ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Mithali Raj Retirement : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

Mithali Raj
Mithali Raj ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದೇಕೆ | *Sports | Oneindia Kannada

ಭಾರತದ ಮಹಿಳಾ ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್ ಎಂದೇ ಖ್ಯಾತಿ ಪಡೆದಿದ್ದ , ಸೂಪರ್‌ ಸ್ಟಾರ್ ಮಿಥಾಲಿ ರಾಜ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿರುವ ಮಿಥಾಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪಕ್ಕೂ ನಿವೃತ್ತಿ ಘೋಷಿಸಿದ್ದಾರೆ.

23 ವರ್ಷಗಳ ಅಮೋಘ ಕ್ರಿಕೆಟ್ ಕೆರಿಯರ್‌ಗೆ ಗುಡ್‌ಬೈ ಹೇಳಿರುವ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ ಫಾರ್ಮೆಟ್‌ನಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ರನ್ ಹಾಕಿರುವ ಬ್ಯಾಟರ್ ಆಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮಿಥಾಲಿ ರಾಜ್ ನಿವೃತ್ತಿ ಘೋಷಣೆ

ಕ್ರಿಕೆಟ್ ನಿವೃತ್ತಿಯ ಕುರಿತು ಪೋಸ್ಟ್ ಮಾಡಿರುವ ಮಿಥಾಲಿ "ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿರುವುದರಿಂದ ನನ್ನ ಆಟದ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

"ಎಲ್ಲಾ ಪ್ರಯಾಣಗಳಂತೆ, ಇದು ಕೂಡ ಕೊನೆಗೊಳ್ಳಬೇಕು. ಇಂದು ನಾನು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ದಿನ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ಭಾರತವನ್ನು ಗೆಲ್ಲಿಸಲು ಸಹಾಯ ಮಾಡುವ ಉದ್ದೇಶದಿಂದ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ತ್ರಿವರ್ಣ ಧ್ವಜವನ್ನು ಪ್ರತಿನಿಧಿಸಲು ನನಗೆ ನೀಡಿದ ಅವಕಾಶವನ್ನು ನಾನು ಯಾವಾಗಲೂ ಗೌರವಿಸುತ್ತೇನೆ." ಎಂದು ಮಿಥಾಲಿ ಪೋಸ್ಟ್ ಮಾಡಿದ್ದಾರೆ.

1999ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಿಥಾಲಿ

1999ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಿಥಾಲಿ

ಮಿಥಾಲಿ 1999ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಶ್ರೇಷ್ಠ ಭಾರತೀಯ ಮಹಿಳಾ ಬ್ಯಾಟರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು ಬಾರಿ 50 ಓವರ್‌ಗಳ ವಿಶ್ವಕಪ್ ಫೈನಲ್‌ಗೆ ತಂಡದ ನಾಯಕಿಯಾಗಿದ್ದರು ಮತ್ತು 232 ಪಂದ್ಯಗಳಲ್ಲಿ 7805 ರನ್‌ಗಳನ್ನು ಗಳಿಸಿದ್ದಾರೆ.

ಜೊತೆಗೆ 89 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 2,364 ರನ್ ಗಳಿಸಿದ್ದಾರೆ, ಆದರೆ ಕೇವಲ 12 ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಮಿಥಾಲಿ ಮೂರು ಫಾರ್ಮೆಟ್ ರೆಕಾರ್ಡ್ಸ್‌

ಮಿಥಾಲಿ ಮೂರು ಫಾರ್ಮೆಟ್ ರೆಕಾರ್ಡ್ಸ್‌

1999 ಜೂನ್ 26ರಂದು ಐರ್ಲೆಂಡ್ ಮಹಿಳಾ ತಂಡದ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆಟಗಾರ್ತಿಯಾಗಿ ನಿವೃತ್ತಿಯಾಗುತ್ತಾರೆಂದು ಸ್ವತಃ ಅವರೇ ಊಹಿಸಿರ್ಲಿಲ್ಲ. ಸ್ಥಿರ ಪ್ರದರ್ಶನದ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ 50.68ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಿಥಾಲಿ 7 ಶತಕ ಮತ್ತು 64 ಅರ್ಧಶತಕ ದಾಖಲಿಸಿದ್ದಾರೆ.

ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ 12 ಪಂದ್ಯಗಳಲ್ಲಿ 43.68ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಿಥಾಲಿ, 1 ಶತಕ 4 ಅರ್ಧಶತಕ ಸಹಿತ 699 ರನ್ ಕಲೆಹಾಕಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 89 ಪಂದ್ಯಗಳಲ್ಲಿ ಭಾರತದ ಜೆರ್ಸಿ ತೊಟ್ಟಿದ್ದಾರೆ. 37.52ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಮಹಿಳಾ ಬ್ಯಾಟರ್ ಅಜೇಯ 97ರನ್‌ಗಳ ವೈಯಕ್ತಿಕ ಗರಿಷ್ಠ ಸೇರಿದಂತೆ 2,364 ರನ್ ಸಿಡಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಮಹಿಳಾ ಕ್ರಿಕೆಟರ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಮಹಿಳಾ ಕ್ರಿಕೆಟರ್

ಏಕದಿನ, ಟಿ20, ಟೆಸ್ಟ್‌ಗಳಲ್ಲಿ ಕ್ರಮವಾಗಿ 7,805, 2364, 699 ರನ್‌ಗಳೊಂದಿಗೆ ಮಿಥಾಲಿ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಿಥಾಲಿ ಅವರ ಆಟದ ವೃತ್ತಿಜೀವನದ ಅಂತ್ಯದ ವೇಳೆಗೆ ಭಾರತಕ್ಕೆ ಅಷ್ಟೇ ಅಲ್ಲದೆ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ್ತಿಯಾಗಿದ್ದಾರೆ.

ನಿವೃತ್ತಿ ಬಳಿಕ ಕ್ರಿಕೆಟ್‌ಗೆ ಬೇರೆ ಮಾದರಿಯಲ್ಲಿ ಕೊಡುಗೆಯನ್ನು ನೀಡುವುದಾಗಿ ಮಿಥಾಲಿ ಭರವಸೆ ನೀಡಿದ್ದಾರೆ.


Story first published: Wednesday, June 8, 2022, 16:38 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X