ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ತಂಡದ ಲಿಮಿಟೆಡ್ ಓವರ್ ಫಾರ್ಮೆಟ್‌ ನಾಯಕನಾಗಿ ಜಾಸ್ ಬಟ್ಲರ್‌ ಆಯ್ಕೆ

Jos buttler

ಇಂಗ್ಲೆಂಡ್ ಕ್ರಿಕೆಟ್ ತಂಡದ ಲಿಮಿಟೆಡ್ ಓವರ್ ಫಾರ್ಮೆಟ್ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಇಯಾನ್ ಮಾರ್ಗನ್ ಮೂರು ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬಟ್ಲರ್‌ಗೆ ಪಟ್ಟ ಕಟ್ಟಿದೆ.

ಇಯಾನ್ ಮಾರ್ಗನ್ ನಿವೃತ್ತಿ ಘೋಷಿಸಬಹುದು ಎಂದು ಮೊದಲ ಸುದ್ದಿಯಾದ ಹಿನ್ನಲೆಯಲ್ಲೇ ನ್ಯೂಜಿಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯಕ್ಕೆ ಜಾಸ್ ಬಟ್ಲರ್ ಅಲಭ್ಯರಾಗಿದ್ದರು. ಆತನಿಗೆ ಏಕದಿನ ಮತ್ತು ಟಿ20 ತಂಡದ ನಾಯಕತ್ವ ವಹಿಸಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ವರದಿಯಂತೆ ಇಸಿಬಿ ಜಾಸ್ ಬಟ್ಲರ್‌ ಅನ್ನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕನಾಗಿ ಆಯ್ಕೆ ಮಾಡಿದೆ.

ಅದ್ಭುತ ಫಾರ್ಮ್‌ನಲ್ಲಿರುವ ಜಾಸ್ ಬಟ್ಲರ್

ಅದ್ಭುತ ಫಾರ್ಮ್‌ನಲ್ಲಿರುವ ಜಾಸ್ ಬಟ್ಲರ್

ಜಾಸ್ ಬಟ್ಲರ್ ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಶತಕದ ಮೇಲೆ ಶತಕ ಸಿಡಿಸಿರುವ ಬಟ್ಲರ್ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ನೆದರ್ಲೆಂಡ್ಸ್‌ ವಿರುದ್ಧದ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್‌ ಆಡಿದ್ದರು.

ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಜಾಸ್ ಬಟ್ಲರ್ 70 ಎಸೆತಗಳಲ್ಲಿ ಅಜೇಯ 162 ರನ್‌ಗಳನ್ನ ಸಿಡಿಸಿದ್ರು. 231.43 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಜಾಸ್ ಬಟ್ಲರ್ ಬ್ಯಾಟ್‌ನಿಂದ 7 ಬೌಂಡರಿ ಮತ್ತು 14 ಅಮೋಘ ಸಿಕ್ಸರ್‌ಗಳು ಸಿಡಿದಿವೆ.

ಇಯಾನ್ ಮಾರ್ಗನ್‌ ತಮ್ಮ ಮಾಸ್ಟರ್‌ಕ್ಲಾಸ್‌ನಿಂದ 2019 ವಿಶ್ವಕಪ್ ಗೆದ್ದಿದ್ದೇಗೆ; ಜೋಫ್ರಾ ಆರ್ಚರ್ ಬಹಿರಂಗ

ಐಪಿಎಲ್ 2022ರ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್

ಐಪಿಎಲ್ 2022ರ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್

ಐಪಿಎಲ್ 15ನೇ ಸೀಸನ್‌ನಲ್ಲಿ ಜಾಸ್ ಬಟ್ಲರ್ ಬರೋಬ್ಬರಿ 800ಕ್ಕೂ ಹೆಚ್ಚು ರನ್ ಕಲೆಹಾಕುವ ಮೂಲಕ ಅಮೋಘ ದಾಖಲೆ ಮಾಡಿದ್ದಾರೆ. ಒಟ್ಟಾರೆ 17 ಪಂದ್ಯಗಳಿಂದ ಬಟ್ಟರ್ 863 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಗೆದ್ದರು. ಬಟ್ಟರ್ ಇನ್ನಿಂಗ್ಸ್‌ನಲ್ಲಿ 4 ಶತಕ ಹಾಗೂ 4 ಅರ್ಧಶತಕ ದಾಖಲಿಸಿದ್ದರು. ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದರು.

ರನೌಟ್ ಕಾರಣಕ್ಕೆ ಉಗ್ರರೂಪ ತಾಳಿದ ಸ್ಟೀವ್ ಸ್ಮಿತ್: ಅನುಭವಿ ಆಟಗಾರನ ಕೋಪಕ್ಕೆ ದಂಗಾದ ಅಭಿಮಾನಿಗಳು!

ಭಾರತ ವಿರುದ್ಧವೇ ಮೊದಲ ಟಿ20 ಚಾಲೆಂಜ್

ಭಾರತ ವಿರುದ್ಧವೇ ಮೊದಲ ಟಿ20 ಚಾಲೆಂಜ್

ಜಾಸ್ ಬಟ್ಲರ್ ಇಂಗ್ಲೆಂಡ್ ನಾಯಕನಾಗಿ ಆಯ್ಕೆಗೊಂಡ ಬಳಿಕ ಮೊದಲ ಸವಾಲು ಟೀಂ ಇಂಡಿಯಾ ವಿರುದ್ಧ ಇರಲಿದೆ. ಜುಲೈ 7ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಲಿದೆ.

ಬಟ್ಲರ್ ನಾಯಕನಾಗಿ ಆಯ್ಕೆಗೊಂಡ ಬಳಿಕ ಮೊದಲ ಅಸೈನ್‌ಮೆಂಟ್ ಇದಾಗಿದ್ದು, ಸೌತಾಂಪ್ಟನ್‌ನಲ್ಲಿ ಜುಲೈ 7ರಂದು ನಡೆಯುವ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಆಡಲಿದೆ.

Story first published: Friday, July 1, 2022, 10:02 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X