ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!

Brad Hogg revealed his list of current ODI XI team, Jasprit Bumrah misses out

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಬ್ರಾಡ್ ಹಾಗ್ ಈಗ ಸಕ್ರಿಯರಾಗಿರುವ ವಿಶ್ವದ ಆಟಗಾರರನ್ನೆಲ್ಲಾ ಸೇರಿಸಿ ಒಂದು ಏಕದಿನ ತಂಡ ಪ್ರಕಟಿಸಿದ್ದಾರೆ. ತನ್ನ ಅಧಿಕೃತ ಯೂಟ್ಯೂಬ್ ಪೇಜ್‌ನಲ್ಲಿ ಹಾಗ್, ಫಾರ್ಮ್‌ನಲ್ಲಿದ್ದು ಹೆಚ್ಚು ಮನರಂಜಿಸುವ ಆಟಗಾರರ ಪಟ್ಟಿ ತಯಾರಿಸಿದ್ದಾರೆ. ಏಕದಿನ ತಂಡ ಹೆಕ್ಕಿ ತೆಗೆದಿದ್ದಾರೆ. ಈ ತಂಡದಲ್ಲಿ ಭಾರತದ 5 ಪ್ರಮುಖ ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಹಾಗ್ ಹೆಸರಿಸಿರುವ ಈ ಏಕದಿನ ತಂಡದಲ್ಲಿ ಕಾಣಿಸಿಕೊಂಡಿಲ್ಲ.

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

'ನಾನು ನಿಮಗೆ ಹೆಚ್ಚು ಮನರಂಜಿಸುವ ಏಕದಿನ ತಂಡ ನೀಡುತ್ತಿದ್ದೇನೆ. ಇದು ನನ್ನ 'ಈಗಿನ (ಸಕ್ರಿಯವಾಗಿರುವ ಆಟಗಾರರ) ಏಕದಿನ ತಂಡ. ನಾನು ಈ ವ್ಯಕ್ತಿಯನ್ನು ಮಲಗುವ ದೈತ್ಯ ಎಂದು ಕರೆಯುತ್ತೇನೆ. ಆತ ಮಧ್ಯದಲ್ಲಿ ಔಟಾದಾಗ, ಕೆಲವೊಮ್ಮೆ ಆತ ನಿದ್ರಿಸುತ್ತಿರುವಂತೆ ತೋರುತ್ತಾನೆ. ಈತ ಭಾರತದ ಬ್ಯಾಟ್ಸ್‌ಮನ್. ಇದು ರೋಹಿತ್ ಶರ್ಮಾ,' ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

'ಸುಶಾಂತ್ ಸಾವು ಧೋನೀನ ಮೂಕನನ್ನಾಗಿಸಿದೆ': ನಿರ್ಮಾಪಕ ಅರುಣ್ ಪಾಂಡೆ'ಸುಶಾಂತ್ ಸಾವು ಧೋನೀನ ಮೂಕನನ್ನಾಗಿಸಿದೆ': ನಿರ್ಮಾಪಕ ಅರುಣ್ ಪಾಂಡೆ

ಬ್ರಾಡ್ ಹಾಗ್ ಪ್ರಕಟಿಸಿರುವ ಈಗಿನ ಅಂತಾರಾಷ್ಟ್ರೀಯ ಏಕದಿನ ತಂಡ ಹೀಗಿದೆ ನೋಡಿ. ಅಂದ್ಹಾಗೆ ಈ ತಂಡಕ್ಕೆ ಭಾರತದ ಆಟಗಾರನನ್ನೇ ನಾಯಕನಾಗಿ ಹಾಗ್ ಆರಿಸಿದ್ದಾರೆ.

ಆರಂಭಿಕರಾಗಿ ಹಿಟ್‌ಮ್ಯಾನ್

ಆರಂಭಿಕರಾಗಿ ಹಿಟ್‌ಮ್ಯಾನ್

ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಇಳಿಯುತ್ತಾರೆ. ಆತ ಬೇರಾರೂ ಅಲ್ಲ; ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ ಮಾಡುವ, ಟಿಕ್‌ಟಾಕ್‌ನಲ್ಲಿ ಮಿಂಚುವ ಡೇವಿಡ್ ವಾರ್ನರ್,' ಎಂದು ಹಾಗ್ ಹೇಳಿದ್ದಾರೆ.

4ರಲ್ಲಿ ಬಾಬರ್ ಹೆಸರು

4ರಲ್ಲಿ ಬಾಬರ್ ಹೆಸರು

'3ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಬಂದರೆ, ಕಳೆದ ವರ್ಷದಿಂದೀಚೆಗೆ ಏಕದಿನದಲ್ಲೀತ ಅತ್ಯಧಿಕ ಕ್ಯಾಚ್ ಗಳಿಸಿದ್ದಾರೆ. ಈತನ ಹೆಸರಿನಲ್ಲಿ ಅತ್ಯಧಿಕ ರನ್ ದಾಖಲೆಯೂ ಇದೆ. ಈತ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ. 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಮ್ಯಾಜಿಕ್ ಮ್ಯಾನ್ ಬಾಬರ್ ಅಝಾಮ್‌ನನ್ನು ಆರಿಸುತ್ತೇನೆ,' ಎಂದು ಹಾಗ್ ತಿಳಿಸಿದ್ದಾರೆ.

7ರಲ್ಲಿ ರವೀಂದ್ರ ಜಡೇಜಾ

7ರಲ್ಲಿ ರವೀಂದ್ರ ಜಡೇಜಾ

ಹಾಗ್ ಹೆಸರಿಸಿರುವ ತಂಡದಲ್ಲಿ 5ನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇದ್ದಾರೆ. 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಹೆಸರಿದೆ. ಇದಲ್ಲದೆ ಭಾರತದ ಇಬ್ಬರು ಬೌಲರ್‌ಗಳೂ ಹಾಗ್ ಹೆಸರಿಸಿದ 'ಕರೆಂಟ್ ಒಡಿಐ ತಂಡದಲ್ಲಿದ್ದಾರೆ.

ಹಾಗ್ ಹೆಸರಿಸಿದ ಕರೆಂಟ್ ಒಡಿಐ XI

ಹಾಗ್ ಹೆಸರಿಸಿದ ಕರೆಂಟ್ ಒಡಿಐ XI

1. ರೋಹಿತ್ ಶರ್ಮಾ (ಭಾರತ), 2. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 3. ವಿರಾಟ್ ಕೊಹ್ಲಿ (ಭಾರತ-ನಾಯಕ), 4. ಬಾಬರ್ ಅಝಾಮ್ (ಪಾಕಿಸ್ತಾನ), 5. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 6. ಜೋಸ್ ಬಟ್ಲರ್ (ಇಂಗ್ಲೆಂಡ್-ವಿಕೆ), 7. ರವೀಂದ್ರ ಜಡೇಜಾ (ಭಾರತ), 8. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 9. ಲಾಕಿ ಫರ್ಗುಸನ್ (ನ್ಯೂಜಿಲೆಂಡ್), 10. ಮೊಹಮ್ಮದ್ ಶಮಿ (ಭಾರತ), 11. ಯುಜುವೇಂದ್ರ ಚಾಹಲ್ (ಭಾರತ).

Story first published: Monday, June 15, 2020, 22:18 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X