ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!

Brendon McCullum announces BBL retirement with coaching intentions

ಸಿಡ್ನಿ, ಫೆಬ್ರವರಿ 4: ಆಸ್ಟ್ರೇಲಿಯಾದ ವೃತ್ತಿಪರ ಟಿ20 ಕ್ರಿಕೆಟ್ ಟೂರ್ನಿಯಾದ ಬಿಗ್ ಬ್ಯಾಷ್ ಲೀಗ್‌ (ಬಿಬಿಎಲ್‌)ನಿಂದ ನ್ಯೂಜಿಲ್ಯಾಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ನಿವೃತ್ತಿ ಘೋಷಿಸಿದ್ದಾರೆ. ಕೋಚಿಂಗ್‌ನತ್ತ ಗಮನ ಹರಿಸುವ ಇಂಗಿತವನ್ನು ಮೆಕಲಮ್ ತೋರಿಕೊಂಡಿದ್ದಾರೆ.

ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!

ನ್ಯೂಜಿಲ್ಯಾಂಡ್ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾಗಿದ್ದ ಬ್ರೆಂಡನ್, 2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಭಾನುವಾರ (ಫೆಬ್ರವರಿ 4) ಬಿಬಿಎಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಮೆಕಲಮ್ ಅವರ ಬ್ರಿಸ್ಬೇನ್ ಹೀಟ್ ತಂಡ 6 ವಿಕೆಟ್ ಗಲುವನ್ನಾಚರಿಸಿದ ಬಳಿಕ ಮೆಕಲಮ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

'2019ರಲ್ಲಿ ವಿಶ್ವದಾದ್ಯಂತ ನಡೆಯುವ ಬೇರೆಬೇರೆ ಟಿ20 ಕ್ರಿಕೆಟ್‌ನಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಅನಂತರ ನಾನು ತರಬೇತುದಾರ ವೃತ್ತಿಯತ್ತ ಗಮನ ಹರಿಸುವುದರಲ್ಲಿದ್ದೇನೆ' ಎಂದು ಬ್ರೆಂಡನ್ ಹೇಳಿದ್ದಾಗಿ ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಂತಿಮ ಬಿಬಿಎಲ್ ಪಂದ್ಯದಲ್ಲಿ 37ರ ಹರೆಯದ ಮೆಕಲಮ್ 39 ಎಸೆತಗಳಿಗೆ 51 ರನ್ ಚಚ್ಚಿದ್ದರು. (ಬಿಬಿಎಲ್‌ನಲ್ಲಿ ಮೆಕಲಮ್ ಅದ್ಭುತವಾಗಿ ಸಿಕ್ಸ್ ತಡೆದಿದ್ದನ್ನು ಮೇಲಿನ ಟ್ವೀಟ್ ವಿಡಿಯೋದಲ್ಲಿ ವೀಕ್ಷಿಸಿ).

Story first published: Monday, February 4, 2019, 15:42 [IST]
Other articles published on Feb 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X