ಐಸಿಸಿ ಪಂದ್ಯಗಳಲ್ಲಿ ವಿಜೇತರ ಆಯ್ಕೆಗೆ ಇನ್ಮುಂದೆ 'ಬೌಂಡರಿ ಎಣಿಕೆ' ನಿಯಮವಿಲ್ಲ

ICC Major Rule Changes In Cricket | Oneindia Kannada

ಲಂಡನ್, ಅಕ್ಟೋಬರ್ 15: ಐಸಿಸಿ ನಡೆಸುವ ಪಂದ್ಯಗಳಲ್ಲಿ ಇನ್ಮುಂದೆ ಸೆಮಿಫೈನಲ್, ಫೈನಲ್‌ನಲ್ಲಿ ಸೂಪರ್ ಓವರ್ ಬಳಿಕ ಪಂದ್ಯ ಟೈ ಎನಿಸಿದರೆ ವಿಜೇತರ ಆಯ್ಕೆಗೆ ಬೌಂಡರಿ ಎಣಿಕೆ ನಿಯಮ ಇರುವುದಿಲ್ಲ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಗೆದ್ದಿದ್ದು ಈ ಬೌಂಡರಿ ಕೌಂಟ್ ನಿಯಮದಿಂದಲೇ. ಅಸಲಿಗೆ ಆ ಪಂದ್ಯ ಸೂಪರ್ ಓವರ್‌ನಲ್ಲೂ ಟೈ ಎನಿಸಿಕೊಂಡಿತ್ತು.

ಮೂರನೇ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ

'ಸೆಮಿ ಫೈನಲ್‌ ಮತ್ತು ಫೈನಲ್ ಪಂದ್ಯದಲ್ಲಿ ವಿಜೇತ ತಂಡ ಎದುರಾಳಿಗಿಂತ ಹೆಚ್ಚುವರಿ ರನ್ ಗಳಿಸಿರಬೇಕು ಎನ್ನುವ ಮೂಲ ನಿಯಮವನ್ನಿಟ್ಟುಕೊಂಡು ಸೂಪರ್ ಓವರ್‌ ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅದೇನೆಂದರೆ ಇನ್ಮುಂದೆ ಒಂದು ತಂಡ ಎದುರಾಳಿಗಿಂತ ಹೆಚ್ಚುವರಿ ರನ್ ಗಳಿಸುವವರೆಗೂ ಸೂಪರ್ ಓವರ್‌ ಮರುಕಳಿಸುತ್ತಿರುತ್ತದೆ,' ಎಂದು ಐಸಿಸಿ ಸೋಮವಾರ (ಅಕ್ಟೋಬರ್ 14) ಹೇಳಿದೆ.

ಭಾರತ vs ದಕ್ಷಿಣ ಆಫ್ರಿಕಾ: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!

ಲಂಡನ್‌ನಲ್ಲಿ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು 241 ರನ್ ಬಾರಿಸಿ ಪಂದ್ಯದ ಫಲಿತಾಂಶವನ್ನು ಸರಿದೂಗಿಸಿಕೊಂಡಿದ್ದವು. ಆ ಬಳಿಕ ಸೂಪರ್ ಓವರ್‌ ನಡೆಸಲಾಯ್ತು. ಅದರಲ್ಲೂ ಇತ್ತಂಡಗಳು ಸಮಬಲ ಸಾಧಿಸಿದ್ದವು. ಕೊನೆಗೆ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್‌ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು.

PKL7 ಸೆಮಿಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್ ಗೆ ಬಹುಪರಾಕ್!

ಬೌಂಡರಿ ಕೌಂಟ್‌ ನಿಯಮದ ಮೂಲಕ ಇಂಗ್ಲೆಂಡ್‌ ತಂಡವನ್ನು ವಿಜಯಿ ಎಂದು ಘೋಷಿಸಿದ್ದು ವಿವಾದಕ್ಕೂ ಕಾರಣವಾಗಿತ್ತು. ಅನೇಕ ಕ್ರಿಕೆಟ್ ಪರಿಣಿತರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಬೌಂಡರಿ ಕೌಂಟ್‌ ಬದಲು 2ನೇ ಸೂಪರ್ ಓವರ್‌ ನಡೆಸಲು ಸಲಹೆ ನೀಡಿದ್ದರು. ಅಂತೂ ಐಸಿಸಿ ಬೌಂಡರಿ ನಿಯಮವನ್ನು ತೆಗೆದುಹಾಕಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, October 15, 2019, 10:21 [IST]
Other articles published on Oct 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X