ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತ ಆಸ್ಟ್ರೇಲಿಯಾ ಟಿ20 ತಂಡದ ಭಾಗವಾಗಬೇಕು: ಐಪಿಎಲ್‌ನಲ್ಲಿ ಮಿಂಚಿದ ಆಟಗಾರನ ಬಗ್ಗೆ ಹಾಗ್ ಮಾತು

Brad Hogg says Tim David should be a part of Australias T20 squad

ಈ ಬಾರಿಯ ಐಪಿಎಲ್‌ನಲ್ಲಿ ಭಾರತ ಮಾತ್ರವಲ್ಲದೆ ಸಾಕಷ್ಟು ವಿದೇಶಿ ಯುವ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇದರಲ್ಲಿ ಕೆಲ ಆಟಗಾರರು ತಮ್ಮ ತಮ್ಮ ರಾಷ್ಟ್ರಗಳ ಪರವಾಗಿ ಇದೇ ಮೊದಲ ಬಾರಿಗೆ ಆಡುವ ಅವಕಾಶವನ್ನು ಕೂಡ ಗಳಿಸಿಕೊಂಡಿದ್ದಾರೆ. ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಐಪಿಎಲ್‌ನಲ್ಲಿ ಮಿಂಚಿದ ಆಸ್ಟ್ರೇಲಿಯಾದ ಒರ್ವ ಆಟಗಾರ ಆಸಿಸ್ ಟಿ20 ತಂಡದಲ್ಲಿ ಅವಕಾಶವನ್ನು ಪಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂದ ಹಾಗೆ ಟಿಮ್ ಡೇವಿಡ್ ಸಿಂಗಪೂರ್ ತಂಡದ ಆಟಗಾರನಾಗಿದ್ದಾರೆ. ಆದರೆ ಮೂಲತಃ ಆಸ್ಟ್ರೇಲಿಯಾದವರಾದ ಇವರು ನಂತರ ಆಸ್ಟ್ರೇಲಿಯಾ ತಂಡವನ್ನು ತೊರೆದು ಸಿಂಗಪೂರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಮುಂದಿನ ಟಿ20 ವಿಶ್ವಕಪ್‌ಗೆ ಟಿಮ್ ಡೇವಿಡ್ ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಮರಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆIPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆ

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಟಿಮ್

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಟಿಮ್

ಟಿಮ್ ಡೇವಿಡ್ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದು ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಟಿಮ್ ಡೇವಿಡ್ ಪ್ರದರ್ಶನ ಎಲ್ಲಾ ಅಭಿಮಾನಿಗಳನ್ನು ಮನರಂಜಿಸಿದೆ.

ಟಿಮ್ ಡೇವಿಡ್ ಸೇರ್ಪಡೆಗೆ ಆಸಿಸ್ ನಿಯಮ ಅಡ್ಡಿ

ಟಿಮ್ ಡೇವಿಡ್ ಸೇರ್ಪಡೆಗೆ ಆಸಿಸ್ ನಿಯಮ ಅಡ್ಡಿ

ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸೇರಿಕೊಳ್ಳಲು ನಿಯಮದ ಅಡ್ಡಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಬ್ರಾಡ್ ಹಾಗ್. ಆಸ್ಟ್ರೇಲಿಯಾದ ಪ್ರಥಮದರ್ಜೆ ತಂಡದಲಲ್ಇ ಒಪ್ಪಂದವನ್ನು ಹೊಂದಿರದ ಕಾರಣ ಆಸಿಸ್ ತಂಡದ ಪರವಾಗಿ ಆಡುವ ಅವಕಾಶವನ್ನು ಟಿಮ್ ಡೇವಿಡ್ ಹೊಂದಿಲ್ಲ. ಈ ನಿಯಮದಲ್ಲಿ ಬದಲಾವಣೆಯನ್ನು ತರಬೇಕಿದೆ ಎಂದಿದ್ದಾರೆ ಆಸಿಸ್ ಮಾಜಿ ಆಟಗಾರ.

ಆರನೇ ಕ್ರಮಾಂಕದಲ್ಲಿ ಶ್ರೇಷ್ಠ ಆಟಗಾರ

ಆರನೇ ಕ್ರಮಾಂಕದಲ್ಲಿ ಶ್ರೇಷ್ಠ ಆಟಗಾರ

ಇನ್ನು ಮುಂದುವರಿಸುದು ಮಾತನಾಡಿರುವ ಹಾಗ್ ಟಿಮ್ ಡೇವಿಡ್ ಅವರನ್ನು 6ನೇ ಕ್ರಮಾಂಕದಲ್ಲಿ ವಿಶ್ವದಲ್ಲೇ ಶ್ರೇಷ್ಠ ಆಟಗಾರ ಎಂದು ಬಣ್ಣಿಸಿದ್ದಾರೆ. "ಸ್ಟೀವ್ ಸ್ಮಿತ್ ಅವರನ್ನು ಕಳೆ ಕ್ರಮಾಂಕದಿಂದ ಮೇಲಿನ ಕ್ರಮಾಂಕಕ್ಕೆ ಭಡ್ತಿ ನೀಡಬೇಕು. ಸ್ಟೋಯ್ನಿಸ್ 5ನೇ ಕ್ರಮಾಂಕದಲ್ಲಿ ಆಡಬೇಕು. ಟಿಮ್ ಡೇವಿಡ್‌ಗೆ 6ನೇ ಕ್ರಮಾಂಕದಲ್ಲಿ ಅವಕಾಶ ನೀಡಬೇಕು. ಆತ ಆರನೇ ಕ್ರಮಾಂಕದಲ್ಲಿ ಶ್ರೇರ್ಷಠ ಆಟಗಾರ ಎನಿಸಿಕೊಳ್ಳುತ್ತಾರೆ. ಆತನ ಪ್ರತಿಭೆಯನ್ನು ಬಳಸಿಕೊಳ್ಳಬೇಕು" ಎಂದಿದ್ದಾರೆ ಬ್ರಾಡ್ ಹಾಗ್.

ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ವಿಶ್ವಕಪ್

ಆಸ್ಟ್ರೇಲಿಯಾದಲ್ಲಿ ನಡೆಯಲಿದೆ ವಿಶ್ವಕಪ್

ಇನ್ನು ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಗೆದ್ದಿರುವ ಆಸಿಸ್ ಪಡೆ ಹಾಲಿ ಚಾಂಪಿಯನ್ ಆಗಿದ್ದಯ ತವರಿನಲ್ಲೇ ಈ ಬಾರಿ ಚುಟುಕು ವಿಶ್ವಕಪ್ ನಡೆಯುತ್ತಿರುವ ಕಾರಣ ವಿಶ್ವಕಪ್‌ಅನ್ನು ತನ್ನಲ್ಲೇ ಉಳಿಸಿಕೊಳ್ಳುವ ಅದ್ಭುತ ಅವಕಾಶ ದೊರೆತಿದೆ. ಹೀಗಾಗಿ ಆಸಿಸ್ ಪಡೆ ಈ ಟೂರ್ನಿಗೆ ಯಾವ ರೀತಿಯಲ್ಲಿ ಸಿದ್ಧತೆ ನಡೆಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Saturday, June 4, 2022, 22:53 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X