ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾದ ನೂತನ ಕ್ಯಾಪ್ಟನ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆ

Dinesh karthik

ಟೀಂ ಇಂಡಿಯಾದ ನೂತನ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ಜುಲೈ 7ರಂದು ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆಯಲಿರುವ ಎರಡು ಟಿ20 ಅಭ್ಯಾಸ ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ನಾಯಕರಾಗಿದ್ದಾರೆ. ಇಂದು(ಜುಲೈ 1) ಮೊದಲ ಅಭ್ಯಾಸ ಪಂದ್ಯವು ಡರ್ಬಿಶೈರ್ ವಿರುದ್ಧ ನಡೆಯಲಿದೆ.

ಟೀಂ ಇಂಡಿಯಾದಲ್ಲಿ ಪ್ರತಿ ಸರಣಿಗೆ ಒಬ್ಬ ನಾಯಕನನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಲಭಿಸಿದಂತಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರಿಷಭ್ ಪಂತ್ ಭಾರತವನ್ನ ಮುನ್ನಡೆಸಿದ್ದರು. ಅದಾದ ಬಳಿಕ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು. ಆದ್ರೀಗ ಎರಡು ಟಿ20 ಅಭ್ಯಾಸ ಪಂದ್ಯಗಳಿಗೆ ಕಾರ್ತಿಕ್‌ಗೆ ಪಟ್ಟ ಕಟ್ಟಲಾಗಿದೆ.

ಪಾಂಡ್ಯಗೆ ರೆಸ್ಟ್‌, ಫಿನಿಷರ್‌ಗೆ ನಾಯಕತ್ವ ಪಟ್ಟ

ಪಾಂಡ್ಯಗೆ ರೆಸ್ಟ್‌, ಫಿನಿಷರ್‌ಗೆ ನಾಯಕತ್ವ ಪಟ್ಟ

ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯಗೆ ಎರಡು ಅಭ್ಯಾಸ ಪಂದ್ಯಗಳಿಂದ ಹೊರಗಿಡಲಾಗಿದೆ. ಹೀಗಾಗಿ ಜುಲೈ 1ರಂದು ನಡೆಯಲಿರುವ ಡರ್ಬಿಶೈರ್ ವಿರುದ್ಧ ಟಿ20 ಅಭ್ಯಾಸ ಪಂದ್ಯ ಮತ್ತು ಜುಲೈ 3ರಂದು ನಡೆಯಲಿರುವ ನಾರ್ಥಾಂಪ್ಟನ್‌ಶೈರ್ ಪಂದ್ಯಕ್ಕೆ ಫಿನಿಷರ್ ಕಾರ್ತಿಕ್‌ಗೆ ನಾಯಕನಾಗಿದ್ದಾರೆ.

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಅಭ್ಯಾಸ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭ?

ಭಾರತ ಮತ್ತು ಡರ್ಬಿಶೈರ್ ನಡುವಿನ ಟಿ20 ಪಂದ್ಯ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11.30ಕ್ಕೆ ಆರಂಭವಾಗಲಿದೆ. ಪಂದ್ಯವು ಯಾವುದೇ ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ಕೆಲವು ಯೂಟ್ಯೂಬ್‌ ಚಾನಲ್‌ಗಳು ಆಟದ ಲೈವ್ ಸ್ಟ್ರೀಮಿಂಗ್ ಅನ್ನು ಹೊಂದಿರುತ್ತವೆ. ಇದಾದ ಬಳಿಕ ಎರಡನೇ ಪಂದ್ಯವು ನಾರ್ಥಾಂಪ್ಟನ್‌ಶೈರ್ ವಿರುದ್ಧ ನಡೆಯಲಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗುತ್ತದೆ.

IND vs ENG 5ನೇ ಟೆಸ್ಟ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ 8ನೇ ಟೆಸ್ಟ್; ಹಳೇ 7 ಪಂದ್ಯಗಳ ಫಲಿತಾಂಶವೇನು?

ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ಕಾರ್ತಿಕ್‌ಗೆ ನಾಯಕತ್ವ ಪಟ್ಟ

ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ಕಾರ್ತಿಕ್‌ಗೆ ನಾಯಕತ್ವ ಪಟ್ಟ

ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯನ್ ಮುಗಿದೇ ಹೋಯ್ತು ಅಂದುಕೊಂಡವರೇ ಹೆಚ್ಚು. ಆದ್ರೆ ಐಪಿಎಲ್ 2022ರ ಸೀಸನ್‌ನಲ್ಲಿ ಆರ್‌ಸಿಬಿ ಪರ ಫಿನಿಷರ್ ಆಗಿ ಮಿಂಚಿದ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕಂಬ್ಯಾಕ್ ಮಾಡಿದರು. ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲೂ ಆಡಿದರು. ಆದ್ರೀಗ ಅಭ್ಯಾಸ ಪಂದ್ಯದಲ್ಲಿ ಭಾರತದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ದಿನೇಶ್ ಕಾರ್ತಿಕ್‌ಗೆ ಶುಭ ಹಾರೈಸಿದ ಆರ್‌ಸಿಬಿ ಫ್ರಾಂಚೈಸಿ

'' ಮಿಸ್ಟರ್ ಸುಪ್ರೀಂ ಫಿನಿಷರ್ ಟೀಂ ಇಂಡಿಯಾವನ್ನು ಡರ್ಬಿಶೈರ್ ಮತ್ತು ನಾರ್ಥಾಂಪ್ಟನ್‌ಶೈರ್ ವಿರುದ್ಧದ ಟಿ20 ಅಭ್ಯಾಸ ಪಂದ್ಯಗಳಲ್ಲಿ ಮುನ್ನಡೆಸುತ್ತಿದ್ದಾರೆ'' ಎಂದು ಆರ್‌ಸಿಬಿ ಫ್ರಾಂಚೈಸಿಯು ಟ್ವಿಟ್ಟರ್‌ನಲ್ಲಿ ಖುಷಿ ವ್ಯಕ್ತಪಡಿಸಿದೆ.

Cheteshwar Pujara ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ | *Cricket | OneIndia Kannada
ಉಭಯ ತಂಡಗಳ ಸ್ಕ್ವಾಡ್‌

ಉಭಯ ತಂಡಗಳ ಸ್ಕ್ವಾಡ್‌

ಭಾರತದ ಸ್ಕ್ವಾಡ್‌
ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಉಮ್ರಾನ್ ಮಲಿಕ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ವೆಂಕಟೇಶ್ ಅಯ್ಯರ್, ರುತುರಾಜ್ ಗಾಯಕ್ವಾಡ್ , ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್

ಡರ್ಬಿಶೈರ್ ಸ್ಕ್ವಾಡ್‌
ಶಾನ್ ಮಸೂದ್ (ನಾಯಕ), ಲೂಯಿಸ್ ರೀಸ್, ಹೇಡನ್ ಕೆರ್, ವೇಯ್ನ್ ಮ್ಯಾಡ್ಸೆನ್, ಲ್ಯೂಸ್ ಡು ಪ್ಲೂಯ್, ಬ್ರೂಕ್ ಗೆಸ್ಟ್‌ (ವಿಕೆಟ್ ಕೀಪರ್), ಮ್ಯಾಟಿ ಮೆಕ್ ಕೀರ್ನಾನ್, ಅಲೆಕ್ಸ್ ಹ್ಯೂಸ್, ಅಲೆಕ್ಸ್ ಥಾಮ್ಸನ್, ಮಾರ್ಕ್ ವ್ಯಾಟ್, ಜಾರ್ಜ್ ಸ್ಕ್ರಿಮ್‌ಶಾ, ಅನುಜ್ ದಾಲ್, ಸ್ಯಾಮ್ಯುಯೆಲ್ ಕಾನರ್ಸ್, ಬೆನ್ ಐಚಿಸನ್, ಹಿಲ್ಟನ್ ಕಾರ್ಟ್‌ರೈಟ್, ಹ್ಯಾರಿ ಕೇಮ್

Story first published: Saturday, July 2, 2022, 10:12 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X