ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುರಳೀಧರನ್ ದಾಖಲೆ ಮುರಿಯುವಂತೆ ಅಶ್ವಿನ್ ಬೆನ್ನುತಟ್ಟಿದ ಹಾಗ್

Brad Hogg backs R Ashwin to break Muttiah Muralitharans record

ಸಿಡ್ನಿ: ಶ್ರೀಲಂಕಾ ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿ 800 ಟೆಸ್ಟ್ ವಿಕೆಟ್‌ಗಳ ವಿಶ್ವದಾಖಲೆಯಿದೆ. ಈ ದಾಖಲೆ ಮುರಿಯೋದು ಸುಲಭದ ಮಾತಲ್ಲ. ಆದರೆ ಈ ವಿಶ್ವದಾಖಲೆ ಮುರಿಯಲು ಭಾರತೀಯ ಬೌಲರ್ ಆರ್‌ ಅಶ್ವಿನ್ ಅವರಿಂದ ಸಾಧ್ಯ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.

ಅಭಿಮಾನಿಗಳ ನೆನೆದು ವಿಶೇಷ ಟ್ವೀಟ್ ಮಾಡಿದ ರೋಹಿತ್ ಶರ್ಮಾಅಭಿಮಾನಿಗಳ ನೆನೆದು ವಿಶೇಷ ಟ್ವೀಟ್ ಮಾಡಿದ ರೋಹಿತ್ ಶರ್ಮಾ

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧವಾಗಿರುವ ಭಾರತೀಯ ತಂಡದಲ್ಲಿ ಆರ್‌ ಅಶ್ವಿನ್ ಕೂಡ ಇದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಆಡಲಿದೆ.

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸದ್ಯ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 14 ಪಂದ್ಯಗಳಲ್ಲಿ 70 ವಿಕೆಟ್ ಪಡೆದಿದ್ದರೆ, ಅಶ್ವಿನ್ 13 ಪಂದ್ಯಗಳಲ್ಲಿ 67 ವಿಕೆಟ್ ಪಡೆದಿದ್ದಾರೆ. ಇನ್ನು ಫೈನಲ್‌ನಲ್ಲಿ 4 ವಿಕೆಟ್ ಪಡೆದರೆ ಕಮಿನ್ಸ್ ದಾಖಲೆ ಬದಿಗೆ ಸರಿಯಲಿದೆ.

ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್

'ನನಗನ್ನಿಸುತ್ತದೆ, ಅಶ್ವಿನ್ 42ರ ಹರೆಯದ ವರೆಗೂ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ನನ್ನ ಪ್ರಕಾರ ಅಶ್ವಿನ್‌ಗೆ ಮುಂದೆ ಬ್ಯಾಟಿಂಗ್ ಕಷ್ಟ ಅನ್ನಿಸಬಹುದು. ಆದರೆ ಬೌಲಿಂಗ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಕನಿಷ್ಠ 600 ವಿಕೆಟ್ ಆದರೂ ಅಶ್ವಿನ್ ಪಡೆಯುತ್ತಾರೆ ಎಂದು ನನಗನ್ನಿಸುತ್ತದೆ,' ಎಂದು ಹಾಗ್ ಹೇಳಿದ್ದಾರೆ. 34ರ ಹರೆಯದ ಅಶ್ವಿನ್ ಸದ್ಯ ಟೆಸ್ಟ್‌ನಲ್ಲಿ 409 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Friday, May 28, 2021, 0:21 [IST]
Other articles published on May 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X