ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಗ್ಲೆನ್ ಮ್ಯಾಕ್ಸ್‌ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್‌ಗಳಿವರು

Bowlers dismissing Glenn Maxwell most times in IPL history

ಅಹ್ಮದಾಬಾದ್‌: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 27) ನಡೆದ ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ರೋಚಕ ಜಯ ಗಳಿಸಿದೆ. ಆರ್‌ಸಿಬಿಗೆ ಇದು ಈ ಸೀಸನ್‌ನಲ್ಲಿ ಲಭಿಸಿದ 5ನೇ ಗೆಲುವು.

ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!

ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್‌ ನೆರವಿನೊಂದಿಗೆ ಗೆಲುವು ಕಂಡಿರುವ ವಿರಾಟ್ ಕೊಹ್ಲಿ ಪಡೆ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮಂಗಳವಾರದ ಪಂದ್ಯದಲ್ಲೇ ಆರ್‌ಸಿಬಿ ಪ್ರಮುಖ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಬೇಡದ ದಾಖಲೆ ಪಟ್ಟಿ ಸೇರಿದ್ದಾರೆ. ಆರ್‌ಸಿಬಿ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಮ್ಯಾಕ್ಸ್‌ವೆಲ್ 25 ರನ್‌ ಬಾರಿಸಿ 8.3ನೇ ಓವರ್‌ನಲ್ಲಿ ಅಮಿತ್ ಮಿಶ್ರಾ ಎಸೆತಕ್ಕೆ ಸ್ಟೀವ್‌ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಆತ ನನ್ನ ಕಣ್ಣಲ್ಲಿ ನೀರು ತರಿಸಿದ: ಭಾರತೀಯನ ನೆನೆದ ಡೇಲ್ ಸ್ಟೇನ್ಆತ ನನ್ನ ಕಣ್ಣಲ್ಲಿ ನೀರು ತರಿಸಿದ: ಭಾರತೀಯನ ನೆನೆದ ಡೇಲ್ ಸ್ಟೇನ್

ಮ್ಯಾಕ್ಸ್‌ವೆಲ್ ವಿಕೆಟ್ ಮಿಶ್ರಾಗೆ ಲಭಿಸುತ್ತಲೇ ಅವರ ಹೆಸರಿನಲ್ಲಿ ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಐಪಿಎಲ್‌ನಲ್ಲಿ ಮಿಶ್ರಾಗೆ ಒಟ್ಟು 5 ಬಾರಿ ವಿಕೆಟ್ ಒಪ್ಪಿಸಿದ ದಾಖಲೆ ಮ್ಯಾಕ್ಸ್‌ವೆಲ್ ಹೆಸರಿಗೆ ಸೇರಿದೆ. ಮಿಶ್ರಾಗೆ ಅಲ್ಲದೆ ರವೀಂದ್ರ ಜಡೇಜಾಗೂ ಗ್ಲೆನ್ 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್ ಹೆಚ್ಚು ಬಾರಿ ಔಟ್ ಮಾಡಿದವರ ಪಟ್ಟಿ
* ರವೀಂದ್ರ ಜಡೇಜಾ 5 ಬಾರಿ
* ಅಮಿತ್ ಮಿಶ್ರಾ 5 ಬಾರಿ
* ಜಸ್‌ಪ್ರೀತ್‌ ಬೂಮ್ರಾ 4 ಬಾರಿ

Story first published: Wednesday, April 28, 2021, 1:41 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X