ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಕ್ಸಿಂಗ್ ಡೇ ಟೆಸ್ಟ್: 8 ವರ್ಷಗಳ ಸೋಲಿಲ್ಲದ ಸಾಧನೆ ರಹಾನೆ ಪಡೆಗೆ ಸ್ಪೂರ್ತಿ

Boxing Day Test: Indias 8-year undefeated streak in Melbourne in danger

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಆರಂಭ ಭಾರತಕ್ಕೆ ಕೆಟ್ಟ ರೀತಿಯಲ್ಲಾಗಿದೆ. ಮೊದಲ ಟೆಸ್ಟ್‌ನಲ್ಲಿನ ಸೋಲು ಮಾತ್ರವೇ ಇದಕ್ಕೆ ಕಾರಣವಲ್ಲ ಈ ಸೋಲಿನ ಜೊತೆಗೆ ತಂಡಕ್ಕೆ ಗಾಯದ ಬರೆಯೂ ಮುಂದಿನ ಪಂದ್ಯಗಳಲ್ಲಿ ಕಾಡಲಿದೆ. ಇದರ ಜೊತೆಗೆ ನಾಯಕ ವಿರಾಟ್ ಕೊಹ್ಲಿ ಅಲಭ್ಯತೆ ಟೀಮ್ ಇಂಡಿಯಾದ ಹೋರಾಟವನ್ನು ಮತ್ತಷ್ಟು ಕಠಿಣವನ್ನಾಗಿ ಮಾಡಲಿದೆ.

ವಿರಾಟ್ ಕೊಹ್ಲಿ ಇಲ್ಲದ ಟೀಮ್ ಇಂಡಿಯಾವನ್ನು ಮುಂದಿನ ಮೂರು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೈಗೆ ಏಟು ತಿಂದಿರುವ ಮೊಹಮ್ಮದ್ ಶಮಿ ಕೂಡ ಮುಂದಿನ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಶಾಂತ್ ಶರ್ಮಾ ಹಾಗೂ ಹಿರಿಯ ಆಟಗಾರ ರೋಹಿತ್ ಶರ್ಮಾ ಅಲಭ್ಯತೆ ಕೂಡ ತಂಡಕ್ಕೆ ಕಾಡಲಿದೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಾರಾದರೂ ಕ್ವಾರಂಟೈನ್ ಹಿನ್ನೆಲೆಯಲ್ಲಿ ಎರಡನೇ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2022ರಿಂದ 10 ತಂಡಗಳ ಐಪಿಎಲ್‌ಗೆ ಒಪ್ಪಿಗೆಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2022ರಿಂದ 10 ತಂಡಗಳ ಐಪಿಎಲ್‌ಗೆ ಒಪ್ಪಿಗೆ

ಹಿನ್ನಡೆಯ ಮಧ್ಯೆ ಆಶಾಕಿರಣ

ಹಿನ್ನಡೆಯ ಮಧ್ಯೆ ಆಶಾಕಿರಣ

ಇಷ್ಟೆಲ್ಲಾ ಹಿನ್ನೆಡೆಯ ಮಧ್ಯೆ ಟೀಮ್ ಇಂಡಿಯಾಗೆ ಇತ್ತೀಚಿನ ದಾಖಲೆಯೊಂದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಆಶಾಕಿರಣದಂತೆ ಭಾಸವಾಗುತ್ತಿದೆ. ಮೆಲ್ಬರ್ನ್ ಅಂಗಳದಲ್ಲಿ ಕಳೆದ 8 ವರ್ಷಗಳಿಂದ ಭಾರತ ಸೋಲನ್ನು ಕಂಡಿಲ್ಲ. 2011ರಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿಗೆ ಮೆಲ್ಬರ್ನ್ ಅಂಗಳದಲ್ಲಿ ಸೋಲನ್ನು ಕಂಡಿತ್ತು.

ಐತಿಹಾಸಿಕ ಜಯಭೇರಿ

ಐತಿಹಾಸಿಕ ಜಯಭೇರಿ

2014ರಲ್ಲಿ ಮೆಲ್ಬರ್ನ್ ಅಂಗಳದಲ್ಲೇ ಬಾಕ್ಸಿಂಗ್ ಡೇ ಟೆಸ್ಟ್ ನಡೆದಿದ್ದಾಗ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. 2018ರ ಸರಣಿಯಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಜಯಭೇರಿಯನ್ನು ಬಾರಿಸಿತ್ತು.

ಕೊನೆಯ ಬಾರಿಯ ಸೋಲು

ಕೊನೆಯ ಬಾರಿಯ ಸೋಲು

ಆಸ್ಟ್ರೇಲಿಯಾ ನೆಲದಲ್ಲಿ ಕೊನೆಯ ಬಾರಿಗೆ ಸೋಲನ್ನು ಕಂಡಿದ್ದಾಗ ಟೀಮ್ ಇಂಡಿಯಾದ ನಾಯಕನಾಗಿ ಎಂಎಸ್ ಧೋನಿ ಮುನ್ನಡೆಸಿದ್ದರೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಮೈಕಲ್ ಕ್ಲಾರ್ಕ್ ಮುನ್ನಡೆಸಿದ್ದರು. ಬಾಕ್ಸಿಂಗ್ ಡೇಯಂದು ನಡೆದಿದ್ದ ಪಂದ್ಯವನ್ನು ಆಸಿಸ್ ಪಡೆ 122 ನ್‌ಗಳಿಂದ ಗೆದ್ದುಕೊಂಡಿತ್ತು.

ಒಟ್ಟಾರೆ ಫಲಿತಾಂಶದಲ್ಲಿ ಆಸಿಸ್ ಮುಂದು

ಒಟ್ಟಾರೆ ಫಲಿತಾಂಶದಲ್ಲಿ ಆಸಿಸ್ ಮುಂದು

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೆಲ್ಬರ್ನ್ ಅಂಗಳದ ಒಟ್ಟಾರೆ ದಾಖಲೆಯನ್ನು ಗಮನಿಸಿದರೆ ಆಸ್ಟ್ರೇಲಿಯಾ ದೊಡ್ಡ ಅಂತರದಿದ ಮುನ್ನಡೆಯಲ್ಲಿದೆ. ಮೆಲ್ಬರ್ನ್ ಅಂಗಳದಲ್ಲಿ ಈವರೆಗೆ ಒಟ್ಟು 13 ಪಂದ್ಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 3 ಗೆಲುವು ಸಾಧಿಸಲಷ್ಟೇ ಶಕ್ತವಾಗಿದೆ. 8 ಪಂದ್ಯಗಳಲ್ಲಿ ಆಸಿಸ್ ಗೆದ್ದಿದ್ದು 3 ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.

Story first published: Thursday, December 24, 2020, 19:59 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X