ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಆಡಲು ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ತಯಾರಿ ಬೇಕು: ಐಸಿಸಿ

Bowlers require minimum 2 months preparation to play Test says ICC

ಮುಂಬೈ, ಮೇ 23: ಕೊರೊನಾವೈರಸ್ ಲಾಕ್‌ಡೌನ್ ಬಳಿಕ ಮತ್ತೆ ಟೆಸ್ಟ್ ಕ್ರಿಕೆಟ್ ಆಡಲಾರಂಭಿಸಲು ಎದುರು ನೋಡುತ್ತಿರುವ ಬೌಲರ್‌ಗಳಿಗೆ ಏನಿಲ್ಲವೆಂದರೂ 2 ತಿಂಗಳ ತಯಾರಿ ಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಅವರು ಗಾಯಕ್ಕೀಡಾಗುವುದರಿಂದ ಪಾರಾಗಬಲ್ಲರು ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!

ಕ್ರಿಕೆಟ್ ಸೇರಿದಂತೆ ವಿಶ್ವದ ಬಹುತೇಕ ಕ್ರೀಡಾಸ್ಪರ್ಧೆಗಳು ಕೋವಿಡ್-19 ಸೋಂಕಿನ ಕಾರಣ ರದ್ದಾಗಿದ್ದವು. ಇದೀಗ ವಿಶ್ವದ ಅನೇಕ ರಾಷ್ಟ್ರಗಳು, ಮಾರ್ಗ ಸೂಚಿಗಳನ್ನು ನೀಡಿ ನಿಷೇಧಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸುತ್ತಿವೆ. ಹೀಗಾಗಿ ಕ್ರೀಡಾ ಚಟುವಟಿಕೆಗಳು ಮೆಲ್ಲಗೆ ಪುನರಾಂಭಗೊಳ್ಳುತ್ತಿವೆ.

ರೋಹಿತ್ ಶರ್ಮಾಗೆ ಟಿ20 ನಾಯಕನ ಪಟ್ಟ: ಮಾಜಿ ಕ್ರಿಕೆಟಿಗನ ಅಭಿಮತರೋಹಿತ್ ಶರ್ಮಾಗೆ ಟಿ20 ನಾಯಕನ ಪಟ್ಟ: ಮಾಜಿ ಕ್ರಿಕೆಟಿಗನ ಅಭಿಮತ

ಈ ವಾರ ಇಂಗ್ಲೆಂಡ್‌ನ ಆಟಗಾರರು ವೈಯಕ್ತಿಯ ಕೌಶಲದ ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಭಾರತವೂ ಕೊಂಚ ನಿಧಾನವಾಗಿ ಆಟಗಾರರಿಗೆ ತರಬೇತಿಯನ್ನು ಶುರು ಮಾಡಲಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಸರಣಿಗಾಗಿ ಟೀಮ್ ಇಂಡಿಯಾ ಮತ್ತೆ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ.

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

ಪಾಕಿಸ್ತಾನ ಕ್ರಿಕೆಟ್ ತಂಡವು ಆಗಸ್ಟ್‌ನಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಅದಾಗಿ ಇತ್ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಇಂಗ್ಲೆಂಡ್-ಪಾಕಿಸ್ತಾನ ಪಂದ್ಯಗಳು ಪ್ರೇಕ್ಷಕರಿಲ್ಲದ ಮೈದಾನದಲ್ಲಿ ನಡೆಯುವುದರಲ್ಲಿವೆ.

Story first published: Saturday, May 23, 2020, 15:57 [IST]
Other articles published on May 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X