ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿ

Brett Lee Has Doubts Regarding Icc’s New Recommended Rule

ಕೊರೊನಾ ವೈರಸ್ ಕಾರಣದಿಂದಾಗಿ ಐಸಿಸಿ ತನ್ನ ನಿಯಮದಲ್ಲಿ ಒಂದಷ್ಟು ಬದಲಾವಣೆ ತರಲು ಉದ್ದೇಶಿಸಿದೆ. ಅದರಲ್ಲಿ ಪ್ರಮುಖವಾಗಿದ್ದು ಎಂಜಲಿನ ಬಳಕೆ ನಿಷೇಧ. ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್‌ಲೀ ಪ್ರತಿಕ್ರಿಯಿಸಿದ್ದು, ಇದರ ಪಾಲನೆ ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.

ಬೌಲರ್‌ಗಳು ಚೆಂಡಿಗೆ ಹೊಳಪು ನೀಡಲು ಎಂಜಲಿನ ಬಳಕೆ ಮಾಡಿ ಉಜ್ಜುವುದು ಸಾಮಾನ್ಯ. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಎಂಜಲಿನ ಬಳಕೆಗೆ ನಿಷೇಧ ಹೇರಲು ಈಗಾಗಲೆ ಶಿಫಾರಸು ಮಾಡಲಾಗಿದೆ. ಇದಕ್ಕೆ ಹಾಲಿ ಹಾಗೂ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್ ಆಡಲು ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ತಯಾರಿ ಬೇಕು: ಐಸಿಸಿಟೆಸ್ಟ್ ಕ್ರಿಕೆಟ್ ಆಡಲು ಬೌಲರ್‌ಗಳಿಗೆ ಕನಿಷ್ಠ 2 ತಿಂಗಳ ತಯಾರಿ ಬೇಕು: ಐಸಿಸಿ

ನಿಮ್ಮ ಸಂಪೂರ್ಣ ವೃತ್ತಿ ಜೀವನದಲ್ಲಿ ಅಂದ್ರೆ ಕಳೆದ 8-10 ವರ್ಷಗಳಲ್ಲಿ ಕೈಗೆ ಎಂಜಲನ್ನು ಹಾಕಿ ಚೆಂಡನ್ನು ಉಜ್ಜಿ ಅಭ್ಯಾಸವಾಗಿರುತ್ತದೆ. ಹಾಗಾಗಿ ಅಂತದ್ದನ್ನು ಹಠಾತ್ ಆಗಿ ಬದಲಾಯಿಸುವುದು ಸುಲಭವಲ್ಲ. ಅದಕ್ಕಾಗಿ ಒಂದಷ್ಟು ಸಮಯ ನೀಡಬೇಕಾಗುತ್ತದೆ. ಅಥವಾ ಐಸಿಸಿ ಈ ನಿಯಮದಲ್ಲಿ ಒಂದಷ್ಟು ಸಮಯಗಳ ಕಾಲ ಮೃದು ಧೋರಣೆಯನ್ನು ಹೊಂದಬೇಕು ಎಂದು ಬ್ರೇಟ್‌ ಲೀ ಹೇಳಿದ್ದಾರೆ.

ಇದೊಂದು ಅದ್ಭುತವಾದ ನಿರ್ಧಾರ ಎಂದು ಬ್ರೇಟ್‌ ಲೀ ಹೇಳಿದ್ದಾರೆ. ಆದರೆ ಅದನ್ನು ಪಾಲನೆ ಮಾಡುವುದು ಬೌಲರ್‌ಗಳ ಪಾಲಿಗೆ ಕಠಿಣವಾದ ವಿಚಾರ. ಯಾಕೆಂದರೆ ದಶಕಗಳ ಕಾಲ ಆಟಗಾರರು ಅದನ್ನೇ ಮಾಡಿಕೊಂಡು ಬಂದಿರುತ್ತಾರೆ ಎಂದು ಲೀ ಸ್ಟಾರ್‌ ಸ್ಪೋರ್ಟ್ಸ್ ಜೊತೆಗಿನ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್ವಿಶ್ವಕಪ್‌ ನಂತರ ಐಪಿಎಲ್ ವಿಶ್ವದ ಬೆಸ್ಟ್ ಟೂರ್ನಿ ಎಂದ ಜೋಸ್ ಬಟ್ಲರ್

ಐಸಿಸಿ ಬದಲಾವಣೆ ತರಲು ಬಯಸಿರುವ ಈ ನಿರ್ಧಾರದ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಭಾರತದ ಮಾಜಿ ಆಟಗಾರ ದೀಪ್ ದಾಸ್ ಗುಪ್ತಾ "ಈ ನಿಷೇಧವನ್ನು ಜಾರಿಗೆ ತಂದರೆ ಬೌಲರ್‌ಗಳ ಪಾಲಿಗೆ ಇದ್ದ ಪ್ರಮುಖ ಅಸ್ತ್ರವೊಂದನ್ನು ಕಸಿದುಕೊಂಡಂತೆ ಎಂದು ಹೇಳಿದ್ದರು.

Story first published: Sunday, May 24, 2020, 9:19 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X