿರೂಪಿಸಿದ್ದರು.

Story first published: Monday, January 13, 2020, 19:11 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X