ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ನಿಬ್ಬೆರಗಾಗಿಸಿದ ನಾಲ್ವರು ಬೌಲರ್‌ಗಳು

Bowlers Who Took Hat-Trick wickets On Their Odi Debuts

ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಅತ್ಯಂತ ವಿಶೇಷವಾದದ್ದು. ಸತತ ಮೂರು ಎಸೆತಗಳಲ್ಲಿ ಆಟಗಾರರನ್ನು ಔಟ್ ಮಾಡುವುದು ಅತ್ಯಂತ ಅಪರೂಪದೆ ಸಾಧನೆ. 47 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ 48 ಬಾರಿ ಮಾತ್ರವೇ ಈ ಸಾಧನೆ ದಾಖಲಾಗಿದೆ. ಆದರೆ ಕೇವಲ ನಾಲ್ವರು ಬೌಲರ್‌ಗಳು ಈ ಹ್ಯಾಟ್ರಿಕ್ ವಿಕೆಟ್‌ನಲ್ಲೂ ವಿಶೇಷವಾದದ್ದನ್ನು ಸಾಧಿಸಿದ್ದಾರೆ.

ಪದಾರ್ಪಣಾ ಪಂದ್ಯದಲ್ಲಿ ಗ್ರೇಟ್ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯ ಬೇಕು, ಐದು ವಿಕೆಟ್‌ಗಳ ಗೊಂಚಲು ಪಡೆಯಬೇಕು ಎಂಬ ಕನಸು ಬೌಲರ್‌ಗಳಿಗೆ ಸಹಜವಾಗಿರುತ್ತದೆ. ಆದರೆ ಬೆರಳಿಣಿಕೆಯ ಬೌಲರ್‌ಗಳು ಪ್ರಪ್ರಥಮ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದ ಆಟಗಾರರು ಎನಿಸಿದ್ದಾರೆ. ಅಂತಾರಾಷ್ಟ್ರೀ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಕೇವಲ ನಾಲ್ವರು ಬೌಲರ್‌ಗಳು ಮಾತ್ರವೇ ಮಾಡಿದ್ದಾರೆ.

ನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕ

ತಮ್ಮ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶೇಷ ಸಾಧನೆ ಮಾಡಿದ ಬೌಲರ್‌ಗಳು ಯಾರು. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ..

ತೈಜುಲ್ ಇಸ್ಲಾಮ್- ಬಾಂಗ್ಲಾದೇಶ

ತೈಜುಲ್ ಇಸ್ಲಾಮ್- ಬಾಂಗ್ಲಾದೇಶ

ಬಾಂಗ್ಲಾದೇಶದ ಬೌಲರ್ ತೈಜುಲ್ ಇಸ್ಲಾಮ್ ತಮ್ಮ ಏಕದಿನ ಪದಾರ್ಪಣೆಯನ್ನು 2014ರಲ್ಲಿ ಜಿಂಬಾಬ್ವೆ ವಿರುದ್ಧ ಮಾಡಿದ್ದರು. ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಪಡೆದ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿಗೆ ತೈಜುಲ್ ಇಸ್ಲಾಮ್ ಪಾತ್ರರಾಗಿದ್ದಾರೆ. ತನ್ನ ಆರನೇ ಓವರ್‌ನಲ್ಲಿ ತೈಜುಲ್ ಈ ದಾಖಲೆಯನ್ನು ಮಾಡಿದರು. ತಿನಶೆ ಪನ್ಯಂಗರ ವಿಕೆಟನ್ನು ಎಲ್‌ಬಿಡಬ್ಲ್ಯು ಮೂಲಕ ಕೆಡವಿದ ತೈಜುಲ್ ಜಾನ್ ನ್ಯುಂಬು ಮತ್ತು ಟೆಂಡೈ ಚಾಟರ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಪೂರ್ಣಗೊಳಿಸಿದರು.

ಕಗಿಸೋ ರಬಡಾ- ದಕ್ಷಿಣ ಆಫ್ರಿಕಾ

ಕಗಿಸೋ ರಬಡಾ- ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಬೌಲರ್ ತನ್ನ ಬೌಲಿಂಗ್ ಪರಾಕ್ರಮ ಎಂತದ್ದು ಅನ್ನುವುದನ್ನು ಮೊದಲ ಪಂದ್ಯದಲ್ಲೇ ಎದುರಾಳಿಗೆ ತೋರಿಸಿಕೊಟ್ಟಿದ್ದರು. 2015ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ತನ್ನ ಎತಡನೇ ಓವರ್‌ನಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ ರಬಡಾ. ಮೊದಲಿಗೆ ತಮೀಮ್ ವಿಕೆಟ್ ಪಡೆದ ರಬಡಾ ಮುಂದಿನ ಸತತ ಎರಡು ಎಸೆತಗಳಲ್ಲಿ ಲಿಟನ್ ದಾಸ್ ಮತ್ತು ಮಹ್ಮದುಲ್ಲಾ ವಿಕೆಟ್ ಹ್ಯಾಟ್ರಿಕ್ ಸಾಧನೆ ಮಾಡಿದರು.

ವನಿಂದು ಹಸರಂಗ- ಶ್ರೀಲಂಕಾ

ವನಿಂದು ಹಸರಂಗ- ಶ್ರೀಲಂಕಾ

2017ರಲ್ಲಿ ಗಾಲೆ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ವನಿಂದು ಹಸರಂಗ ತಮ್ಮ ಪದಾರ್ಪಣೆಯನ್ನು ಮಾಡಿದ್ದರು. ಪ್ರವಾಸಿ ಜಿಂಬಾಬ್ವೆ ಅದಾಗಲೆ 151ರನ್‌ಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆಗ ತನ್ನ ಮೂರನೇ ಓವರ್‌ ಮಾಡಲು ಇಳಿದ ವನಿಂದು ಹಸರಂಗ ಜಿಂಬಾಬ್ವೆ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ಮಾಲ್ಕೋಮ್ ವಾಲ್ಲರ್, ಡೊನಾಲ್ಡ್ ಟಿರಿಪಾನೋ ಮತ್ತು ತೆಂಡೈ ಚಾತರ ವಿಕೆಟ್ ಪಡೆದು ತನ್ನ ಪದಾರ್ಪಣಾ ಪಂದ್ಯವನ್ನು ಅತ್ಯಂತ ಸ್ಮರಣೀಯವಾಗಿಸಿದರು.

ಶೆಹನ್ ಮಧುಶಂಕಾ-ಶ್ರೀಲಂಕಾ

ಶೆಹನ್ ಮಧುಶಂಕಾ-ಶ್ರೀಲಂಕಾ

2018ರಲ್ಲಿ ಬಾಂಗ್ಲಾದೇಶದ ವಿರುದ್ಧ ಫೈನಲ್ ಪಂದ್ಯದಲ್ಲಿ ಶೆಹನ್ ಮಧುಶಂಕಾ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಕಣಕ್ಕಿಳಿದಿದ್ದರು. ಶ್ರೀಲಂಕಾ ತಂಡ ಈ ಪಂದ್ಯವನ್ನು ಅದಾಗಲೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಬೌಲಿಂಗ್‌ಗೆ ಇಳಿದ ಮಧಿಶಂಕಾ ಬಾಂಗ್ಲಾದೇಶದ ಪ್ರಮುಖ ಬ್ಯಾಟ್ಸ್‌ಮನ್ ಮಹ್ಮದುಲ್ಲಾ ಸೇರಿದಂತೆ ಹ್ಯಾಟ್ರಕ್ ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದ ಬಳಿಕ ಮಧುಶಂಕಾ ಶ್ರೀಲಂಕಾ ತಂಡದ ಪರವಾಗಿ ಯಾವುದೇ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ. ಕಳೆದವಾರ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಮಧುಶಂಕಾ ನಿಷೇಧಕ್ಕೂ ಗುರಿಯಾಗಿದ್ದಾರೆ.

Story first published: Thursday, June 4, 2020, 16:10 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X