ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಹೇಗೆ ಆಡಬೇಕೆಂಬ ಬ್ಲೂಪ್ರಿಂಟ್ ಇಲ್ಲದ ತಂಡ: ಮೆಕ್ಕಲಮ್

Brendon McCullum Points Out Biggest Difference Between Csk, Rcb

ಐಪಿಎಲ್ ವಿಶ್ವದ ಪ್ರಖ್ಯಾತ ಕ್ರಿಕೆಟ್ ಟೂರ್ನಿ. ವಿಶ್ವಾದ್ಯಂತ ಈ ಟೂರ್ನಿಗೆ ತನ್ನದೇ ಆದ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಎಲ್ಲಾ ತಂಡಗಳೂ ತನ್ನದೇ ಆದ ಅಭಿಮಾನಿವರ್ಗಗಳನ್ನು ಹೊಂದಿದೆ. ಪ್ರತೀ ತಂಡವೂ ಅದರದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.

ಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರುಐಪಿಎಲ್ ರದ್ದಾದರೆ ವಿಶ್ವಕಪ್‌ಗೆ ಸ್ಥಾನವನ್ನು ಗಳಿಸೋದೇ ಇಲ್ಲ ಈ 4 ಆಟಗಾರರು

ಐಪಿಎಲ್‌ನ ಎರಡು ಪ್ರಮುಖ ತಂಡಗಳ ನಡುವಿನ ವ್ಯತ್ಯಾಸವನ್ನು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಮ್ ಹೇಳಿದ್ದಾರೆ. ಎರಡೂ ತಂಡಗಳು ಬಲಿಷ್ಟವಾಗಿದ್ದರೂ ಎರಡೂ ತಂಡಗಳಲ್ಲಿ ವ್ಯತ್ಯಾಸಗಳು ಇವೆ. ಅದನ್ನು ಮೆಕ್ಕಲಮ್ ಹೇಳಿದ್ದಾರೆ.

ಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳುಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳು

ಮೆಕ್ಕಲಮ್ ಹೇಳಿದ ವ್ಯತ್ಯಾಸವೇನು ಅನ್ನೋದಕ್ಕೆ ಮುಂದೆ ಓದಿ.

ಎರಡೂ ತಂಡಗಳನ್ನು ಪ್ರತಿನಿಧಿಸಿದ್ದಾರೆ ಮೆಕ್ಕಲಮ್

ಎರಡೂ ತಂಡಗಳನ್ನು ಪ್ರತಿನಿಧಿಸಿದ್ದಾರೆ ಮೆಕ್ಕಲಮ್

ಬ್ರೆಂಡನ್ ಮೆಕ್ಕಲಮ್ ಐಪಿಎಲ್‌ನಲ್ಲಿ ಎರಡೂ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಬೆಂಗಳೂರು ತಂಡದ ಸದಸ್ಯರಾಗಿದ್ದರು ಮೆಕ್ಕಲಮ್. ಹೀಗಾಗಿ ತಂಡದ ಒಳಗಿನ ವಾತಾವರಣ ಮತ್ತು ಆಟದ ರಣತಂತ್ರದ ಬಗ್ಗೆ ಮೆಕ್ಕಲಮ್‌ಗೆ ಸಾಕಷ್ಟು ಅರಿವಿದೆ.

ಹೇಗೆ ಆಡಬೇಕೆಂಬ ಬ್ಲೂಪ್ರಿಂಟ್ ಇಲ್ಲ

ಹೇಗೆ ಆಡಬೇಕೆಂಬ ಬ್ಲೂಪ್ರಿಂಟ್ ಇಲ್ಲ

ಆರ್‌ಸಿಬಿ ತಂಡಕ್ಕೆ ಯಾವ ರೀತಿ ಎದುರಾಳಿಯ ವಿರುದ್ಧ ರಣತಂತ್ರವನ್ನು ರಚಿಸಿ ಮುನ್ನುಗ್ಗಬೇಕು ಎಂಬ ನೀಲನಕಾಶೆಯೇ ಇಲ್ಲ ಎಂದಿದ್ದಾರೆ ಬ್ರೆಂಡನ್ ಮೆಕ್ಕಲಮ್. ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರರಿದ್ದರೂ ಬ್ಲೂಪ್ರಿಂಟ್ ಇಲ್ಲದೆ ಎಡವುತ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

'ಇರುವ ತಂಡವನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದೆ'

'ಇರುವ ತಂಡವನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದೆ'

ಆದರೆ ಚೆನ್ನೈ ತಂಡ ಹಾಗಿಲ್ಲ. ಚೆನ್ನೈ ತಂಡ ತನ್ನಲ್ಲಿರುವ ಸಂಪನ್ಮೂಲವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ವೆನ್ನೈ ಮತ್ತು ಆರ್‌ಸಿಬಿ ತಂಡದ ಮಧ್ಯೆ ಇರುವ ಪ್ರಮುಖ ವ್ಯತ್ಯಾಸ ಎಂದು ಮೆಕ್ಕಲಮ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎರಡೂ ತಂಡಕ್ಕೂ ನಾಯಕರೇ ಬಲ

ಎರಡೂ ತಂಡಕ್ಕೂ ನಾಯಕರೇ ಬಲ

ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂ ಎಸ್‌ ಧೋನಿಯ ಬಲ ಇದೆ. ಚಾಣಾಕ್ಷತನದಿಂದ ಮುನ್ನಡೆಸುವ ಧೋನಿ ಚೆನ್ನೈ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಯಶಸ್ವಿ ನಾಯಕ ಎನಿಸಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮಾತ್ರ ಮುಗ್ಗರಿಸುತ್ತಲೇ ಇದ್ದಾರೆ

ಧೋನಿಯನ್ನು ಮೆಚ್ಚಿದ್ದ ಅಲ್ಬಿ ಮಾರ್ಕೆಲ್

ಧೋನಿಯನ್ನು ಮೆಚ್ಚಿದ್ದ ಅಲ್ಬಿ ಮಾರ್ಕೆಲ್

ಚೆನ್ನೈ ತಂಡವನ್ನು ಪ್ರತಿನಿಧಿಸಿರುವ ಮತ್ತೋರ್ವ ಆಟಗಾರ ಅಲ್ಬಿ ಮಾರ್ಕೆಲ್ ಇತ್ತೀಚೆಗಷ್ಟೇ ಧೋನಿ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಧೋನಿ ನಾಯಕತ್ಬದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಧೋನಿಗೆ ತನ್ನ ತಂಡದ ಆಟಗಾರರಿಂದ ಅತ್ಯುತ್ತಮ ಆಟ ಪಡೆಯುವ ಕಲೆ ಗೊತ್ತಿದೆ ಎಂದು ಹೇಳಿದ್ದರು.

10ರಲ್ಲಿ 8 ಬಾರಿ ಫೈನಲ್‌ಗೆ

10ರಲ್ಲಿ 8 ಬಾರಿ ಫೈನಲ್‌ಗೆ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಪಾಲ್ಗೊಂಡ ಕಳೆದ ಹತ್ತು ಟೂರ್ನಿಗಳಲ್ಲಿ 8 ಬಾರಿ ಫೈನಲ್‌ಗೆ ಏರುವಲ್ಲಿ ಯಶಸ್ವಿಯಾಗಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಎಷ್ಟು ಸಮರ್ಥವಾಗಿದೆ ಎಂಬುದಕ್ಕೆ ಪ್ರಮುಖ ನಿದರ್ಶನವಾಗಿದೆ.

Story first published: Tuesday, March 24, 2020, 14:40 [IST]
Other articles published on Mar 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X