ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌

BPL franchise Khulna Titans rope in Shane Watson

ಢಾಕಾ, ಜುಲೈ 18: ಬಾಂಗ್ಲಾದೇಶ್‌ ಪ್ರೀಮಿಯರ್‌ ಲೀಗ್‌ನ 2019-2020ರ ಆವೃತ್ತಿಗೆ ಖುಲ್ನಾ ಟೈಟನ್ಸ್‌ ಫ್ರಾಂಚೈಸಿ ತಂಡ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಸ್ಟಾರ್‌ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಬಿಪಿಎಲ್‌ಗೆ ಪದಾರ್ಪಣೆ ಮಾಡಲು ವ್ಯಾಟೊ ಸಜ್ಜಾಗಿದ್ದಾರೆ.

ಡಿಸೆಂಬರ್‌ನ ಮೊದಲ ವಾರದಂದು ಆರಂಭವಾಗಲಿರುವ ಏಳನೇ ಆವೃತ್ತಿಯ ಬಾಂಗ್ಲಾದೇಶ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂಪೂರ್ಣ ಅವಧಿಗೆ ವ್ಯಾಟ್ಸನ್‌ ಲಭ್ಯರಾಗಿದ್ದಾರೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ. ವ್ಯಾಟ್ಸನ್‌ ಇದೇ ವರ್ಷ ಆಸ್ಟ್ರೇಲಿಯಾದ ಬಿಬ್‌ ಬ್ಯಾಷ್‌ ಲೀಗ್‌ಗೆ ನಿವೃತ್ತಿ ಘೋಷಿಸಿದ್ದರು.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

38 ವರ್ಷದ ಅನುಭವಿ ಆಟಗಾರ ವ್ಯಾಟ್ಸನ್‌, 2017ರಲ್ಲೇ ಬಾಂಗ್ಲಾ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಬೇಕಿತ್ತು. ಢಾಕಾ ಡೈನಾಮೈಟ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಸ್ಟಾರ್‌ ಆಲ್‌ರೌಂಡರ್‌ ಗಾಯದ ಸಮಸ್ಯೆ ಕಾರಣ ಟೂರ್ನಿಯಲ್ಲಿ ಆಡದೇ ಹೋದರು. ಇದೀಗ ಮೊದಲ ಬಾರಿ ಬಿಪಿಎಲ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದಾರೆ ಅಲ್ಲದೆ ಖುಲ್ನಾ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವುದನ್ನು ಎದುರು ನೋಡುತ್ತಿರುವುದಾಗಿ ಹೇಲಿಕೊಂಡಿದ್ದಾರೆ.

"ಮುಂಬರು ಬಾಂಗ್ಲಾದೇಶ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಖುಲ್ನಾ ಟೈಟನ್ಸ್‌ ಪರ ಆಡುವುದನ್ನು ಕಾತುರದಿಂದ ಎದುರು ನೋಡುತ್ತಿದ್ದೇನೆ. ಖುಲ್ನಾ ಟೈಟನ್ಸ್‌ನ ತರಬೇತಿ ಮತ್ತು ನಿರ್ವಹಣಾ ಬಳಗವು ಅತ್ಯಂತ ಬಲಿಷ್ಠ ತಂಡವನ್ನು ರಚಿಸುತ್ತಿದೆ. ಟ್ರೋಫಿ ಗೆಲ್ಲಲು ಸಾಧ್ಯವಾಗಲಿ ಎಂದಷ್ಟೇ ಆಶಿಸುತ್ತೇನೆ," ಎಂದು ವ್ಯಾಟ್ಸನ್‌ ಹೇಳಿದ್ದಾರೆ.

ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!

ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮಂಡಿ ಹರಿದು ರಕ್ತ ಸುರಿದರೂ ಲೆಕ್ಕಿಸಿದೆ ತಂಡ ಗೆಲುವಿಗಾಗಿ ಹೋರಾಟ ನಡೆಸಿದ್ದ ವ್ಯಾಟ್ಸನ್‌, ಇಡೀ ಕ್ರಿಕೆಟ್‌ ಜಗತ್ತಿನ ಮನ ಗೆದ್ದಿದ್ದರು. ಈಗಾಗಲೇ ಅಂತಾರಾಷ್ಟ್ರೀಯ ಮತ್ತು ಬಿಬಿಎಲ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ವ್ಯಾಟೊ, ಐಪಿಎಲ್‌ನಲ್ಲಿ ತಮ್ಮ ವೃತ್ತಿ ಬದುಕು ಮುಂದುವರಿಸುವುದಾಗಿ ಹೇಳಿದ್ದರು.

Story first published: Thursday, July 18, 2019, 19:09 [IST]
Other articles published on Jul 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X