ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಿಟ್‌ಮ್ಯಾನ್‌'ನಿಂದ ದೊಡ್ಡ ಶತಕ ನಿರೀಕ್ಷಿಸುತ್ತಿದ್ದೇನೆ': ಬ್ರಾಡ್ ಹಾಗ್

Brad Hogg expects Big hundred from Rohit Sharma in 2nd Test against England

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ನೀಡಿರಲಿಲ್ಲ ಅನ್ನುವುದಕ್ಕಿಂತ ವೈಫಲ್ಯ ಅನುಭವಿಸಿದ್ದರು ಅನ್ನೋದೇ ಸರಿ. ಆದರೆ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಾದರೂ ರೋಹಿತ್ ಮತ್ತೆ ಫಾರ್ಮ್‌ಗೆ ಮರಳಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಭಾರತ vs ಇಂಗ್ಲೆಂಡ್: 5 ಪಂದ್ಯಗಳ ಟಿ20ಐ ಸರಣಿಗೆ ಆಂಗ್ಲ ತಂಡ ಪ್ರಕಟಭಾರತ vs ಇಂಗ್ಲೆಂಡ್: 5 ಪಂದ್ಯಗಳ ಟಿ20ಐ ಸರಣಿಗೆ ಆಂಗ್ಲ ತಂಡ ಪ್ರಕಟ

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ದೊಡ್ಡ ಶತಕ ಅಂದರೆ ದ್ವಿಶತಕ ಅಥವಾ ತ್ರಿಶತಕ ಬಾರಿಸುವುದನ್ನು ನಿರೀಕ್ಷಿಸುತ್ತಿದ್ದಾರೆ. ಇದನ್ನು ಸ್ವತಃ ಬ್ರಾಡ್ ಹೇಳಿಕೊಂಡಿದ್ದಾರೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!

ದ್ವಿತೀಯ ಟೆಸ್ಟ್‌ಗೂ ಮುನ್ನ ಮಾತನಾಡಿರುವ ಬ್ರಾಡ್ ಹಾಗ್, 'ರೋಹಿತ್ ಅವರನ್ನು ತಂಡದಿಂದ ಕೈಬಿಡುವುದನ್ನು ನಾನು ಬಯಸಲಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ತ್ರಿಶತಕ ಬಾರಿಸಿದ್ದನ್ನು ಯೋಚಿಸಿ. ಆ ಮೂರು ಶತಕಗಳಲ್ಲಿ ಒಂದು ದ್ವಿಶತಕವಾಗಿತ್ತು. ರೋಹಿತ್ ಒಬ್ಬ ಅಸಾಧಾರಣ ಬ್ಯಾಟ್ಸ್‌ಮನ್‌, ದ್ವಿತೀಯ ಟೆಸ್ಟ್‌ನಲ್ಲಿ ಅವರಿಂದ ದೊಡ್ಡ ಶತಕ ನಿರೀಕ್ಷಿಸುತ್ತಿದ್ದೇನೆ,' ಎಂದಿದ್ದಾರೆ.

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಬಿಟ್ಟುಕೊಡಲು ಸಿದ್ಧವಾಯಿತೇ ವಿವೋ?ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಬಿಟ್ಟುಕೊಡಲು ಸಿದ್ಧವಾಯಿತೇ ವಿವೋ?

ಮೊದಲ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಶರ್ಮಾ ಕ್ರಮವಾಗಿ 6, 12 ರನ್ ಬಾರಿಸಿದ್ದರು. ದುರ್ಬಲ ಫಾರ್ಮ್ ತೋರಿಕೊಂಡಿದ್ದ ಶರ್ಮಾ ಅವರನ್ನು ದ್ವಿತೀಯ ಟೆಸ್ಟ್‌ನಲ್ಲಿ ತಂಡದಿಂದ ಕೈ ಬಿಡಬೇಕು ಅನ್ನುವ ಮಾತುಗಳು ಕೇಳಿಬಂದಿದ್ದವು. ಫೆಬ್ರವರಿ 13ರ 9.30 amನಿಂದ ಚೆನ್ನೈನಲ್ಲಿ ದ್ವಿತೀಯ ಟೆಸ್ಟ್ ಆರಂಭಗೊಳ್ಳಲಿದೆ.

Story first published: Friday, February 12, 2021, 23:32 [IST]
Other articles published on Feb 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X