ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಜಲು, ಬೆವರು ಬಳಸುವ ಬೌಲರ್‌ಗಳನ್ನು ಬ್ಯಾನ್‌ ಮಾಡಬೇಕು: ಎಂಎಸ್‌ಕೆ

Bowlers should be banned from using sweat and saliva: MSK Prasad

ನವದೆಹಲಿ, ಮೇ 16: ಕೊರೊನಾವೈರಸ್‌ನಿಂದ ಕ್ರೀಡಾ ಸ್ಪರ್ಧೆಗಳೇ ನಿಲುಗಡೆಯಾಗಿತ್ತು. ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ ಆಗುತ್ತಿರುವುದರಿಂದ ಈಗ ಕೊರೊನಾ ನಂತರದ ದಿನಗಳ ಬಗ್ಗೆ ಜನ ಮಾತನಾಡಲಾರಂಭಿಸಿದ್ದಾರೆ. ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಬೆವರು ಮತ್ತು ಎಂಜಲು ಬಳಸಿ ಚೆಂಡು ಹೊಳೆಯುವಂತೆ ಮಾಡಲು ಅನುಮತಿ ನೀಡಬೇಕೆ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿದೆ.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

ಕ್ರಿಕೆಟ್‌ ಆಟದ ವೇಳೆ ಬೌಲರ್‌ಗಳು ಎಂಜಲು ಬಳಸುವುದಕ್ಕೆ ಪರವಾಗಿ ಮತ್ತು ವಿರೋಧವಾಗಿ ಯಾರೇ ಮಾತನಾಡುತ್ತಿರಲಿ; ಭಾರತದ ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಮಾತ್ರ ಇದಕ್ಕೆ ನಕಾರ ಸೂಚಿಸಿದ್ದಾರೆ. ಚೆಂಡು ಹೊಳೆಯವಂತೆ ಮಾಡಲು ಬಳಸುವ ಇಂಥ ಕ್ರಮಗಳು ನಿಷೇಧವಾಗಬೇಕು ಎಂದು ಎಂಎಸ್‌ಕೆ ಹೇಳಿದ್ದಾರೆ.

ಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾ

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಪ್ರಸಾದ್, 'ಬಾಹ್ಯ ಮೂಲಗಳನ್ನು ಬಳಸಿ ಚೆಂಡು ಹೊಳೆಯುವಂತೆ ಮಾಡಕೂಡದು ಎಂದು ಆಟದ ನಿಯಮ ಹೇಳುತ್ತದೆ. ಹಾಗೆ ಮಾಡಿದರೆ ಅದನ್ನು ಚೆಂಡು ವಿರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಬೌಲರ್‌ಗಳು ಬೆವರು ಅಥವಾ ಎಂಜಲನ್ನು ಆಟದ ವೇಳೆ ಚೆಂಡಿಗೆ ಬಳಸುತ್ತಿದ್ದರು,' ಎಂದರು.

ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್

'ಆದರೆ ಕೊರೊನಾವೈರಸ್‌ನ ಇಂಥ ಪರಿಸ್ಥಿತಿಯಲ್ಲಿ ಬೆವರು ಮತ್ತು ಎಂಜಲನ್ನು ಬಳಸುವ ಬೌಲರ್‌ಗಳನ್ನು ಬ್ಯಾನ್ ಮಾಡಬೇಕು. ಚೆಂಡು ಹೊಳೆಯುವಂತೆ, ಸ್ವಿಂಗ್‌ ಆಗುವಂತೆ ಮಾಡಲು ಬೌಲರ್‌ಗಳಿಗೆ ಇದಕ್ಕೆ ಬೇರೊಂದು ಮಾರ್ಗವನ್ನು ಐಸಿಸಿ ಸೂಚಿಸಬೇಕು,' ಎಂದು ಪ್ರಸಾದ್ ಹೇಳಿದ್ದಾರೆ.

Story first published: Saturday, May 16, 2020, 15:18 [IST]
Other articles published on May 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X