ವಿರಾಟ್ ಕೊಹ್ಲಿ ಮತ್ತು ರಿಕಿ ಪಾಂಟಿಂಗ್ ಮಧ್ಯೆ ಸಾಮ್ಯತೆಯಿದೆ: ಬ್ರೆಟ್ ಲೀ

ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಆಸಿಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ ಹೋಲಿಕೆ ಮಾಡಿದ್ದಾರೆ. ಈ ಇಬ್ಬರಲ್ಲೂ ಸಾಕಷ್ಟು ಸಾಮ್ಯತೆಯಿದ ಎಂದು ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗ ಎಂದು ಖ್ಯಾತರಾಗಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎಂಬ ಖ್ಯಾತಿ ರಿಕಿ ಪಾಂಟಿಂಗ್‌ಗೆ ಇದೆ. ರಿಕಿ ಪಾಂಟಿಂಗ್ ತಮ್ಮ ತಂಡವನ್ನು ಎರಡು ಬಾರಿ ಏಕದಿನ ವಿಶ್ವಕಪ್‌ನಲ್ಲಿ ಗೆಲ್ಲಿಸಿದ್ದಾರೆ. ಇಬ್ಬರೂ ಕೂಡ ಗೆಲುವಿನ ಮನಸ್ಥಿತಿಯನ್ನು ಹೊಂದಿದ ಆಟಗಾರರು. ಇಬ್ಬರೂ ಕ್ರಿಕೆಟಿಗರು ಸೋಲನ್ನು ಇಷ್ಟಪಡುವುದಿಲ್ಲ ಎಂದು ಬ್ರೆಟ್ ಲೀ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್‌ಗಿದ್ದ ದೊಡ್ಡ ವೀಕ್‌ನೆಸ್ ಹೇಳಿದ ಮಾಜಿ ನಾಯಕ ಕಪಿಲ್‌ದೇವ್

ಪ್ರತಿಯೊಬ್ಬರೂ ತಮ್ಮದೇ ಆದ ನಾಯಕತ್ವದ ಶೈಲಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರಿಕಿ ಪಾಂಟಿಂಗ್ ನಾಯಕತ್ವವನ್ನು ನೋಡಿದಾಗ ನಿಮಗೆ ಸಾಮ್ಯತೆಗಳು ಕಂಡುಬರುತ್ತದೆ. ಇಬ್ಬರೂ ಆಕ್ರಮಣಶೀಲ ನಾಯಕತ್ವವನ್ನು ಹೊಂದಿದ್ದಾರೆ. ಆದರೆ ಅದು ಅನಗತ್ಯವಾಗಿರುವುದಿಲ್ಲ ಎಂದು ಬ್ರೆಟ್ ಲೀ ಅಭಿಪ್ರಾಯಟ್ಟಿದ್ದಾರೆ.

ಪ್ರತಿ ತಂಡದಲ್ಲೂ ನಾಯಕತ್ವ ಸಂದರ್ಭಗಳು ಕಳೆದಂತೆ ವೃದ್ಧಿಸುತ್ತಾ ಹೋಗುತ್ತದೆ. ಆದರೆ ನಾನು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಹೆಚ್ಚಾಗಿ ಆನಂದಿಸುತ್ತೇನೆ. ಯಾಕೆಂದರೆ ಅಲ್ಲಿ ನಿಜವಾದ ಬದ್ಧತೆ ವ್ಯಕ್ತವಾಗುತ್ತದೆ. ತನ್ನ ತಂಡಕ್ಕೆ ಆತ ನಿಜವಾಗಿಯೂ ಒಳ್ಳೆಯದನ್ನು ಮಾಡಲು ಬಯಸುತ್ತಾನೆ ಎಂದು ಬ್ರೆಟ್ ಲೀ ಹೇಳಿದ್ದಾರೆ.

ವಿಶ್ವಕಪ್ ಗೆಲುವಿನ ನಂತರ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಗೌರವಿಸಿದ ಕಾರಣ ಹೇಳಿದ ಕೊಹ್ಲಿ

ಇನ್ನು ಇದೇ ಸಂದರ್ಣದಲ್ಲಿ ಟೀಮ್ ಇಂಡಿಯಾದ ಇಬ್ಬರು ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ಭಿನ್ನ ನಾಯಕರು ಎಂದಿದ್ದಾರೆ. ಅವರು ಭಿನ್ನವಾದ, ಹೆಚ್ಚು ವಿಶಾಲವಾದ ಶೈಲಿಯನ್ನು ಹೊಂದಿದ್ದಾರೆ. ಆದರೆ ಅದು ಕೂಡ ಹೆಚ್ಚು ಪರಿಣಾಮಕಾರಿಯಾಗಿತ್ತು ಎಂದಿದ್ದಾರೆ ಬ್ರೆಟ್ ಲೀ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 29, 2020, 19:59 [IST]
Other articles published on Jul 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X